boycott laal singh chaddha : ಆಮಿರ್​ ಖಾನ್​​-ಕರೀನಾ ಕಪೂರ್​​ಗೆ ಹೊಸ ಸಂಕಷ್ಟ: ಲಾಲ್​ ಸಿಂಗ್ ಚಡ್ಡಾ ಸಿನಿಮಾ ಬಹಿಷ್ಕಾರಕ್ಕೆ ಆಗ್ರಹ

boycott laal singh chaddha : ಬಾಲಿವುಡ್​ ನಟ ಆಮೀರ್​ ಖಾನ್​ ಸಧ್ಯ ತಮ್ಮ ಮುಂಬರುವ ಸಿನಿಮಾ ಲಾಲ್​ ಸಿಂಗ್​ ಚಡ್ಡಾ ರಿಲೀಸ್​ನ ತಯಾರಿಯಲ್ಲಿದ್ದಾರೆ. ಈಗಾಗಲೇ ಸಿನಿಮಾದ ಟ್ರೈಲರ್​ ರಿಲೀಸ್​ ಆಗಿದ್ದು ಲಕ್ಷಗಟ್ಟಲೇ ವೀವ್ಸ್​ ಸಂಪಾದಿಸಿದೆ. ಲಾಲ್​ ಸಿಂಗ್​ ಚಡ್ಡಾ ಇದೇ ಬರುವ ಆಗಸ್ಟ್​ 11ರಂದು ತೆರೆಗಪ್ಪಳಿಸಲಿದೆ. ಆದರೆ ಲಾಲ್​ ಸಿಂಗ್​ ಚಡ್ಡಾ ಸಿನಿಮಾ ಟ್ರೈಲರ್​ ರಿಲೀಸ್​ ಆಗುತ್ತಲೇ ಸಾಕಷ್ಟು ಅಪಸ್ವರಗಳು ಕೇಳಿ ಬರುತ್ತಿದೆ.ಸೋಶಿಯಲ್​ ಮೀಡಿಯಾದಲ್ಲಿ ಲಾಲ್​ ಸಿಂಗ್​ ಚಡ್ಡಾ ಸಿನಿಮಾ ಬಹಿಷ್ಕಾರ ಮಾಡುವಂತೆ ಆಗ್ರಹ ಕೇಳಿ ಬಂದಿದೆ.


ಈ ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಕರೀನಾ ಕಪೂರ್​ ಹಾಗೂ ಆಮೀರ್​​ ಖಾನ್​​​ ಈ ಹಿಂದೆ ನೀಡಿರುವ ಸಾಕಷ್ಟು ವಿವಾದಾತ್ಮಕ ಹೇಳಿಕೆಗಳು ಸೋಶಿಯಲ್​ ಮೀಡಿಯಾದಲ್ಲಿ ಇಂತಹದ್ದೊಂದು ವಿವಾದ ಸೃಷ್ಟಿಯಾಗಲು ಕಾರಣವಾಗಿದೆ. ಇದರಿಂದ ಸಿನಿಮಾ ಕಲೆಕ್ಷನ್​ ಮೇಲೆ ಪರಿಣಾಮ ಬೀರಬಹುದೇ ಎಂಬ ಅನುಮಾನ ಕೂಡ ಮೂಡಿದೆ.


ಲಾಲ್​ ಸಿಂಗ್​​ ಚಡ್ಡಾ ಸಿನಿಮಾದ ಟ್ರೈಲರ್​ ರಿಲೀಸ್ ಆಗುತ್ತಿದ್ದಂತೆಯೇ ಕರೀನಾ ಕಪೂರ್​ ಹಾಗೂ ಆಮೀರ್​ ಖಾನ್​ ಈ ಹಿಂದೆ ನೀಡಿರುವ ವಿವಾದಾತ್ಮಕ ಹೇಳಿಕೆಗಳು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಈ ಹೇಳಿಕೆಗಳನ್ನೇ ಆಧಾರವಾಗಿಟ್ಟುಕೊಂಡು ಸೋಶಿಯಲ್​ ಮೀಡಿಯಾದಲ್ಲಿ ಬಾಯ್ಕಾಟ್​​ ಲಾಲ್​ ಸಿಂಗ್​ ಚಡ್ಡಾ ಎಂಬ ಕೂಗು ಕೇಳಿ ಬರುತ್ತಿದೆ.


ಬಾಲಿವುಡ್​ ನಟಿ ಕರೀನಾ ಕಪೂರ್​ ಈ ಹಿಂದೆ ನೀವು ನಮ್ಮ ಸಿನಿಮಾಗಳನ್ನು ನೋಡಲೇಬೇಡಿ. ನಾವು ಯಾರಿಗೂ ಒತ್ತಡ ಹೇರುವುದಿಲ್ಲ ಎಂದು ಹೇಳಿದ್ದರು. ಆಮೀರ್ ಖಾನ್​ ದೇಶದಲ್ಲಿ ಅಸಹಿಷ್ಣುತೆ ಎಂದು ಹೇಳಿದ್ದು ಮಾತ್ರವಲ್ಲದೇ ಶಿವಲಿಂಗಕ್ಕೆ ಹಾಲನ್ನು ಎರೆಯುವುದು ವ್ಯರ್ಥ. ಅದರ ಬದಲು ಅದೇ ಹಾಲನ್ನು ಬಡಮಕ್ಕಳಿಗೆ ನೀಡಿ ಎಂದು ಹೇಳಿಕೆ ನೀಡಿದ್ದರು. ಇದೀಗ ಈ ಎಲ್ಲಾ ಹೇಳಿಕೆಗಳು ಮುನ್ನೆಲೆಗೆ ಬಂದಿದ್ದು ಈ ಸಿನಿಮಾದ ನಾಯಕಿಗೆ ಪ್ರೇಕ್ಷಕರು ಸಿನಿಮಾ ನೋಡೋದೇ ಬೇಕಿಲ್ಲ. ಈ ಸಿನಿಮಾಗೆ ಹಣ ವ್ಯರ್ಥ ಮಾಡುವ ಬದಲು ಅದೇ ಸಮಯವನ್ನು ನಿಮ್ಮ ತಾತ- ಅಜ್ಜಿಯಂದಿರ ಜೊತೆ ಕಳೆಯಿರಿ. ಪುಸ್ತಕಗಳನ್ನು ಓದಿ ಎಂದು ನೆಟ್ಟಿಗರು ಹೇಳಿದ್ದಾರೆ .
ಚಂದನ್​ ಅದ್ವೈತ್​ ಈ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಈ ಸಿನಿಮಾ ಹಾಲಿವುಡ್​ನ ಫಾರೆಸ್ಟ್​ ಗಂಪ್​ ಸಿನಿಮಾದ ಕತೆಯನ್ನೇ ಆಧರಿಸಿದೆ. ಫಾರೆಸ್ಟ್​ ಗಂಪ್​ ಸಿನಿಮಾ ಒಟಿಟಿಯಲ್ಲಿ ಲಭ್ಯವಿದೆ.

ಇದನ್ನು ಓದಿ : Set Up UPI: ಹಣ ವರ್ಗಾಯಿಸಲು ಯುಪಿಐ ಸೆಟ್‌ ಮಾಡುವುದು ಹೇಗೆ?

ಇದನ್ನೂ ಓದಿ : Punjabi Singer Sidhu Moosewala : ಪಂಜಾಬಿನ ಗಾಯಕ ಸಿಧು ಮೂಸೆವಾಲಾಗೆ ಗುಂಡಿಕ್ಕಿ ಹತ್ಯೆ!

boycott laal singh chaddha trends on social media due to aamir khan old controversial statements

Comments are closed.