ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಹಂತಕರ ಸುಳಿವು ಕೊಟ್ಟವರಿಗೆ 10 ಲಕ್ಷ ಬಹುಮಾನ ಘೋಷಿಸಿದ ಎನ್ಐಎ

ಮಂಗಳೂರು : ಕರಾವಳಿಯನ್ನೇ ಬೆಚ್ಚಿ ಬೀಳಿಸಿದ್ದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ (Praveen Nettaru murder case Update) ತನಿಖೆಗೆ ಇಳಿದಿರುವ ಎನ್ಐಎ ಅಧಿಕಾರಿಗಳು ಇದೀಗ ತಲೆ ಮರೆಯಿಸಿಕೊಂಡಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇಬ್ಬರು ಆರೋಪಿಗಳ ಸುಳಿವು ಕೊಟ್ಟವರಿಗೆ ನಗದು ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳಾದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಡಾಜೆ ಮೊಹಮ್ಮದ್ ಷರೀಷ್ (53 ವರ್ಷ) ಹಾಗೂ ನೆಕ್ಕಿಲಾಡಿಯ ಅಗ್ನಾಡಿ ಹೌಸ್ ನ ನಿವಾಸಿ ಮಸೂದ್ ಕೆ.ಎಂ.(40 ವರ್ಷ) ಎಂಬ ಇಬ್ಬರು ಆರೋಪಿಗಳು ತಲೆ ಮರೆಯಿಸಿಕೊಂಡಿದ್ದಾರೆ. ಹೀಗಾಗಿ ಇಬ್ಬರ ಸುಳಿವು ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಿದ್ದಾರೆ. ಒಬ್ಬ ಆರೋಪಿಯನ್ನು ಪತ್ತೆ ಹಚ್ಚಿದ್ದರೂ ಕೂಡ 5 ಲಕ್ಷ ರೂಪಾಯಿ ಬಹುಮಾನ ದೊರೆಯಲಿದೆ.

ಈ ಹಿಂದೆ ನಾಲ್ವರು ಪಿಎಫ್ಐ ಸದಸ್ಯರನ್ನು ಹುಡುಕಿಕೊಟ್ಟವರಿಗೆ ನಗದು ಬಹುಮಾನ ನೀಡುವುದಾಗಿ ಎನ್ಐಎ ಘೋಷಣೆ ಮಾಡಿತ್ತು. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳಾದ ಬೆಳ್ಳಾರೆಯ ಮೊಹ್ಮದ್ ಮುಸ್ತಫ ಅಲಿಯಾಸ್ ಮುಸ್ತಫ ಪೈಚಾರು, ಎಂ.ಎಚ್.ತುಫೈಲ್ ಅವರನ್ನು ಹುಡುಕಿಕೊಟ್ಟವರಿಗೆ ತಲಾ 5 ಲಕ್ಷ ರೂಪಾಯಿ ಹಾಗೂ ಉಮ್ಮರ್ ಫಾರೂಕ್ ಅಲಿಯಾಸ್ ಉಮ್ಮರ್, ಬೆಳ್ಳಾರೆಯ ಅಬೂಬಕ್ಕರ್ ಸಿದ್ದೀಕ್ ಅಲಿಯಾಸ್ ಪೈಂಟರ್ ಸಿದ್ದಿಕ್ ಅವರ ಸುಳಿವು ನೀಡಿದವರಿಗೆ ತಲಾ 2 ಲಕ್ಷ ರೂಪಾಯಿ ಬಹುಮಾನವನ್ನು ಎನ್ಐಎ ಘೋಷಣೆ ಮಾಡಿತ್ತು.

ಇದನ್ನೂ ಓದಿ : Thieves arrested: ಬ್ಯಾಂಕ್‌ ದರೋಡೆ ಮಾಡಲು ಬಂದಿದ್ದ ಮೂವರು ದರೋಡೆಕೋರರು ಅರೆಸ್ಟ್‌

ಇದನ್ನೂ ಓದಿ : Hyderabad Fire accident: ಹೈದರಾಬಾದ್‌ ನ ಪೊಲೀಸ್‌ ಠಾಣೆ ಕಟ್ಟಡದಲ್ಲಿ ಭಾರೀ ಬೆಂಕಿ ಅವಘಡ

ಇದನ್ನೂ ಓದಿ : Nagpura Railway accident: ಇಯರ್‌ ಫೋನ್‌ ಹಾಕಿಕೊಂಡು ರೈಲ್ವೇ ಹಳಿ ದಾಟುತ್ತಿದ್ದ ಇಂಜಿನಿಯರಿಂಗ್‌ ವಿದ್ಯಾರ್ಥಿನಿಗೆ ರೈಲು ಢಿಕ್ಕಿ: ಸಾವು

ಇದೀಗ ಮತ್ತಿಬ್ಬರು ಆರೋಪಿಗಳ ಹುಡುಕಾಟಕ್ಕೆ ಸಹಕಾರ ನೀಡುವಂತೆ ಸಾರ್ವಜನಿಕರಲ್ಲಿ ಎನ್ಐಎ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ. ಇಬ್ಬರ ಸುಳಿವು ದೊರೆತಲ್ಲಿ ಬೆಂಗಳೂರಿನ ದೊಮ್ಮಲೂರಿನಲ್ಲಿರುವ ಎನ್ಐಎ ಎಸ್ ಪಿ ಅವರಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ. ದೂರವಾಣಿ ಸಂಖ್ಯೆ :080-29510900, 8904241100 ಇಮೇಲ್ : [email protected]@gov.in ವಿಳಾಸ : ಪೊಲೀಸ್ ಅಧೀಕ್ಷಕರು, ಎನ್ಐಎ ( ರಾಷ್ಟ್ರೀಯ ತನಿಖಾ ದಳ), ೮ನೇ ಮಹಡಿ, ಸರ್.ಎಂ.ವಿಶ್ವೇಶ್ವರಯ್ಯ ಕೇಂದ್ರೀಯ ಸದನ, ದೊಮ್ಮಲೂರು ಬೆಂಗಳೂರು : 5600071 ಈ ವಿಳಾಸವನ್ನು ಸಂಪರ್ಕಿಸಬಹುದಾಗಿದೆ.

Praveen Nettaru murder case Update : NIA has announced a reward of 10 lakhs for those who give information about the killers

Comments are closed.