Rape of dog: ಬೀದಿ‌ ನಾಯಿಯ ಮೇಲೆ ಅತ್ಯಾಚಾರ : ಕಾಮುಕನ ವಿರುದ್ದ ಪ್ರಕರಣ ದಾಖಲು

ಪಾಟ್ನಾ: (Rape of dog) ಬೀದಿ ನಾಯಿಯ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ ಆಘಾತಕಾರಿ ಘಟನೆ ಬಿಹಾರದ ರಾಜಧಾನಿ ಪಾಟ್ನಾದಿಂದ ಬೆಳಕಿಗೆ ಬಂದಿದೆ. ಮಾರ್ಚ್ 8, ಹೋಳಿ ದಿನದಂದು ಈ ಘಟನೆ ಸಂಭವಿಸಿದ್ದು, ಈ ಭೀಕರ ಕೃತ್ಯದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಫುಲ್ವಾರಿ ಶರೀಫ್‌ನ ಫೈಸಲ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಸಿಸಿಟಿವಿ ದೃಶ್ಯಾವಳಿಯಲ್ಲಿ, ಅಪರಿಚಿತ ವ್ಯಕ್ತಿಯೊಬ್ಬನು ಕಾಲೋನಿಯಲ್ಲಿ ನಾಯಿಯೊಂದಿಗೆ ಅಸಹಜ ಕೃತ್ಯವನ್ನು ಬಹಿರಂಗವಾಗಿ ಮಾಡುತ್ತಿರುವುದು ಕಂಡುಬಂದಿದೆ. ಇದರ ನಂತರ, ಫುಲ್ವಾರಿ ಷರೀಫ್ ಪೊಲೀಸ್ ಠಾಣೆಯಲ್ಲಿ ಎನ್‌ಜಿಒವೊಂದು ಈ ವಿಷಯದ ಬಗ್ಗೆ ಅರ್ಜಿ ಸಲ್ಲಿಸಿದೆ. ಇದಾದ ಬಳಿಕ ಪಾಟ್ನಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದಾರೆ.

ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ, ಫುಲ್ವಾರಿ ಷರೀಫ್ ಮನೀಶ್ ಕುಮಾರ್, “ಅರ್ಜಿ ಬಂದಿದೆ ಮತ್ತು ದಾಖಲೆಯೊಂದಿಗೆ ಕರೆ ಮಾಡಲಾಗಿದೆ, ಐಪಿಸಿ ಮತ್ತು ಪ್ರಾಣಿಗಳ ಕಾಯಿದೆಯಡಿ ಕ್ರಮ ಕೈಗೊಳ್ಳಲಾಗುವುದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ” ಎಂದು ಹೇಳಿದರು. ಇದೀಗ ಅಪರಿಚಿತ ವ್ಯಕ್ತಿಯ ವಿರುದ್ದ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

ಇತ್ತೀಚೆಗೆ ಅತ್ಯಾಚಾರದ ಪ್ರಕರಣಗಳು ಹೆಚ್ಚುತ್ತಿದ್ದು, ಪ್ರತಿ ದಿನ ಒಂದಲ್ಲ ಒಂದು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಹುಟ್ಟಿದ ಹಸುಗೂಸಿನಿಂದ ಹಿಡಿದು ವಯಸ್ಸಾದವರ ಮೇಲೂ ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. ಆದರೆ ಇದೀಗ ಮನುಷ್ಯರನ್ನು ಬಿಟ್ಟು ಪ್ರಾಣಿಗಳ ಮೇಲೂ ಕಾಮುಕರ ಕೆಂಗಣ್ಣು ಬಿದ್ದಿದೆ. ಬೀದಿ ನಾಯಿಯನ್ನು ಬಿಡದೇ ಅದರ ಮೇಲೂ ಅತ್ಯಾಚಾರ ನಡೆಸುವಷ್ಟು ಮನುಷ್ಯ ಮುಂದುವರೆದಿದ್ದಾನೆ. ಈ ಕ್ರೂರತನ ದೃಷ್ಟಿಗೆ ಕೊನೆ ಯಾವಾಗ ಬೀಳುತ್ತದೆಯೋ ತಿಳಿದಿಲ್ಲ. ಆದರೆ ನಿಜಕ್ಕೂ ಮನುಷ್ಯ ಇಂದು ತನ್ನ ಕ್ರೂರತನವನ್ನು ಪ್ರಾಣಿಗಳ ಮೇಲೂ ಸಾಧಿಸುತ್ತಿರವುದು ವಿಪರ್ಯಾಸವೇ ಸರಿ.

ಇದನ್ನೂ ಓದಿ : ಬಸ್ ಪಲ್ಟಿ 25 ಮಂದಿಗೆ ಗಾಯ, ಇಬ್ಬರು ಗಂಭೀರ

ಇದನ್ನೂ ಓದಿ : ಕಾರು – ಟ್ರಕ್‌ ನಡುವೆ ಭೀಕರ ಅಪಘಾತ : 9 ವರ್ಷದ ಮಗು ಸೇರಿದಂತೆ 6 ಮಂದಿ ಸಾವು

ಇದನ್ನೂ ಓದಿ : ಭೀಕರ ಬಸ್ ಅಪಘಾತ 4 ಸಾವು, 28 ಮಂದಿಗೆ ಗಂಭೀರ ಗಾಯ

Rape of dog: A case has been registered against the lover

Comments are closed.