ಭಾನುವಾರ, ಏಪ್ರಿಲ್ 27, 2025
HomeCrimePU Student died: ಆಸೆಯಿಂದ ಪರೋಟ ತಿಂದ ಪಿಯು ವಿದ್ಯಾರ್ಥಿನಿಯ ಬದುಕು ಅಂತ್ಯ

PU Student died: ಆಸೆಯಿಂದ ಪರೋಟ ತಿಂದ ಪಿಯು ವಿದ್ಯಾರ್ಥಿನಿಯ ಬದುಕು ಅಂತ್ಯ

- Advertisement -

ಇಡುಕ್ಕಿ: (PU Student died) ಏನು ಆಗೊಲ್ಲ ಎನ್ನುವ ನಂಬಿಕೆಯಿಂದ ಪರೋಟ ತಿಂದಿದ್ದು, ಬಳಿ ಫುಡ್‌ ಅಲರ್ಜಿಯಿಂದಾಗಿ ಪಿಯು ವಿದ್ಯಾರ್ಥಿನಿಯೋರ್ವಳು ಮೃತಪಟ್ಟಿರುವ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯ ತೋಡಪುಳದಲ್ಲಿ ನಡೆದಿದೆ. ತೋಡಪುಳ ಸಮೀಪದ ವಾಜತೊಪ್ಪುವಿನ ನಿವಾಸಿ ನಯನಮರಿಯಾ (16 ವರ್ಷ) ಎಂಬಾಕೆ ಮೃತ ವಿದ್ಯಾರ್ಥಿನಿ.

ಮೈದಾ ಹಾಗೂ ಗೋದಿಯಿಂದ ಮಾಡಿದ ಆಹಾರಗಳನ್ನು ಸೇವಿಸಿದಾಗೆಲ್ಲ ನಯನಾಗೆ ಅಲರ್ಜಿ ಉಂಟಾಗುತ್ತಿತ್ತಂತೆ ಆದರೂ ಬಹಳ ದಿನದ ನಂತರ ಇತ್ತೀಚೆಗಷ್ಟೇ ಮತ್ತೆ ಮೈದಾ ಮತ್ತು ಗೋಧಿಯಿಂದ ತಯಾರಿಸಿ ಆಹಾರವನ್ನು ಆಕೆ ಸೇವಿಸಿದ್ದಳು. ಇದರಿಂದ ಆಕೆಗೆ ಯಾವುದೇ ಸಮಸ್ಯೆಯಾಗಿರಲಿಲ್ಲ.

ಇದೇ ನಂಬಿಕೆಯಿಂದ ಏನು ಸಮಸ್ಯೆಯಾಗಲ್ಲ ಎಂದುಕೊಂಡು ಆಕೆ ಇತ್ತೀಚೆಗೆ ಆಸೆ ಪಟ್ಟು ಮೈದಾದಿಂದ ಮಾಡಿದ ಪರೋಟವನ್ನು ತಿಂದಿದ್ದಳು. ಬಳಿಕ ಅನಾರೋಗ್ಯದಿಂದ ಬಳಲಿದ ನಯನಾಳನ್ನು ಇಡುಕ್ಕಿ ಮೆಡಿಕಲ್‌ ಕಾಲೇಜಿಗೆ ದಾಖಲಿಸಲಾಯಿತು. ವೆಂಟಿಲೇಟರ್‌ ನಲ್ಲಿಟ್ಟು ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾಳೆ.

ಈಕೆ ವಾಜತೊಪ್ಪುವಿನ ಸೆಂಟ್‌ ಜಾರ್ಜ್‌ ಹೈಯರ್‌ ಸೆಕೆಂಡರಿ ಸ್ಕೂಲ್‌ ನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಳು ಎನ್ನಲಾಗಿದೆ.

ಇದನ್ನೂ ಓದಿ : Udupi drug case: ಉಡುಪಿ : ಗಾಂಜಾ ಸೇವನೆ ಪ್ರಕರಣ, ಇಬ್ಬರು ಮಹಿಳೆಯರು ಸೇರಿ ಮೂವರು ಅರೆಸ್ಟ್‌

ಈ ಹಿಂದೆ ಇದೇ ಕೇರಳದಲ್ಲಿ ಹೋಟೆಲ್ ನಲ್ಲಿ ಬಿರಿಯಾನಿ ಆರ್ಡರ್‌ ಮಾಡಿ ತಿಂದು ವಿದ್ಯಾರ್ಥಿಯೋರ್ವಳು ಫುಡ್‌ ಪಾಯ್ಸನ್‌ ನಿಂದ ಮೃತಪಟ್ಟ ಘಟನೆ ನಡೆದಿತ್ತು. ಇದೀಗ ಅದೇ ರೀತಿಯಲ್ಲಿ ನಯನಾ ಎನ್ನುವ ವಿದ್ಯಾರ್ಥಿನಿ ಮೃತಪಟ್ಟಿದ್ದು, ಫುಡ್‌ ಅಲರ್ಜಿಯಿಂದ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಆಕೆಯ ಆಸೆಯೇ ಅವಳ ಜೀವಕ್ಕೆ ಮುಳುವಾಯ್ತು.

ಇದನ್ನೂ ಓದಿ : Smuggling gold from shrilanka: ಚಿನ್ನವನ್ನು ಸಮುದ್ರಕ್ಕೆ ಎಸೆದ ಅಕ್ರಮ ಚಿನ್ನ ಸಾಗಾಟಗಾರರು

ಇದನ್ನೂ ಓದಿ : Explosion in college laboratory: ದಯಾಲ್ ಸಿಂಗ್ ಕಾಲೇಜಿನ ಪ್ರಯೋಗಾಲಯದಲ್ಲಿ ಸ್ಫೋಟ: ಶಿಕ್ಷಕ, ವಿದ್ಯಾರ್ಥಿಗಳಿಗೆ ಗಾಯ

PU Student died: PU student’s life ended after she ate parota out of desire

RELATED ARTICLES

Most Popular