3 soldiers injured : ಭಾರತೀಯ ಯೋಧರಿದ್ದ ಖಾಸಗಿ ವಾಹನ ಸ್ಫೋಟ : ಮೂವರಿಗೆ ಗಾಯ

3 soldiers injured : ಬಾಡಿಗೆ ವಾಹನದಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ಮೂವರು ಯೋಧರು ಗಾಯಗೊಂಡ ಘಟನೆಯು ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್​ ಜಿಲ್ಲೆಯ ಸೆಡೋವ್​ನಲ್ಲಿ ಸಂಭವಿಸಿದೆ. ಗಾಯಗೊಂಡ ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು ತನಿಖೆ ಚುರುಕುಗತಿಯಲ್ಲಿ ಸಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ಇಂದು ಬೆಳಗ್ಗೆ ದಕ್ಷಿಣ ಕಾಶ್ಮೀರದ ಭಾಗವಾದ ಶೋಪಿಯಾನ್​​ ಜಿಲ್ಲೆಯಲ್ಲಿ ಟಾಟಾ ವಾಹನದಲ್ಲಿ ನಿಗೂಢ ಸ್ಫೋಟ ಸಂಭವಿಸಿದೆ. ಭಾರತೀಯ ಸೇನೆಯು ನೀಡಿರುವ ಮಾಹಿತಿಯ ಪ್ರಕಾರ ಟಾಟಾ ವಾಹನದಲ್ಲಿ ಬ್ಯಾಟರಿಯು ಸ್ಫೋಟಗೊಂಡು ಈ ಘಟನೆ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.


ಇದನ್ನು ಹೊರತುಡಿಸಿ ಗ್ರೆನೈಡ್​ನಿಂದ ಅಥವಾ ಐಇಡಿಗಳಿಂದಲೂ ಈ ಸ್ಫೋಟ ಸಂಭವಿಸಿದ್ದರಬಹುದು ಎಂಬ ಶಂಕೆ ಕೂಡ ಇದೆ. ಈ ಸಂಬಂಧ ಮಾಹಿತಿ ಹಂಚಿಕೊಂಡ ಕಾಶ್ಮೀರದ ಐಜಿಪಿ ಈ ಸ್ಫೋಟ ಯಾವ ಕಾರಣಕ್ಕೆ ಸಂಭವಿಸಿತು ಎಂಬುದಕ್ಕೆ ಇನ್ನೂ ನಿಖರವಾದ ಕಾರಣ ಲಭ್ಯವಾಗಿಲ್ಲ. ಆದರೆ ಅದೃಷ್ಟವಶಾತ್​ ವಾಹನದಲ್ಲಿದ್ದ ಯಾರೊಬ್ಬರೂ ಸ್ಫೋಟದಿಂದ ಜೀವ ಕಳೆದುಕೊಂಡಿಲ್ಲ. ಈ ಪ್ರಕರಣದ ತನಿಖೆಯನ್ನು ನಾವು ಕೈಗೆತ್ತಿಕೊಂಡಿದ್ದೇವೆ. ಶೀಘ್ರದಲ್ಲಿಯೇ ಈ ಘಟನೆಗೆ ಕಾರಣ ಪತ್ತೆ ಹಚ್ಚಲಾಗುತ್ತದೆ ಎಂದು ಹೇಳಿದರು .


ಖಾಸಗಿ ಟಾಟಾ ವಾಹನದಲ್ಲಿ 15 ಮಂದಿ ಭಾರತೀಯ ಯೋಧರಿದ್ದರು ಎನ್ನಲಾಗಿದೆ. ಇವರೆಲ್ಲ ಶೋಫಿಯಾನ್​ದಲ್ಲಿದ್ದ ವೇಳೆಯಲ್ಲಿ ಈ ಭಯಾನಕ ಸ್ಫೋಟ ಸಂಭವಿಸಿದೆ. 15 ಮಂದಿ ಯೋಧರ ಪೈಕಿ ಮೂವರು ಭಾರತೀಯ ಯೋಧರು ಸ್ಫೋಟದಿಂದ ಗಾಯಗೊಂಡಿದ್ದಾರೆ. ಗಾಯಾಳು ಯೋಧರನ್ನು ಶ್ರೀನಗರದ 97 ಬೇಸ್​ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ.

ಇದನ್ನು ಓದಿ : Yash : ಛತ್ರಪತಿ ಶಿವಾಜಿ ಬಯೋಪಿಕ್ ನಲ್ಲಿ ಯಶ್: ಇಲ್ಲಿದೆ ವೈರಲ್ ಪೋಟೋದ ಅಸಲಿ ಸತ್ಯ

ಇದನ್ನೂ ಓದಿ : Singer KK dies : ಹಾಡುತ್ತಿರುವಾಗಲೇ ಸಾವನ್ನಪ್ಪಿದ ಖ್ಯಾತ ಗಾಯಕ ಕೃಷ್ಣಕುಮಾರ್ ಕುಂನಾತ್

3 soldiers injured in blast at jammu and kashmirs shopian say police

Comments are closed.