ಭಾನುವಾರ, ಏಪ್ರಿಲ್ 27, 2025
HomeCrimePrashath : ಹಾಸನದಲ್ಲಿ ಡಾ.ರಾಜ್ ಅಭಿಮಾನಿ ಕುಟುಂಬದ ಸದಸ್ಯನ ಬರ್ಬರ ಹತ್ಯೆ: ಪ್ರತಿಕಾರಕ್ಕಾಗಿ ನಡೆಯಿತಾ ಪ್ರಶಾಂತ್...

Prashath : ಹಾಸನದಲ್ಲಿ ಡಾ.ರಾಜ್ ಅಭಿಮಾನಿ ಕುಟುಂಬದ ಸದಸ್ಯನ ಬರ್ಬರ ಹತ್ಯೆ: ಪ್ರತಿಕಾರಕ್ಕಾಗಿ ನಡೆಯಿತಾ ಪ್ರಶಾಂತ್ ಹತ್ಯೆ

- Advertisement -

ಹಾಸನ : ರಾಜಕೀಯದ ಶಕ್ತಿ‌ ಕೇಂದ್ರ ಎನ್ನಿಸಿಕೊಂಡಿರೋ ಹಾಸನದಲ್ಲಿ (Hassan) ಡಾ.ರಾಜ್ ಕುಟುಂಬದ ಜೊತೆ ಆತ್ಮೀಯ ಒಡನಾಟ ಹೊಂದಿದ್ದ ಕುಟುಂಬದ ಆಧಾರವಾಗಿದ್ದ ಮಗ ಹಾಗೂ ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜ್ (Prashath)ನನ್ನು ನಡುರಸ್ತೆಯಲ್ಲಿ ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ. ಬುಧವಾರ ಸಂಜೆ ವೇಳೆಗೆ ಹಾಸನ ನಗರದ 15 ನೇ ವಾರ್ಡ್ ಬಳಿ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಹತ್ಯೆ ಮಾಡಲಾಗಿದ್ದು ಘಟನೆಗೆ 15 ವರ್ಷದ ವೈಷಮ್ಯ ಕಾರಣ ಎಂದು ಹೇಳಲಾಗುತ್ತಿದೆ. ಪ್ರಶಾಂತ ಕೊಲೆಯಿಂದ ಹಾಸನ ಉದ್ವಿಘ್ನವಾಗಿದ್ದು, ರಾತ್ರಿ ಹಿಮ್ಸ್ ಶವಾಗಾರದ ಬಳಿ ಸ್ವತಃ ಶಾಸಕ ರೇವಣ್ಣ ಧಾವಿಸಿದ್ದಲ್ಲದೇ ಪೊಲೀಸ್ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೇ ಪ್ರಶಾಂತ್ ಶವವನ್ನು ಅಂಬುಲೆನ್ಸ್ ನಿಂದ ಶವಾಗಾರಕ್ಕೆ ಶಿಫ್ಟ್ ಮಾಡಲು ಬಿಡೋದಿಲ್ಲ ಎಂದು ಪಟ್ಟು ಹಿಡಿದಿದ್ದರು. ರೇವಣ್ಣ ಬೇಡಿಕೆಯಂತೆ ನಗರದ ಸಬ್ ಇನ್ಸಪೆಕ್ಟರ್ ಹಾಗೂ ಸಿಪಿಐಯನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿದ ಬಳಿಕ ರೇವಣ್ಣ ಹೆಣವನ್ನು ಶವಾಗಾರಕ್ಕೆ ಶಿಫ್ಟ್ ಮಾಡಲು ಅವಕಾಶ ಮಾಡಿಕೊಟ್ಟರು. ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದ ಪ್ರಶಾಂತ್ 16 ನೇ ವಾರ್ಡ್‌ನಿಂದ ನಗರಸಭೆ ಸದಸ್ಯನಾಗಿ ಆಯ್ಕೆಯಾಗಿದ್ದರು. 1600 ಕ್ಕು ಅಧಿಕ ಮತಗಳಿಂದ ಜಯಗಳಿಸಿದ್ದ ಪ್ರಶಾಂತ್ ಹಣ್ಣಿನ ವ್ಯಾಪಾರದ ವೃತ್ತಿ‌ಮಾಡುತ್ತಿದ್ದರು. ಪ್ರಶಾಂತ್ ತಂದೆ ಹಾ.ರಾ.ನಾಗರಾಜ್ ಕೂಡ ಎರಡು ಭಾರಿ ನಗರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಮಾತ್ರವಲ್ಲ ಹಾ.ರಾ.ನಾಗರಾಜ್, ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಸಂಸ್ಥಾಪಕರೂ ಆಗಿದ್ದರು.

2005 ಸೆಪ್ಟಂಬರ್‌ನಲ್ಲಿ ಹಾ.ರಾ.ನಾಗರಾಜ್ ಅವರನ್ನು ಹಾಸನ ಹೊರವಲಯದಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಇದಾದ ಬಳಿಕ 2006 ರಲ್ಲಿ ಸೆಪ್ಟೆಂಬರ್‌ನಲ್ಲಿ ತಂದೆ ಕೊಲೆಗೆ ಕಾರಣರಾದ ಗ್ಯಾರಳ್ಳಿ ತಮ್ಮಯ್ಯನನ್ನು ಕೊಲೆ ಮಾಡಿ ಈಗ ಸಾವನ್ನಪ್ಪಿರೋ ಪ್ರಶಾಂತ್ ಜೈಲು ಸೇರಿದ್ದರು. ಕೊಲೆ ಜೈಲುವಾಸದ ಬಳಿಕ ನಂತರ ಜನಸ್ನೇಹಿಯಾಗಿದ್ದ ಪ್ರಶಾಂತ್ ನಾಗರಾಜ್, ಜೆಡಿಎಸ್ ಪಕ್ಷ ಸೇರಿ ರೇವಣ್ಣ ಕುಟುಂಬದ ಜೊತೆ ಆಪ್ತ ಸ್ನೇಹವನ್ನು ಹೊಂದಿದ್ದರು. ಆದರೆ 2006 ರಲ್ಲಿ ಪ್ರಶಾಂತ್ ಹತ್ಯೆ ಮಾಡಿದ್ದ ಗ್ಯಾರಳ್ಳಿ ತಮ್ಮಯ್ಯನ ಬೆಂಬಲಿಗರೇ ಪ್ರಶಾಂತ್ ರನ್ನು ಹತ್ಯೆ ಮಾಡಿದ್ದಾರೆ ಎನ್ನಲಾಗ್ತಿದೆ. ಪ್ರಶಾಂತ್ ತಂದೆ ಕಾಲದಿಂದಲೂ ಕುಟುಂಬ ಡಾ.ರಾಜ್ (Rajkumar fan) ಅಭಿಮಾನಿಯಾಗಿತ್ತು. ಹೀಗಾಗಿ ಪ್ರಶಾಂತ್ ತಂದೆ ಹಾ.ರಾ.ನಾಗರಾಜ್ ತಮ್ಮ ಕೊನೆಯ ಪುತ್ರನಿಗೆ ರಾಜ್ ಮೇಲಿನ ಅಭಿಮಾನದಿಂದ ಮಯೂರ ಎಂದು ಹೆಸರಿಟ್ಟಿದ್ದರು.

ಪ್ರಶಾಂತ್ ತಂದೆ ಹಾ.ರಾ.ನಾಗರಾಜ್ ಇದ್ದ ಕಾಲದಲ್ಲಿ ರಾಜ್ ಕುಟುಂಬದ ಜೊತೆ ಒಡನಾಟ ಹೊಂದಿದ್ದ ಹಾ.ರಾ.ನಾ ಕುಟುಂಬದ ಜೊತೆ ಡಾ.ರಾಜ್ ಪುತ್ರರು ಒಡನಾಟ ಮುಂದುವರೆಸಿದ್ದರು. ಪುನೀತ್ ರಾಜ್ ಕುಮಾರ್ ಹಾಸನಕ್ಕೆ ಬರುತ್ತಿದ್ದಾಗಲೆಲ್ಲಾ ಹಾ.ರಾ.ನಾ ಕುಟುಂಬ ಸದಸ್ಯರ ಭೇಟಿ ಮಾಡುತ್ತಿದ್ದರು. ಈ‌ ಮಧ್ಯಡ ಡಾ.ಪುನೀತ್ ರಾಜ್‌ಕುಮಾರ್ ಸಾವಿನಿಂದ ನೊಂದಿದ್ದ ಪ್ರಶಾಂತ್ ಸಹೋದರ ಮಯೂರ ಐದು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ. ಸದ್ಯ ಹಾಸನದಲ್ಲಿ ಪ್ರಶಾಂತ್ ಕೊಲೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಹಣ್ಣಿನ ವ್ಯಾಪಾರಿಗಳ ಸಂಘದ ಅಧ್ಯಕ್ಷನೂ ಆಗಿದ್ದ ಪ್ರಶಾಂತ್ ಗೌರವಾರ್ಥ ಇಂದು ಹಾಸನದಲ್ಲಿ ಮಾರುಕಟ್ಟೆ ಬಂದ್ ಮಾಡಲಾಗಿದೆ.

ಇದನ್ನೂ ಓದಿ : Singer KK dies : ಹಾಡುತ್ತಿರುವಾಗಲೇ ಸಾವನ್ನಪ್ಪಿದ ಖ್ಯಾತ ಗಾಯಕ ಕೃಷ್ಣಕುಮಾರ್ ಕುಂನಾತ್

ಇದನ್ನೂ ಓದಿ : ಟೀಂ ಇಂಡಿಯಾ ಮಾಜಿ ನಾಯಕ ಧೋನಿ ವಿರುದ್ಧ ದಾಖಲಾಯ್ತು ಎಫ್​ಐಆರ್​

Rajkumar fan, JDS Leader Prashath killed in Hassan

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular