Shocking Video : ದೇಶದಲ್ಲಿ ಮಹಿಳೆಯರ ಸುರಕ್ಷತೆಯನ್ನೇ ಗಮನದಲ್ಲಿಟ್ಟುಕ್ಕೊಂಡು ಸಾಕಷ್ಟು ಕಾನೂನುಗಳನ್ನು ಜಾರಿಗೆ ತರಲಾಗಿದೆ. ಆದರೆ ಈ ಎಲ್ಲಾ ಕಾನೂನುಗಳು ಇದ್ದರೂ ಸಹ ಮಹಿಳೆಯರು ದೇಶದಲ್ಲಿ ಸಂಪೂರ್ಣ ಸುರಕ್ಷಿತರಾಗಿ ಇದ್ದಾರಾ ಎಂದು ಕೇಳಿದರೆ ಇದಕ್ಕೆ ಹೌದು ಎಂದು ಉತ್ತರ ನೀಡುವುದು ತುಂಬಾನೇ ಕಷ್ಟ. ಇದೇ ಮಾತಿಗೆ ಪುಷ್ಠಿ ನೀಡುವಂತಹ ಬೆಚ್ಚಿ ಬೀಳಿಸುವ ಘಟನೆಯೊಂದು ( Snatchers Dragging Woman )ರಾಷ್ಟ್ರ ರಾಜಧಾನಿ ದೆಹಲಿಯ ಶಾಲಿಮಾರ್ ಬಾಗ್ ಪ್ರದೇಶದಲ್ಲಿ ನಡೆದಿದೆ.
ಈಗಂತೂ ಎಲ್ಲೆಂದರಲ್ಲಿ ಮೊಬೈಲ್ಕಳ್ಳರು, ಸರಗಳ್ಳರ ಸಂಖ್ಯೆಯೇ ಹೆಚ್ಚಾಗಿದೆ. ಶಾಲಿಮಾರ್ ಬಾಗ್ ಎಂಬಲ್ಲಿ ಸಹ ಮಹಿಳೆಯ ಕೈನಿಂದ ಮೊಬೈಲ್ ಕಸಿದುಕೊಳ್ಳಲು ಮುಂದಾದ ಇಬ್ಬರು ಕಳ್ಳರು ಆಕೆಯನ್ನು ಎಳೆದಾಡಿದ ಅಮಾನವೀಯ ಘಟನೆ ವರದಿಯಾಗಿದೆ. ಸ್ಕೂಟಿ ಮೇಲೆ ಬಂದ ಇಬ್ಬರು ಕಳ್ಳರು ರಸ್ತೆಯಲ್ಲಿ ನಡೆದುಕೊಂಡು ಹೋಗ್ತಿದ್ದ ಮಹಿಳೆಯಿಂದ ಮೊಬೈಲ್ ಕಸಿಯಲು ಮುಂದಾಗಿದ್ದಾರೆ. ಇದಕ್ಕೆ ಮಹಿಳೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಸ್ಕೂಟಿ ಸವಾರಿ ಮಾಡುತ್ತಿದ್ದ ಆರೋಪಿಯು ಆಕೆಯನ್ನು 200 ಮೀಟರ್ವರೆಗೆ ಎಳೆದಿದ್ದಾನೆ.
ಸ್ಕೂಟಿ ಜೊತೆಯಲ್ಲಿ ಬಂದ ಮಹಿಳೆಯನ್ನು ನಡುರಸ್ತೆಯಲ್ಲಿ ಬಿಸಾಡಿ ಕಳ್ಳರು ಎಸ್ಕೇಪ್ ಆಗಿದ್ದಾರೆ. ಸ್ಕೂಟಿಯಿಂದ ಮಹಿಳೆ ಬೀಳುವುದು ಗಮನಕ್ಕೆ ಬರುತ್ತಿದ್ದಂತೆಯೇ ಸಾರ್ವಜನಿಕರು ಜಮಾಯಿಸಿದ್ದಾರೆ. ರಸ್ತೆಯಲ್ಲಿ ವಾಹನ ಸವಾರಿ ಮಾಡುತ್ತಿದ್ದವರೂ ಸಹ ವಾಹನವನ್ನು ನಿಲ್ಲಿಸಿ ಮಹಿಳೆಯತ್ತ ಬಂದಿದ್ದಾರೆ. ಈ ಶಾಕಿಂಗ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಜನತೆ ಆಘಾತ ಹೊರಹಾಕ್ತಿದ್ದಾರೆ. ಗಾಯಗೊಂಡ ಮಹಿಳೆಯು ದೆಹಲಿ ಫೋರ್ಟಿಸ್ ಆಸ್ಪತ್ರೆಯ ಸಿಬ್ಬಂದಿಯಾಗಿದ್ದು ಇದೀಗ ಅದೇ ಆಸ್ಪತ್ರೆಗೆ ಮಹಿಳೆಯನ್ನು ದಾಖಲಿಸಲಾಗಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ.
ಪ್ರೀತಿಯಲ್ಲಿ ಹೆಚ್ಚಿದ ಅಂತರ; ಪ್ರಿಯತಮೆಯಿಂದಲೇ ಪ್ರಿಯತಮನ ಮೇಲೆ ಫೈರಿಂಗ್..!
ಪ್ರೀತಿ ಮಾಯೆ ಹುಷಾರು ಅಂತಾರೆ. ಈ ಮಾತು ನಿಜ ಕೂಡ ಹೌದು. ಪ್ರೀತಿಯಲ್ಲಿ ಕೊಂಚ ಯಾಮಾರಿದ್ರೂ ಜೀವನವೇ ಹಾಳಾಗುವ ಸಾಧ್ಯತೆ ಇರುತ್ತದೆ. ಆದರೆ ಪಶ್ಚಿಮ ಬಂಗಾಳದಲ್ಲಿ ವರದಿಯಾಗಿರುವ ಪ್ರಕರಣವೊಂದರಲ್ಲಿ ಸ್ವತಃ ಪ್ರಿಯತಮೆಯೇ ತನ್ನ ಪ್ರಿಯತಮನನ್ನು ಕೊಲೆ ಮಾಡಲು ಮುಂದಾಗಿದ್ದಾಳೆ.
ಹೌದು..! ಬಾಯ್ಫ್ರೆಂಡ್ ತನ್ನನ್ನು ಮೊದಲಿನಂತೆ ಪ್ರೀತಿಸುತ್ತಿಲ್ಲ ಎಂದು ಮನನೊಂದ ಯುವತಿಯು ಆತನ ಫೈರಿಂಗ್ ನಡೆಸಿದ ಆಘಾತಕಾರಿ ಘಟನೆಯೊಂದು ಪಶ್ಚಿಮ ಬಂಗಾಳದಲ್ಲಿ ಕಾಟ್ವಾ ಪೊಲೀಸ್ ಠಾಣಾ ವ್ಯಾಪ್ತಿ ಕೇಶಿಯಾ ಎಂಬಲ್ಲಿ ನಡೆದಿದೆ. ಅಂದಹಾಗೆ ಇವರಿಬ್ಬರು ಪರಸ್ಪರ ಒಬ್ಬರನ್ನೊಬ್ಬರು ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರಂತೆ. ಇಬ್ಬರಿಗೂ ಈಗ 22 ವರ್ಷ ವಯಸ್ಸು. ಬಾಯ್ಫ್ರೆಂಡ್ ತನ್ನ ಜೊತೆ ಅಂತರ ಕಾಯ್ದುಕೊಳ್ಳುತ್ತಿದ್ದಾನೆ ಎಂಬ ಕೊರಗು ಪ್ರಿಯತಮೆಗಿತ್ತು ಎನ್ನಲಾಗಿದೆ.
ಒಂದು ದಿನ ತನ್ನ ಪ್ರಿಯತಮನನ್ನು ಭೇಟಿಯಾಗಲೆಂದು ಆತನನ್ನು ಹತ್ತಿರದ ಸರ್ಕಸ್ ಮೈದಾನಕ್ಕೆ ಬರುವಂತೆ ಹೇಳಿದ್ದಾಳೆ. ಪ್ರಿಯತಮೆ ಹೇಳಿದ ಮಾತಿಗೆ ಬೆಲೆ ಕೊಟ್ಟು ಆತ ಕೂಡ ಸ್ಥಳಕ್ಕೆ ಆಗಮಿಸಿದ್ದಾನೆ. ಪ್ರಿಯತಮನನ್ನು ಜೋರಾಗಿ ತಬ್ಬಿಕೊಂಡ ಈಕೆ ಬಳಿಕ ಆತನಿಗೆ ಚುಂಬಿಸಿದ್ದಾಳೆ. ಇಷ್ಟು ಸಾಲದು ಎಂಬಂತೆ ಆತನ ಜೊತೆ ಸಿಗರೇಟ್ ಕೂಡ ಸೇದಿದ್ದಾಳೆ.
ಆದರೆ ಇಷ್ಟಕ್ಕೆ ಕತೆ ಮುಗಿಯಲಿಲ್ಲ. ಆತನಿಗೆ ಚುಂಬಿಸಿದ ಬಳಿಕ ಬ್ಯಾಗಿನಿಂದ ಪಿಸ್ತೂಲ್ ಹೊರತೆಗೆದ ಪ್ರಿಯತಮೆ ಆತನ ಮೇಲೆ ಫೈರಿಂಗ್ ನಡೆಸಿದ್ದಾಳೆ. ಅದೃಷ್ಟವಶಾತ್ ಗುಂಡು ಯುವಕನ ಹೊಟ್ಟೆ ತರುಚಿಕೊಂಡು ಹೋಗಲಷ್ಟೇ ಶಕ್ತವಾಗಿದೆ. ಹೀಗಾಗಿ ಆತನ ಬದುಕುಳಿದಿದ್ದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಯುವಕನ ಮೇಲೆ ಫೈರಿಂಗ್ ನಡೆಸಿ ಎಸ್ಕೇಪ್ ಆಗಿದ್ದ ಯುವತಿಯ ಹುಡುಕಾಟ ಆರಂಭಿಸಿದ ಪೊಲೀಸರು ಕೊನೆಗೂ ಆಕೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆಯ ವೇಳೆ ಯುವತಿಯು ಕೊಲೆ ಪ್ರಯತ್ನದ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದಾಳೆ. ತನಿಖೆಗೆ ಚುರುಕು ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ : woman shoots at boyfriend : ಪ್ರೀತಿಯಲ್ಲಿ ಹೆಚ್ಚಿದ ಅಂತರ; ಪ್ರಿಯತಮೆಯಿಂದಲೇ ಪ್ರಿಯತಮನ ಮೇಲೆ ಫೈರಿಂಗ್..!
ಇದನ್ನೂ ಓದಿ : Woman consumes sanitiser : ಸ್ಯಾನಿಟೈಸರ್ ಸೇವಿಸಿ ಆತ್ಮಹತ್ಯೆಗೆ ಯತ್ನ: ಮಹಿಳೆಯನ್ನು ಖಾಕಿ ರಕ್ಷಿಸಿದ ಪರಿಯೇ ರೋಚಕ
Shocking Video Shows Snatchers Dragging Woman 200 Metres in Delhi’s Shalimar Bagh