private photo viral threat: ಇನ್ಸ್ಟಾಗ್ರಾಮ್‌ ನಲ್ಲಿ ಹುಡುಗಿಯರೊಂದಿಗೆ ಸ್ನೇಹ: ಖಾಸಗಿ ಫೋಟೋ ವೈರಲ್‌ ಬೆದರಿಕೆ, 17 ವರ್ಷದ ಹುಡುಗನ ಬಂಧನ ‌

ದೆಹಲಿ: (private photo viral threat) ಯುವಕನೋರ್ವ ಇನ್‌ಸ್ಟಾಗ್ರಾಮ್‌ನಲ್ಲಿ ಹುಡುಗಿಯರೊಂದಿಗೆ ಸ್ನೇಹ ಬೆಳೆಸಿ ನಂತರದಲ್ಲಿ ಅವರ ಖಾಸಗಿ ಫೋಟೋಗಳನ್ನು ಶೇರ್‌ ಮಾಡುವುದಾಗಿ ಹುಡುಗಿಯರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪದ ಮೇಲೆ ದೆಹಲಿ ಪೊಲೀಸರು 17 ವರ್ಷದ ಹುಡುಗನನ್ನು ಬಂಧಿಸಿದ್ದಾರೆ.

17 ವರ್ಷದ ಯುವಕನೋರ್ವ ಇನ್‌ಸ್ಟಾಗ್ರಾಮ್‌ನಲ್ಲಿ ಹುಡುಗಿಯರೊಂದಿಗೆ ಸ್ನೇಹ ಬೆಳೆಸಿ ಹೆಚ್ಚಿನ ಖಾಸಗಿ ಫೋಟೋ ಕಳುಹಿಸುವಂತೆ ಬೇಡಿಕೆ ಇಟ್ಟಿದ್ದಾನೆ. ಇದನ್ನು ನಿರಾಕರಿಸಿದವರಿಗೆ ಅವರ ಫೋಟೋಗಳನ್ನು ಲೀಕ್‌ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ. ಹೀಗೆ ಆತನ ಬಲೆಗೆ 14 ವರ್ಷದ ಬಾಲಕಿಯೊಬ್ಬಳು ಬಿದ್ದಿದ್ದಳು.

ಆಕೆಯೂ ತನ್ನ ಖಾಸಗಿ ಫೋಟೋಗಳನ್ನು ಹೆಚ್ಚಾಗಿ ಕಳುಹಿಸುವುದಕ್ಕೆ ನಿರಾಕರಿಸಿದ್ದು ಆಕೆಗೂ ಫೋಟೋಗಳನ್ನು ಶೇರ್‌ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ. ಇದೇ ಭಯದಿಂದ ಆಕೆ ತನ್ನ ತಂದೆಗೆ ವಿಷಯವನ್ನು ತಿಳಿಸಿದ್ದು, ಬಾಲಕಿಯ ತಂದೆ ಸೈಬರ್ ನಾರ್ತ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನ ಆಧಾರದ ಮೇಲೆ ತನಿಖೆಯನ್ನು ಪ್ರಾರಂಭಿಸಿದ ಪೊಲೀಸರು ಮೊದಲಿಗೆ ಆತನ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನ ವಿವರಗಳನ್ನು ಪಡೆದಿದ್ದಾರೆ. ನಂತರ ಆರೋಪಿಯ ಗುರುತು ಪತ್ತೆ ಹಚ್ಚಲು ಐಪಿ ವಿಳಾಸ ಹಾಗೂ ಮೊಬೈಲ್ ನಂಬರ್ ಅನ್ನು ಟ್ರಾಕ್ ಮಾಡಿದ್ದಾರೆ. ಈ ವೇಳೆ ಆರೋಪಿಯ ಗುರುತು ಪತ್ತೆಯಾಗಿದ್ದು, ನಂತರ ಆರೋಪಿಯ ಮನೆಗೆ ಪೊಲೀಸರು ತೆರಳಿದ್ದಾರೆ. ಆದರೆ ಅಲ್ಲಿ ಆರೋಪಿ ಇರಲಿಲ್ಲ. ಈ ಕಾರಣಕ್ಕೆ ಆರೋಪಿಯ ತಂದೆಯ ಬಳಿ ಮಗನನ್ನು ಠಾಣೆಗೆ ಹಾಜರುಪಡಿಸುವಂತೆ ಸೂಚಿಸಿ ಅಲ್ಲಿಂದ ಹೊರಟಿದ್ದಾರೆ.

ಪೊಲೀಸರು ಸೂಚನೆ ಮೇರೆಗೆ ಆರೋಪಿಯ ತಂದೆ ಆತನನ್ನು ಪೊಲೀಸರ ಮುಂದೆ ಹಾಜರುಪಡಿಸಿದ್ದು, ನಂತರ ಆತನನ್ನು ಬಂಧಿಸಲಾಗಿದೆ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಆರೋಪಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಆರೋಪಿ ಅಪರಾಧಕ್ಕೆ ಬಳಸಿದ್ದ ಸಿಮ್ ಕಾರ್ಡ್ ಮತ್ತು ಮೊಬೈಲ್ ಫೋನ್ ಅನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ : Bail for people in drug case: ಮಂಗಳೂರು ಡ್ರಗ್ಸ್‌ ಪ್ರಕರಣ: 13 ಮಂದಿಗೆ ಜಾಮೀನು

ಇದನ್ನೂ ಓದಿ : Dhanbad nursing home fire: ಧನ್ಬಾದ್ ನರ್ಸಿಂಗ್ ಹೋಮ್‌ ನಲ್ಲಿ ಬೆಂಕಿ ಅವಘಡ: ದಂಪತಿ ಸೇರಿ 5 ಮಂದಿ ದುರ್ಮರಣ

ಆರೋಪಿ ಕಳೆದ ವರ್ಷ 12ನೇ ತರಗತಿ ಪಾಸಾಗಿದ್ದು, ಪ್ರಸ್ತುತ ಪದವಿ ವಿದ್ಯಾರ್ಥಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ತಂತ್ರವನ್ನು ಬಳಸಿಕೊಂಡು ಅನೇಕ ಹುಡುಗಿಯರಿಗೆ ಕಿರುಕುಳ ನೀಡುತ್ತಿದ್ದನು ಎನ್ನುವುದಾಗಿ ತನಿಖೆಯ ವೇಳೆ ತಿಳಿದುಬಂದಿದೆ.

private photo viral threat: Befriending girls on Insta: Private photo viral threat, 17-year-old boy arrested

Comments are closed.