ಬ್ರಹ್ಮಾವರ : ಬೃಹತ್ ಗಾತ್ರದ ಓವನ್ ಸ್ಪೋಟಗೊಂಡು ಬೇಕರಿ ಮಾಲೀಕ ಸಾವನ್ನಪ್ಪಿದ್ದಾರೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮಾಬುಕಳದಲ್ಲಿ ಈ ದುರ್ಘಟನೆ ಸಂಭವಿಸಿದೆ.
ರಾಬರ್ಟ್ ಪುಟಾರ್ಡೋ ಎಂಬವರೇ ಎಂಬವರೇ ಸಾವನ್ನಪ್ಪಿರುವ ದುರ್ದೈವಿ. ಎಂದಿನಂತೆ ಇಂದು ಬೆಳಗ್ಗೆ ಓವನ್ ಸ್ಟಾರ್ಟ್ ಮಾಡಿದ್ದ ವೇಳೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಓವನ್ ಸ್ಪೋಟದ ರಭಸಕ್ಕೆ ಮಾಲೀಕರ ದೇಹ ಸಂಪೂರ್ಣವಾಗಿ ಛಿದ್ರವಾಗಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಕೋಟ ಠಾಣೆಯ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಇತ್ತೀಚಿಗೆ ಪುಟಾರ್ಡೋ ಪುಡ್ ಪ್ರಾಡಕ್ಟ್ ಕಾರ್ಖಾನೆಯನ್ನು ಇತ್ತೀಚಿಗಷ್ಟೇ ಸೀಲ್ ಡೌನ್ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಖಾನೆಯ ಮಾಲೀಕರೇ ಓವನ್ ನಿರ್ವಹಣೆ ಮಾಡುತ್ತಿದ್ದರು.