ಸೋಮವಾರ, ಏಪ್ರಿಲ್ 28, 2025
HomeCrimeವರದಕ್ಷಿಣೆ ಆಸೆಗೆ ಮೂರು ತಿಂಗಳ ಗರ್ಭಿಣಿ ಪತ್ನಿಯನ್ನೇ ಬಲಿಕೊಟ್ಟ ಪತಿ

ವರದಕ್ಷಿಣೆ ಆಸೆಗೆ ಮೂರು ತಿಂಗಳ ಗರ್ಭಿಣಿ ಪತ್ನಿಯನ್ನೇ ಬಲಿಕೊಟ್ಟ ಪತಿ

- Advertisement -

ಹಾಸನ : ಕೆಲವು ವರ್ಷಗಳ ಹಿಂದೆ ವರದಕ್ಷಿಣೆ ಆಸೆಗೆ ಹೆತ್ತವರನ್ನು ಬಿಟ್ಟು ಗಂಡ ಹಾಗೂ ಗಂಡನ ಮನೆಯವರೇ ಎಲ್ಲಾ ಎಂದು ನಂಬಿ ಬಂದ ಹೆಣ್ಣು ಮಗಳನ್ನು ಕಿರುಕುಳ ಕೊಟ್ಟು ಕೊಲೆ (Pregnant Woman Murder Case) ಮಾಡುತ್ತಿದ್ದರು. ಆದರೆ ಜಗತ್ತು ಇಷ್ಟೊಂದು ಮುಂದುವರೆದಿದ್ದರೂ ಇಂತಹ ಘಟನೆಗಳು ಇನ್ನೂ ನಡೆಯುತ್ತಿದೆ. ಅದಕ್ಕೆ ಸಾಕ್ಷಿ ಎನ್ನುವಂತೆ ವರದಕ್ಷಿಣೆ ಕಿರುಕುಳಕ್ಕೆ ಮೂರು ತಿಂಗಳ ಗರ್ಭಿಣಿ ಬಲಿಯಾಗಿರುವ ಘಟನೆ ಸಂಭವಿಸಿದೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಸಮುದ್ರವಳ್ಳಿ ಬಳಿ ರೋಹಿಣಿ 23ವರ್ಷ ಮೃತ ಪಟ್ಟ ಗರ್ಭಿಣಿ ಎಂದು ಗುರುತಿಸಲಾಗಿದೆ. ಆಕೆಯ ಪೋಷಕರು ತಮ್ಮ ಮಗಳ ಸಾವಿಗೆ ಆಕೆಯ ಪತಿಯೇ ಕಾರಣ ಎಂದು ಆರೋಪಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೈಸೂರು ಜಿಲ್ಲೆಯ ಕೆ.ಆರ್‌.ನಗರ ತಾಲೂಕಿನ ಗ್ರಾಮದ ಕುಮಾರ್‌ ಮತ್ತು ಸುಧಾ ದಂಪತಿಗಳ ಮಗಳು ರೋಹಿಣಿಯನ್ನು ಅರಕಲಗೂಡು ತಾಲೂಕಿನ ಕಲ್ಲಹಳ್ಳಿ ಗ್ರಾಮದ ಸುಮಂತ್‌ ಎಂಬಾತನಿಗೆ ಮೇ 28ರಂದು ಕೇರಾಳಪುರದ ಕಲ್ಯಾಣಮಂಟಪದಲ್ಲಿ ಬಹಳ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಮದುವೆ ವೇಳೆ ಸುಮಂತ್‌ಗೆ 250ಗ್ರಾಂ ಚಿನ್ನ ಮತ್ತು 20 ಲಕ್ಷ ರೂ ಖರ್ಚು ಮಾಡಿ ಮದುವೆ ಮಾಡಿಕೊಟ್ಟಿದ್ದಾರೆ.

ಸುಮಂತ್‌ನ ತಂದೆ ಮೃತಪಟ್ಟಿದ್ದರಿಂದ, ತಾಯಿ ಮೀನಾಕ್ಷಿ ಜೊತೆ ಆತ ವಾಸವಾಗಿದ್ದನು. ಮದುವೆಯಾದ ಎರಡು ತಿಂಗಳವರೆಗೂ ದಂಪತಿಗಳು ಅನ್ಯೋನ್ಯವಾಗಿದ್ದು, ಎರಡು ತಿಂಗಳು ಕಳೆದ ನಂತರ ಸುಮಂತ್‌ ತಾಯಿ ಕೂಡ ವರದಕ್ಷಿಣೆ ಹಣ ತರುವಂತೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾರೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಸುಮಂತನ ಅಕ್ಕ ಮತ್ತು ಭಾವ ಕೂಡ ಮನೆಗೆ ಬಂದಾಗೆಲ್ಲಾ ಚುಚ್ಚು ಮಾತನಾಡುತ್ತಿದ್ದರು ಎಂದು ದೂರಿದ್ದಾರೆ.

ಇಷ್ಟೆಲ್ಲಾ ನಡೆದರೂ ರೋಹಿಣಿ ತನ್ನ ತಂದೆ ತಾಯಿಗೆ ವಿಷಯವನ್ನು ತಿಳಿಸಿರಲಿಲ್ಲ. ಆದರೆ ತನ್ನ ಸಹೋದರನೀಓಗೆ ಮಸೇಜ್‌ ಮಾಡಿ ಪತಿ ಸುಮಂತ್‌ ಹಾಗೂ ಆತನ ಮನೆಯವರು ನೀಡಿದ ಕಿರುಕುಳದ ಬಗ್ಗೆ ಹೇಳಿಕೊಳ್ಳುತ್ತಿದ್ದು, ಆಕೆಗೆ ಯಾವುದಾದರೂ ಕರೆ ಬಂದಾಗ ಹಲ್ಲೆ ಮಾಡುತ್ತಿದ್ದ ಎಂದು ರೋಹಿಣಿ ತನ್ನ ಸಹೋದರನ ಬಳಿ ಹೇಳಿಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ.

ಆದರೆ ಭಾನುವಾರ ಸುಮಂತ್‌ ಅಕ್ಕನ ಸೀಮಂತ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ತೆರಳಿದ್ದರು. ಮಂಗಳವಾರ ಬೆಂಗಳೂರಿನಿಂದ ಇಬ್ಬರು ರೈಲಿನಲ್ಲಿ ಹೊರಟ್ಟಿದ್ದು, ಈ ವೇಳೆ ತಂದೆಗೆ ಎರಡು ಬಾರಿ ಕರೆ ಮಾಡಿ ಚೆನ್ನಾಗಿ ಮಾತನಾಡಿರುತ್ತಾಳೆ. ನಂತರ ದಂಪತಿಗಳು ಚನ್ನರಾಯಪಟ್ಟಣ ತಾಲೂಕಿನ ಸಮುದ್ರವಳ್ಳಿ ಬಳಿ ರೈಲಿನಿಂದ ಇಳಿದ್ದು, ಅಲ್ಲಿಯೇ ಸ್ವಲ್ಪ ದೂರದಲ್ಲಿ ಇದ್ದ ಕರೆಯ ಬಳಿಗೆ ಹೋಗಿದ್ದಾರೆ.

ಇದನ್ನೂ ಓದಿ : Lovers suicide case: ಆರು ವರ್ಷದ ಪ್ರೀತಿಯಲ್ಲಿ ಬಿರುಕು ಮೂಡಿಸಿತ್ತು ಆ ಒಂದು ಕೇಸ್‌

ಇದನ್ನೂ ಓದಿ : ದೆಹಲಿ ಶ್ರದ್ಧಾ ಕೊಲೆ ಪ್ರಕರಣ : ಪೀಸ್‌ ಪೀಸ್‌ ಪ್ರೇಮಿಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ

ಅಲ್ಲಿನ ಸ್ಥಳೀಯ ಮಹಿಳೆಯರು ಕೆರೆಗೆ ಬಟ್ಟೆ ಒಗೆಯಲು ಬಂದಿದ್ದು, ರೋಹಿಣಿ ಕೆರೆಯ ಬಳಿ ಒಬ್ಬಳೇ ನಿಂತಿರುವುದನ್ನು ಗಮನಿಸಿದ್ದಾರೆ. ಅಲ್ಲಿ ರೋಹಿಣಿ ನಾಪತ್ತೆಯಾಗಿದ್ದು, ತಂದೆ ಎಷ್ಟು ಬಾರಿ ಕರೆ ಮಾಡಿದರೂ ತೆಗೆಯದೇ ಇದ್ದಾಗ ಪೊಲೀಸರಿಗೆ ದೂರನ್ನು ನೀಡಿದ್ದಾರೆ. ಪೋಷಕರ ಪ್ರಕಾರ ಅಳಿಯ ಸುಮಂತ್‌ ಮಗಳನ್ನು ಹೊಡೆದು ಕೊಂದು ಕರೆಗೆ ಹಾಕಿದ್ದಾನೆ. ಹಾಗಾಗಿ ಆತನಿಗೂ ಹಾಗೂ ಆತನ ಮನೆಯವರಿಗೂ ಕಠಿಣ ಶಿಕ್ಷೆಯನು ವಿಧಿಸಬೇಕೆಂದು ಪೊಲೀಸರ ಬಳಿ ಮನವು ಮಾಡಿಕೊಂಡಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಸುವುದಾಗಿ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ.

Pregnant Woman Murder Case: Husband killed his three months pregnant wife for dowry

RELATED ARTICLES

Most Popular