Mayank-Ashita blessed with baby boy : ಗಂಡು ಮಗುವಿನ ತಂದೆಯಾದ ಮಯಾಂಕ್ ಅಗರ್ವಾಲ್

ಬೆಂಗಳೂರು: (Mayank Agarwal – Ashita Sood)ಭಾರತ ಟೆಸ್ಟ್ ತಂಡದ ಆರಂಭಿಕ ಬ್ಯಾಟ್ಸ್’ಮನ್, ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ (Mayank Agarwal) ಗಂಡು ಮಗುವಿನ ತಂದೆಯಾಗಿದ್ದಾರೆ. ಮಗುವಿನ ನಿರೀಕ್ಷೆಯಲ್ಲಿದ್ದಾರೆ. (Mayank-Ashita blessed with baby boy) ಮಯಾಂಕ್ ಅವರ ಪತ್ನಿ ಆಶಿತಾ ಸೂದ್ ಅಗರ್ವಾಲ್ (Ashita Sood) ಡಿಸೆಂಬರ್ 8ರಂದು ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಸಂಭ್ರಮವನ್ನು ಮಯಾಂಕ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಗುವಿಗೆ ‘’ಆಯಾನ್ಶ್’’ ಎಂದು ಹೆಸರಿಟ್ಟಿದ್ದಾರೆ.

ಕರ್ನಾಟಕದ ಸ್ಟಾರ್ ಕ್ರಿಕೆಟಿಗ, ಮಯಾಂಕ್ ಅಗರ್ವಾಲ್ ಮತ್ತು ಆಶಿತಾ ಸೂದ್ 2018ರ ಜೂನ್ 4ರಂದು ಮದುವೆಯಾಗಿದ್ದರು. ದೀರ್ಘಕಾಲದ ಗೆಳೆಯ-ಗೆಳತಿಯರಾಗಿದ್ದ ಮಯಾಂಕ್ ಮತ್ತು ಆಶಿತಾ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ಇಂಟ್ರೆಸ್ಟಿಂಗ್ ಸಂಗತಿ ಏನಂದ್ರೆ ಆಶಿತಾ ಸೂದ್, ರಾಜ್ಯದ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರ ಪುತ್ರಿ. 2018ರ ಜೂನ್ 31ರಂದು ಇಂಗ್ಲೆಂಡ್’ನ ಲಂಡನ್’ನಲ್ಲಿರುವ ಗಗನಚುಂಬಿ ಲಂಡನ್ ಐ (London Eye) ಕಟ್ಟಡದ ತುತ್ತ ತುದಿಯಲ್ಲಿ ಮಯಾಂಕ್ ಅಗರ್ವಾಲ್, ಆಶಿತಾ ಸೂದ್ ಅವರಿಗೆ ನಿಶ್ಚಿತಾರ್ಥದ ಉಂಗುರ ತೊಡಿಸಿದ್ದರು.

31 ವರ್ಷದ ಮಯಾಂಕ್ ಅಗರ್ವಾಲ್ ಭಾರತ ಪರ 21 ಟೆಸ್ಟ್ ಪಂದ್ಯಗಳನ್ನಾಡಿದ್ದು, 6 ಶತಕಗಳ ಸಹಿತ 1488 ರನ್ ಗಳಿಸಿದ್ದಾರೆ. ಇತ್ತೀಚೆಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡಿರುವ ಮಯಾಂಕ್ ದೇಶೀಯ ಕ್ರಿಕೆಟ್’ಗೆ ಮರಳಿದ್ದು ಕರ್ನಾಟಕ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಮಯಾಂಕ್ ನಾಯಕತ್ವದಲ್ಲಿ ಕರ್ನಾಟಕ ತಂಡ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು.

ಮಯಾಂಕ್ ಅಗರ್ವಾಲ್ ನಾಯಕತ್ವದಲ್ಲಿ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಟೂರ್ನಿಯ ಸೆಮಿಫೈನಲ್’ನಲ್ಲಿ ಸೋಲು ಕಂಡಿತ್ತು. ಇದೀಗ ಕರ್ನಾಟಕ ತಂಡ ಮಯಾಂಕ್ ಅಗರ್ವಾಲ್ ನಾಯಕತ್ವದಲ್ಲಿ ರಣಜಿ ಟ್ರೋಫಿಗೆ ಸಜ್ಜಾಗಿದ್ದು, ಕರ್ನಾಟಕ ತಂಡದ ಅಭಿಯಾನ ಡಿಸೆಂಬರ್ 13ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಸರ್ವಿಸಸ್ ವಿರುದ್ಧದ ಪಂದ್ಯದೊಂದಿಗೆ ಆರಂಭವಾಗಲಿದೆ. ಡಿಸೆಂಬರ್ 20ರಂದು ಬೆಂಗಳೂರನಲ್ಲೇ ನಡೆಯುವ ತನ್ನ 2ನೇ ಲೀಗ್ ಪಂದ್ಯದಲ್ಲಿ ಕರ್ನಾಟಕ ತಂಡ, ಪಾಂಡಿಚೇರಿ ತಂಡವನ್ನು ಎದುರಿಸಲಿದೆ.

ರಣಜಿ ಟ್ರೋಫಿ 2022-23: ಮೊದಲೆರಡು ಪಂದ್ಯಗಳಿಗೆ ಕರ್ನಾಟಕ ತಂಡ (Karnataka Ranji Team) :
1.ಮಯಾಂಕ್ ಅಗರ್ವಾಲ್ (ನಾಯಕ), 2.ಆರ್.ಸಮರ್ಥ್ (ಉಪನಾಯಕ), 3.ನಿಕಿನ್ ಜೋಸ್, 4.ವಿಶಾಲ್ ಓನಟ್, 5.ಮನೀಶ್ ಪಾಂಡೆ, 6.ಕೆ.ವಿ ಸಿದ್ಧಾರ್ಥ್, 7.ಬಿ.ಆರ್ ಶರತ್ (ವಿಕೆಟ್ ಕೀಪರ್), 8.ಶರತ್ ಶ್ರೀನಿವಾಸ್ (ವಿಕೆಟ್ ಕೀಪರ್), 9.ಕೃಷ್ಣಪ್ಪ ಗೌತಮ್, 10.ಶ್ರೇಯಸ್ ಗೋಪಾಲ್, 11.ರೋನಿತ್ ಮೋರೆ, 12.ವಿ.ಕೌಶಿಕ್, 13.ವಿದ್ವತ್ ಕಾವೇರಪ್ಪ, 14.ವೈಶಾಖ್ ವಿಜಯ್ ಕುಮಾರ್, 15.ಶುಭಾಂಗ್ ಹೆಗ್ಡೆ.

ಕೋಚ್: ಪಿ.ವಿ ಶಶಿಕಾಂತ್
ಫೀಲ್ಡಿಂಗ್ ಕೋಚ್: ದೀಪಕ್ ಚೌಗುಲೆ
ಫಿಸಿಯೊ: ಜಾಬಾ ಪ್ರಭು
ಸ್ಟ್ರೆಂತ್ & ಕಂಡಿಷನಿಂಗ್ ಕೋಚ್: ಕೆ.ಸಿ ಅವಿನಾಶ್
ಮ್ಯಾನೇಜರ್: ಎ.ರಮೇಶ್ ರಾವ್
ವೀಡಿಯೊ ಅನಾಲಿಸ್ಟ್: ರಾಜ್ ಕಿರೀಟ್ ಕಪಾಡಿಯಾ

ಇದನ್ನೂ ಓದಿ : Karun Nair Emotional tweet : “ಡಿಯರ್ ಕ್ರಿಕೆಟ್.., ನನಗೊಂದು ಚಾನ್ಸ್ ಕೊಡು”.. ರಣಜಿ ತಂಡದಿಂದ ಹೊರ ಬಿದ್ದ ಕರುಣ್ ನಾಯರ್ ಭಾವುಕ ಸಂದೇಶ

ಇದನ್ನೂ ಓದಿ : Exclusive : ದ್ವಿಶತಕವೀರ ಇಶಾನ್ ಕಿಶನ್ ಯಶಸ್ಸಿನ ಹಿಂದಿದೆ ಅಣ್ಣನ ತ್ಯಾಗ.. ಇದು ಸ್ವತಃ ಇಶಾನ್ ಹೇಳಿದ ಸತ್ಯ

ಇದನ್ನೂ ಓದಿ : Sachin Vs Virat : ಅಂದು ಸಚಿನ್, ಇಂದು ಕಿಂಗ್ ಕೊಹ್ಲಿ : ಬಾಂಗ್ಲಾದೇಶ ವಿರುದ್ಧವೇ ನೀಗಿತು ಶತಕದ ಬರ

ರಣಜಿ ಟ್ರೋಫಿ 2022-23: ಕರ್ನಾಟಕ ತಂಡದ ವೇಳಾಪಟ್ಟಿ (Ranji Trophy Karnataka)
ಡಿಸೆಂಬರ್ 13-16 Vs ಸರ್ವಿಸಸ್ (ಬೆಂಗಳೂರು)
ಡಿಸೆಂಬರ್ 20-23 Vs ಪಾಂಡಿಚೇರಿ (ಬೆಂಗಳೂರು)
ಡಿಸೆಂಬರ್ 27-30 Vs ಗೋವಾ (ಪೊರ್ವರಿಮ್)
ಜನವರಿ 03-06 Vs ಛತ್ತೀಸ್’ಗಢ (ರಾಯ್ಪುರ)
ಜನವರಿ 10-13 Vs ರಾಜಸ್ಥಾನ (TBC)
ಜನವರಿ 17-20 Vs ಕೇರಳ (ತಿರುವನಂತಪುರಂ)
ಜನವರಿ 24-27 Vs ಜಾರ್ಖಂಡ್ (ಚಂಢೀಗಢ)

Mayank-Ashita blessed with baby boy : Mayank Agarwal is the father of a baby boy

Comments are closed.