ಭಾನುವಾರ, ಏಪ್ರಿಲ್ 27, 2025
HomeCrimeyenapoya collage at mangaluru : ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜ್ಯೂನಿಯರ್ಸ್ -ಸೀನಿಯರ್ಸ್ ಗಲಾಟೆ :...

yenapoya collage at mangaluru : ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜ್ಯೂನಿಯರ್ಸ್ -ಸೀನಿಯರ್ಸ್ ಗಲಾಟೆ : 8 ಮಂದಿ ವಿದ್ಯಾರ್ಥಿಗಳ ಬಂಧನ

- Advertisement -

ಮಂಗಳೂರು : yenapoya collage at mangaluru : ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೈ ತಾಗಿದ ಆರೋಪ ಸಂಬಂಧ ಮುಂದುವರಿದ ಜಗಳದಲ್ಲಿ ಸೀನಿಯರ್​ ವಿದ್ಯಾರ್ಥಿಗಳು ಜ್ಯೂನಿಯರ್​ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಘಟನೆಯು ಮಂಗಳೂರು ದೇರಳಕಟ್ಟೆಯಲ್ಲಿರುವ ಯೆನೆಪೋಯ ಕಾಲೇಜಿನಲ್ಲಿ ನಡೆದಿದೆ.


ಹಲ್ಲೆ ಮಾಡಿದ ವಿದ್ಯಾರ್ಥಿಗಳಾದ ಮಂಗಳೂರಿನ ಕೋಟೆಕಾರ್​ನ ಇಬ್ರಾಹಿಂ ರಾಜಿ (20), ಪಾಂಡೇಶ್ವರದ ಸುನೈಫ್ವ( 21), ಉಳ್ಳಾಲದ ಮೊಹಮ್ಮದ್ ಅಫ್ರಿಸ್ (21),ಗುರುಪುರದ ಮೊಹಮ್ಮದ್ ಸಿನಾನ್ ಅಬ್ದುಲ್ಲಾ ( 21),ಕೋಟೆಕಾರ್ ನ ಮೊಹಮ್ಮದ್ ಅಶಾಮ್ (21)ಕೇರಳದ ಕಾಸರಗೋಡು ವಿನ ಶೇಖ್ ಮೊಹಿದ್ದೀನ್ (20),ಬಂದರುನ ಮೊಹಮ್ಮದ್ ಅಫಾಮ್ ಅಸ್ಲಾಮ್ (20) ಹಾಗೂ ಗುರುಪುರದ ಮೊಹಮ್ಮದ್ ಸೈಯ್ಯದ್ ಅಫ್ರೀದ್ (21)ರನ್ನು ಮಂಗಳೂರು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.


ಏನಿದು ಗಲಾಟೆ..?
ಮೇ 28ರಂದು ದೇರಳಕಟ್ಟೆಯಲ್ಲಿರುವ ಯೆನಪೋಯಾ ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು . ಈ ಕಾರ್ಯಕ್ರಮದಲ್ಲಿ ಮೈಗೆ ಕೈ ತಾಕಿದೆ ಎಂಬ ವಿಚಾರವಾಗಿ ಜ್ಯೂನಿಯರ್​ಗಳು ಹಾಗೂ ಸೀನಿಯರ್​ಗಳು ಕಿತ್ತಾಡಿಕೊಂಡಿದ್ದರು. ಈ ಘಟನೆಯ ಬಳಿಕ ಬಿಬಿಎ ಮೂರನೇ ವರ್ಷದ ಈ ಎಲ್ಲಾ ಆರೋಪಿಗಳು ಮಾರಕ ಆಯುಧಗಳನ್ನು ಹಿಡಿದು ಮೊದಲ ವರ್ಷದ ವಿದ್ಯಾರ್ಥಿ ಕೇರಳದ ಶಬಾಬ್​ ಕೆ ಸಹಪಾಠಿ ಶಿಬಿಲ್​ ಜೊತೆ ಇದ್ದಾಗ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಈ ಪ್ರಕರಣ ಸಂಬಂಧ ಇದೀಗ ಎಲ್ಲಾ ಎಂಟು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನು ಓದಿ : Punjabi Singer Sidhu Moosewala : ಪಂಜಾಬಿನ ಗಾಯಕ ಸಿಧು ಮೂಸೆವಾಲಾಗೆ ಗುಂಡಿಕ್ಕಿ ಹತ್ಯೆ!

ಇದನ್ನೂ ಓದಿ : Set Up UPI: ಹಣ ವರ್ಗಾಯಿಸಲು ಯುಪಿಐ ಸೆಟ್‌ ಮಾಡುವುದು ಹೇಗೆ?

students arrested for assault case in yenapoya collage at mangaluru

RELATED ARTICLES

Most Popular