ಸೋಮವಾರ, ಏಪ್ರಿಲ್ 28, 2025
HomeCrimeRape with drugs: ಮಾಲ್‌ನ ಪಾರ್ಕಿಂಗ್ ಸ್ಥಳದಲ್ಲಿ ಮಹಿಳೆಗೆ ಮಾದಕವಸ್ತು ನೀಡಿ ಕಾರಿನೊಳಗೆ ಅತ್ಯಾಚಾರ

Rape with drugs: ಮಾಲ್‌ನ ಪಾರ್ಕಿಂಗ್ ಸ್ಥಳದಲ್ಲಿ ಮಹಿಳೆಗೆ ಮಾದಕವಸ್ತು ನೀಡಿ ಕಾರಿನೊಳಗೆ ಅತ್ಯಾಚಾರ

- Advertisement -

ಗುರುಗ್ರಾಮ್: (Rape with drugs) ಮಾಲ್‌ನ ನೆಲಮಾಳಿಗೆಯಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ 27 ವರ್ಷದ ಮಹಿಳೆಗೆ ವ್ಯಕ್ತಿಯೊಬ್ಬ ಮಾದಕ ದ್ರವ್ಯ ನೀಡಿ ಅತ್ಯಾಚಾರ ಎಸಗಿರುವ ಘಟನೆ ಹರಿಯಾಣದ ಗುರುಗ್ರಾಮ್‌ನ ಸಹಾರಾ ಮಾಲ್‌ ನಲ್ಲಿ ನಡೆದಿದೆ. ಆರೋಪಿಯನ್ನು ತುಷಾರ್ ಶರ್ಮಾ ಎಂದು ಗುರುತಿಸಲಾಗಿದ್ದು, ಇಂಜಿನಿಯರಿಂಗ್ ಪದವೀಧರ ಮಹಿಳೆಯನ್ನು ಉದ್ಯೋಗ ಸಂದರ್ಶನದ ನೆಪದಲ್ಲಿ ಕರೆದು ನೀರಿನಲ್ಲಿ ಸ್ವಲ್ಪ ನಿದ್ರಾಜನಕವನ್ನು ಬೆರೆಸಿ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ.

ಮಹಿಳೆಯೋರ್ವರನ್ನು ಉದ್ಯೋಗ ಸಂದರ್ಶನದ ನೆಪದಲ್ಲಿ ಮಾಲ್‌ ಗೆ ಕರೆಸಿ ಮಾಲ್‌ ನ ನೆಲಮಾಳಿಗೆಯಲ್ಲಿರುವ ಕಾರ್‌ ಪಾರ್ಕಿಂಗ್‌ ಸ್ಥಳದಲ್ಲಿ ಮಹಿಳೆಗೆ ನೀರಿನಲ್ಲಿ ನಿದ್ರಾಜನಕವನ್ನು ಬೆರೆಸಿ ನೀಡಿದ್ದು, ಮಹಿಳೆ ಪ್ರಜ್ಞೆ ತಪ್ಪಿದ ಮೇಲೆ ಕಾರಿನಲ್ಲಿಯೇ ಆಕೆಯ ಮೇಲೆ ಅತ್ಯಾಚಾರವೆಸಗಲಾಗಿದೆ. ಅತ್ಯಾಚಾರ ನಡೆಸಿ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

“ತಾನು ಡಿಎಲ್‌ಎಫ್ ಪ್ರದೇಶದಲ್ಲಿ ನೆಲೆಸಿದ್ದು, ಆನ್‌ಲೈನ್ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದೆ.ತನ್ನನ್ನು ತುಷಾರ್ ಶರ್ಮಾ ಎಂದು ಪರಿಚಯಿಸಿಕೊಂಡ ವ್ಯಕ್ತಿಯ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡಿದ್ದು, ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ಶನಿವಾರ ಮಾಲ್‌ಗೆ ಸಂದರ್ಶನಕ್ಕೆ ಕರೆದಿದ್ದಾನೆ” ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.

ದೂರವಾಣಿ ಸಂಭಾಷಣೆಯಂತೆ ನಾನು ಮಧ್ಯಾಹ್ನ 1 ಗಂಟೆಗೆ ಮಾಲ್ ತಲುಪಿದೆ. ಅವರು ನನ್ನನ್ನು ಮಾಲ್‌ ನ ಪ್ರವೇಶದ್ವಾರದಲ್ಲಿ ಭೇಟಿಯಾಗಿದ್ದು, ಕೆಲಸದ ಬಗ್ಗೆ ಚರ್ಚಿಸಲು ನನ್ನನ್ನು ಮಾಲ್‌ನ ನೆಲಮಾಳಿಗೆಗೆ ಕರೆದೊಯ್ದರು. ಅಲ್ಲಿ ಅವರು ನನಗೆ ನೀರು ನೀಡಿದರು. ಶೀಘ್ರದಲ್ಲೇ ನಾನು ಪ್ರಜ್ಞೆಯನ್ನು ಕಳೆದುಕೊಂಡೆ.ಈ ವೇಳೆ ಆತ ನನ್ನ ಮೇಲೆ ಅತ್ಯಾಚಾರ ನಡೆಸಿ ಅಲ್ಲಿಂದ ಪರಾರಿಯಾಗಿದ್ದನು. ”ಎಂದು ಸಂತ್ರಸ್ತ ಮಹಿಳೆ ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ.

ಇದಾದ ಬಳಿಕ ಸಂತ್ರಸ್ತೆ ಪೊಲೀಸರಿಗೆ ವಿಷಯ ತಿಳಿಸಿದ್ದು, ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಪೊಲೀಸರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.“ನಾವು ದೂರಿನ ಆರೋಪಗಳನ್ನು ಪರಿಶೀಲಿಸುತ್ತಿದ್ದೇವೆ.ಆರೋಪಿಯನ್ನು ಇನ್ನೂ ಬಂಧಿಸಿಲ್ಲ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಇದೀಗ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 328 (ವಿಷದ ಮೂಲಕ ನೋವುಂಟುಮಾಡುವುದು), 376 (ಅತ್ಯಾಚಾರ), 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ತುಷಾರ್ ಶರ್ಮಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಇದನ್ನೂ ಓದಿ : Drug consumption case: ಗಂಗೊಳ್ಳಿ: ಮಾದಕ ವಸ್ತು ಸೇವನೆ ಪ್ರಕರಣ: ಮೂವರು ಅರೆಸ್ಟ್‌

ಇದನ್ನೂ ಓದಿ : Bomb Threat Call : ಗೂಗಲ್‌ನ ಮುಂಬೈ ಕಚೇರಿಗೆ ಬಾಂಬ್ ಬೆದರಿಕೆ : ಕರೆ ಮಾಡಿದವರ ಬಂಧನ

ಇದನ್ನೂ ಓದಿ : ಟರ್ಕಿಯಲ್ಲಿ ಭೂಕಂಪನ : ಸಿರಿಯಾದಲ್ಲಿ 34,000ಕ್ಕೇರಿದ ಸಾವಿನ ಸಂಖ್ಯೆ

ಪೊಲೀಸರು ಮಾಲ್ ಮ್ಯಾನೇಜ್‌ಮೆಂಟ್‌ನಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದು, ಆರೋಪಿಯನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಾರೆ.

Rape with drugs: A woman was drugged and raped inside a car in the parking lot of a mall

RELATED ARTICLES

Most Popular