Uttarakhand : ನಮಗಿಂತ ಕೆಲವರು ತುಂಬಾ ಹಿರಿಯರಿದ್ದರೆ ಪ್ರೀತಿಪೂರ್ವಕವಾಗಿ ಅವರನ್ನು ಅಂಕಲ್ ಅಥವಾ ಆಂಟಿ ಎಂದು ಕರೆಯೋದು ವಾಡಿಕೆ. ಆದರೆ ಬಹುತೇಕರು ಈ ರೀತಿ ಕರೆಯಿಸಿಕೊಳ್ಳೋದನ್ನು ಇಷ್ಟ ಪಡೋದಿಲ್ಲ. ಕೆಲವರಿಗೆ ಯಾರ ಬಳಿಯಾದರೂ ಅಂಕಲ್ ಅಥವಾ ಆಂಟಿ ಎಂದು ಕರೆಸಿಕೊಂಡರೆ ಮುಜುಗರ ವಾಗೋದು ಸಹಜ. ಆದರೆ ಈ ಗ್ರಾಮದಲ್ಲಿ ನಡೆದ ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಅಂಕಲ್ ಎಂದು ಕರೆದಿದ್ದಕ್ಕೆ ಕೋಪಗೊಂಡ ವ್ಯಕ್ತಿಯು ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ..!
ಉತ್ತರಾಖಂಡ್ನ ಉಧಮ್ ಸಿಂಗ್ ನಗರದಲ್ಲಿ ಇಂತಹದ್ದೊಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಸಿತಾರ್ಗಂಜ್ ಎಂಬ ಪ್ರದೇಶದಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಅಂಗಡಿ ಮಾಲೀಕನೊಬ್ಬನಿಗೆ ಅಂಕಲ್ ಎಂದು ಕರೆದಿದ್ದಾಳೆ. ಇಷ್ಟಕ್ಕೇ ಕೋಪಗೊಂಡ ಅಂಗಡಿಯಾತ ವಿದ್ಯಾರ್ಥಿನಿಗೆ ಮನಬಂದಂತೆ ಥಳಿಸಿದ್ದಾನೆ. ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿದ್ಯಾರ್ಥಿನಿಯ ಸ್ಥಿತಿ ಎಷ್ಟರ ಮಟ್ಟಿಗೆ ಗಂಭೀರವಾಗಿದೆ ಅಂದರೆ ಆಕೆಗೆ ಕೃತಕ ಆಮ್ಲಜನಕವನ್ನು ಅಳವಡಿಸಲಾಗಿದೆ.
ಸಿತಾರಗಂಜ್ನ ಇಸ್ಲಾಂನಗರದಲ್ಲಿ ವಾಸಿಸುತ್ತಿರುವ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ 18 ವರ್ಷದ ನಿಶಾ ಕೆಲವು ದಿನಗಳ ಹಿಂದೆಯಷ್ಟೇ ಖತೀಮಾ ರಸ್ತೆಯಲ್ಲಿರುವ ಅಂಗಡಿಯೊಂದರಲ್ಲಿ ಬ್ಯಾಡ್ಮಿಂಟನ್ ಖರೀದಿ ಮಾಡಿದ್ದಳು. ಆದರೆ ಆಕೆ ಮನೆಗೆ ಬಂದ ವೇಳೆ ಬ್ಯಾಡ್ಮಿಂಟನ್ ಬ್ಯಾಟ್ನಲ್ಲಿ ಸಮಸ್ಯೆಯಿದೆ ಎಂದು ತಿಳಿದುಬಂದಿದೆ. ಹೀಗಾಗಿ ಅಂಗಡಿಗೆ ಮರಳಿದ ನಿಶಾ ಬ್ಯಾಡ್ಮಿಂಟನ್ ಬ್ಯಾಟ್ ಬದಲಾಯಿಸಿಕೊಡಿ ಅಂಕಲ್ ಎಂದು ಕೇಳಿದ್ದಾಳೆ. ಇಷ್ಟಕ್ಕೆ ಸಿಟ್ಟಿಗೆದ್ದ ಅಂಗಡಿಯಾತ ನಿಶಾ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ಅಂಗಡಿಯಾತ ಮೊದಲು ನಿಶಾಳನ್ನು ನಿಂದಿಸಿದ್ದಾನೆ. ಇದಕ್ಕೆ ನಿಶಾ ವಿರೋಧ ವ್ಯಕ್ತಪಡಿಸುವಂತೆ ಅಂಗಡಿಯವನು ನಿಶಾ ತಲೆಯನ್ನು ಕೌಂಟರ್ಗೆ ಬಡಿದಿದ್ದಾನೆ. ಇದಾದ ಬಳಿ ನಿಶಾ ಪ್ರಜ್ಞೆ ತಪ್ಪಿದ್ದಾಳೆ. ಕೂಡಲೇ ನಿಶಾಳನ್ನು ಸಂಬಂಧಿಗಳು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಇದನ್ನು ಓದಿ : Odisha couple takes oath : ಪ್ರಮಾಣವಚನ ಸ್ವೀಕರಿಸುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ ಈ ಜೋಡಿ..!
ಇದನ್ನೂ ಓದಿ : Gujarat :ಶ್ವಾನಕ್ಕೆ ಪತ್ನಿ ಹೆಸರಿಟ್ಟಿದ್ದಾರೆಂದು ಆರೋಪಿಸಿ ನೆರೆಮನೆಯಾಕೆಗೆ ಬೆಂಕಿ ಹಚ್ಚಿದ ಪಾಪಿ..!
ಇದನ್ನೂ ಓದಿ : man climbs atop electricity tower : ಸಿಹಿತಿಂಡಿ ಬೇಕೆಂದು ವಿದ್ಯುತ್ ಕಂಬವನ್ನೇರಿ ವ್ಯಕ್ತಿಯ ಹುಚ್ಚಾಟ..!
shopkeeper brutally thrashed and 18 year old girl over being addressed as uncle in Uttarakhand