ಸೋಮವಾರ, ಏಪ್ರಿಲ್ 28, 2025
HomeCrimeಧಾರ್ಮಿಕ ಸಮಾರಂಭದಲ್ಲಿ ಆಹಾರ ಸೇವನೆ : 300 ಮಂದಿ ಅಸ್ವಸ್ಥ

ಧಾರ್ಮಿಕ ಸಮಾರಂಭದಲ್ಲಿ ಆಹಾರ ಸೇವನೆ : 300 ಮಂದಿ ಅಸ್ವಸ್ಥ

- Advertisement -

ನವದೆಹಲಿ : 300 People Fall Sick : ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಆಹಾರ ಸೇವನೆ ಮಾಡಿದ ನಂತರದಲ್ಲಿ ಸುಮಾರು 300ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡಿರುವ ಘಟನೆ ರಾಜಸ್ಥಾನದ ದೌಸಾದಲ್ಲಿ ನಡೆದಿದೆ. ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ ಎಂದು ದೌಸಾದ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ.ಸುಭಾಷ್ ಬಿಲೋನಿಯಾ ತಿಳಿಸಿದ್ದಾರೆ.

ರಾಜಸ್ಥಾನದ ಪಖರ್ ಗ್ರಾಮದಲ್ಲಿ ರಾತ್ರಿ ಮಂದಾವರ್ ಪ್ರದೇಶದಲ್ಲಿ ಧಾರ್ಮಿಕ ಸಮಾರಂಭವೊಂದು ನಡೆದಿದೆ. ಧಾರ್ಮಿಕ ಕಾರ್ಯದ ನಂತರ ಎಲ್ಲರೂ ಊಟ ಮಾಡಿದ್ದಾರೆ. ಈ ಪೈಕಿ 300 ಜನರಿಗೆ ಹೊಟ್ಟೆ ನೋವು, ವಾಂತಿ ಕಾಣಿಸಿಕೊಂಡಿದೆ. ಅಸ್ವಸ್ಥಗೊಂಡವರನ್ನು ಮಾಂದವಾರ, ಮಹುವಾ, ದೌಸಾ ಮತ್ತು ಹತ್ತಿರದ ಆರೋಗ್ಯ ಕೇಂದ್ರಗಳಿಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಅಲ್ಲದೇ ಹಲವರು ಪ್ರಥಮ ಚಿಕಿತ್ಸೆ ಪಡೆದು ಬಿಡುಗಡೆಗೊಳಿಸಲಾಗಿದೆ.

2021ರಲ್ಲೂ ನಡೆದಿತ್ತು ಘಟನೆ :

2021 ರಲ್ಲಿ ಇದೇ ರೀತಿಯ ಘಟನೆಯಲ್ಲಿ, ದಾಹೋದ್ ಜಿಲ್ಲೆಯ ದೇವಗಢ್ ಬರಿಯಾ ತಾಲೂಕಿನ ಹಳ್ಳಿಯೊಂದರಲ್ಲಿ ಧಾರ್ಮಿಕ ಆಚರಣೆಯಲ್ಲಿ ಆಹಾರ ಸೇವಿಸಿದ ನಂತರ, ನಾಲ್ವರು ಸಾವನ್ನಪ್ಪಿದರು ಮತ್ತು ಒಂಬತ್ತು ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ದೇವಗಢ್ ಬರಿಯಾ ತಾಲೂಕಿನ ಭುಲ್ವಾನ್ ಗ್ರಾಮದಲ್ಲಿ ಸ್ಥಳೀಯ ಬುಡಕಟ್ಟು ಜನಾಂಗದವರು ಆಯೋಜಿಸುತ್ತಿದ್ದ “ಜಾತರ್” ಆಚರಣೆಯಲ್ಲಿ ಈ ಘಟನೆ ನಡೆದಿದೆ. ಸಮಾರಂಭದಲ್ಲಿ, ಆಹಾರವನ್ನು ಸಹ ನೀಡಲಾಯಿತು, ಮತ್ತು ಅದನ್ನು ತಿಂದ ಸುಮಾರು 13 ವ್ಯಕ್ತಿಗಳು ಅಸ್ವಸ್ಥರಾಗಿದ್ದರು.

ಜಿಲ್ಲಾಧಿಕಾರಿ ಹರ್ಷಿತ್ ಗೋಸಾವಿ ಅವರ ಪ್ರಕಾರ ಸಮಾರಂಭದಲ್ಲಿ ಸುಮಾರು 50 ಜನರು ಭಾಗವಹಿಸಿದ್ದರು. ಇದಲ್ಲದೆ, ನಾಲ್ವರು ಅಸ್ವಸ್ಥರು ಸಾವನ್ನಪ್ಪಿದ್ದಾರೆ ಮತ್ತು ಒಂಬತ್ತು ಮಂದಿಯನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಅವರು ಹೇಳಿದರು. ಆಸ್ಪತ್ರೆಗೆ ದಾಖಲಾಗಿರುವ ಒಂಬತ್ತು ಜನರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ : ಬ್ರಹ್ಮಾವರ : ಬಾರಕೂರು ಪೆಟ್ರೋಲ್‌ ಬಂಕ್‌ ಸೇರಿ ಸರಣಿ ಕಳ್ಳತನ

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಗೆ ನಿಮ್ಮ ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಬಹುದು : ಇಲ್ಲಿದೆ ಕಂಪ್ಲೀಟ್‌ ಮಾಹಿತಿ

Rajasthan Dausa 300 People Fall Sick After Consuming Religious Food

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular