ಮಂಗಳವಾರ, ಏಪ್ರಿಲ್ 29, 2025
HomeCoastal NewsSadananda Serigar suicide: ಕುರುಪ್ ಸಿನಿಮಾ ಶೈಲಿಯಲ್ಲಿ ಕೊಲೆ ಪ್ರಕರಣ : ಸದಾನಂದ ಸೇರಿಗಾರ್ ಜೈಲಿನಲ್ಲಿ...

Sadananda Serigar suicide: ಕುರುಪ್ ಸಿನಿಮಾ ಶೈಲಿಯಲ್ಲಿ ಕೊಲೆ ಪ್ರಕರಣ : ಸದಾನಂದ ಸೇರಿಗಾರ್ ಜೈಲಿನಲ್ಲಿ ಆತ್ಮಹತ್ಯೆ

- Advertisement -

ಉಡುಪಿ : (Sadananda Serigar suicide) ತಾನು ಸತ್ತಿದ್ದೇನೆಂದು ನಂಬಿಸಲು ವ್ಯಕ್ತಿಯೋರ್ವನ್ನು ಕಾರಿನಲ್ಲಿ ಕರೆದೊಯ್ದು, ಉಡುಪಿ ಜಿಲ್ಲೆಯ ಶಿರೂರಿನಲ್ಲಿ ಕಾರು ಸಮೇತ ವ್ಯಕ್ತಿಯೋರ್ವನನ್ನು ಪಾತಕಿಗಳು ಸುಟ್ಟು ಹಾಕಿದ್ದರು. ಈ ಪ್ರಕರಣ ಕರಾವಳಿಯಾದ್ಯಂತ ಸಂಚಲನವನ್ನು ಮೂಡಿಸಿತ್ತು. ಆದ್ರೆ ಇದೇ ಪ್ರಕರಣದ ಕಿಂಗ್ ಪಿನ್ ಆಗಿ ಜೈಲು ಸೇರಿದ್ದ ಸದಾನಂದ ಸೇರಿಗಾರ್ ಇದೀಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಉಡುಪಿಯ ಸಬ್ ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿದ್ದ ಸದಾನಂದ ಸೇರಿಗಾರ್ (Sadananda Serigar suicide) ಇಂದು ಮುಂಜಾನೆ ಐದು ಗಂಟೆಯ ಸುಮಾರಿಗೆ ಪಂಚೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 20 ಮಂದಿ ಕೈದಿಗಳಿರುವ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಗಮಿಸಿದ ಖೈದಿಗಳು ಕೂಡಲೇ ನೇಣಿನ ಕುಣಿಕೆಯಿಂದ ಬಿಡಿಸಿದ್ದರು. ಆದರೆ ಆಸ್ಪತ್ರೆಗೆ ಕರೆದೊಯ್ಯುವ ವೇಳೆಯಲ್ಲಿ ಆತ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ಕಾರ್ಕಳ ಮೂಲದ ಸದಾನಂದ ಸೇರಿಗಾರ್ ಸರ್ವೇಯರ್ ಆಗಿ ಕೆಲಸ ಮಾಡಿಕೊಂಡಿದ್ದ. ಆದರೆ ಸರ್ವೇ ವಿಚಾರದಲ್ಲಿ ಅವ್ಯವಹಾರ ಮಾಡಿಕೊಂಡಿದ್ದ. ಈ ಪ್ರಕರಣ ತನಗೆ ಮುಳುವಾಗಲಿದೆ ಅನ್ನೋದು ತಿಳಿಯುತ್ತಿದ್ದಂತೆಯೇ ಕುರುಪ್ ಸಿನಿಮಾ ಮಾದರಿಯಲ್ಲಿ ವ್ಯಕ್ತಿಯೋರ್ವನನ್ನು ಉಡುಪಿ ಜಿಲ್ಲೆಯ ಗಡಿಭಾಗವಾಗಿರುವ ಬೈಂದೂರು ಜಿಲ್ಲೆಯ ಶಿರೂರು ಸಮೀಪದ ಹೇನ್ ಬೇರು ಎಂಬಲ್ಲಿನ ಕಾಡಿನಲ್ಲಿ ಆನಂದ ದೇವಾಡಿಗ ಎಂಬವರನ್ನು ಕೊಲೆ ಮಾಡಿದ್ದಾನೆ. ಸುಟ್ಟ ಕಾರಿನಲ್ಲಿ ತಾನೇ ಸತ್ತಿರುವುದಾಗಿ ಬಿಂಬಿಸಲು ಹೊರಟು ಪೊಲೀಸರ ಕೈಯಲ್ಲಿ ಬಂಧಿಯಾಗಿದ್ದಾನೆ. ಈತನ ಜೊತೆಗೆ ಸದಾನಂದ ಸೇರಿಗಾರ್ ಸಹೋದರ ಹಾಗೂ ಇಬ್ಬರು ಆಪ್ತರು ಬಂಧನಕ್ಕೆ ಒಳಗಾಗಿದ್ದರು.

ಇದನ್ನೂ ಓದಿ : Thawar Chand Gehlot: ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಕಾರು ಚಾಲಕ ಹೃದಯಾಘಾತದಿಂದ ಸಾವು

ಇದನ್ನೂ ಓದಿ : small child died: ನೀರಿನ ಬಕೆಟ್‌ ಗೆ ಬಿದ್ದು ಪ್ರಾಣ ಕಳೆದುಕೊಂಡ ಮುದ್ದು ಕಂದಮ್ಮ..!

ಏನಿದು ಪ್ರಕರಣ ?

ಸದಾನಂದ ಶೇರೆಗಾರ್ 2009ರಲ್ಲಿ ಫೋರ್ಜರಿ ಮಾಡಿದ ಪ್ರಕರಣದ ಬಂಧನ ಭೀತಿಯಿಂದ ತಪ್ಪಿಸಿಕೊಳ್ಳಲು ಕೈಂ ಸ್ಟೋರಿ ಒಂದರಲ್ಲಿ ನೋಡಿದ ಕಥೆಯಂತೆ ತಾನೇ ಸತ್ತುಹೋಗಿರುವ ಸುದ್ದಿ ಬಿಂಬಿಸಲು ಸ್ವಂತ ಕಾರಿನಲ್ಲಿ ತನ್ನದೇ ವ್ಯಕ್ತಿತ್ವ ಹೋಲುವ ವ್ಯಕ್ತಿಯನ್ನು ತನ್ನ ಅನೈತಿಕ ಸಂಬಂಧದ ಗೆಳತಿ ಶಿಲ್ಪಾ ಪೂಜಾರಿ ಮೂಲಕ ಬಲೆಗೆ ಬೀಳಿಸಿದ್ದಾನೆ. ಕಾರ್ಕಳದಲ್ಲಿ ಕಂಠಪೂರ್ತಿ ಕುಡಿಸಿ ವಯಾಗ್ರ ಮಾತ್ರೆ ಎಂದು ನಿದ್ರೆ ಮಾತ್ರ ನೀಡಿ ಕಾರಿನಲ್ಲಿ ಕೂರಿಸಿಕೊಂಡು ಬಂದು ಹೇನ್‌ಬೇರು ರಸ್ತೆ ನಿರ್ಜನ ಪ್ರದೇಶದಲ್ಲಿ ಪೆಟ್ರೋಲ್ ಸುರಿದು ಕಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದರು. ಇದರ ಕುರಿತು ತನಿಖೆ ನಡೆಸಿದ ಬೈಂದೂರು ಪೊಲೀಸರು ಪ್ರಕರಣದ ಕಿಂಗ್‌ ಪಿನ್‌ ಆದ ಸದಾನಂದ ಸೇರಿಗಾರ್‌ ನನ್ನು ಬಂಧಿಸಿದ್ದರು.

(Sadananda Serigar suicide) The miscreants took the person in a car to make him believe that he was dead and burnt the person along with the car at Shirur in Udupi district. The case created a stir across the coast. Sadanand Serigar, who was jailed as the kingpin of this case, has now committed suicide.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular