ಸಿಲ್ಚಾರ್: (Suicide at Live streaming) ತನ್ನ ಗೆಳತಿ ಮದುವೆಯಾಗಲು ನಿರಾಕರಿಸಿದ್ದಕ್ಕೆ ಮನನೊಂದು 27 ವರ್ಷದ ಪಾಗಲ್ ಪ್ರೇಮಿಯೊಬ್ಬ ಫೇಸ್ ಬುಕ್ ನಲ್ಲಿ ಲೈವ್ ಬಂದು ಆತ್ಮಹತ್ಯೆ ಮಾಡಿಕೊಂಡ ದುರಂತ ಘಟನೆ ಸಿಲ್ಚಾರ್ ನಲ್ಲಿ ನಡೆದಿದೆ. ಮೃತ ಪ್ರೇಮಿಯನ್ನು ಜೈದೀಪ್ ರಾಯ್ ಎಂದು ಗುರುತಿಸಲಾಗಿದ್ದು, ವ್ಯಕ್ತಿ ವೈದ್ಯಕೀಯ ಮಾರಾಟ ವೃತ್ತಿಪರರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಮೃತ ಯುವಕ ತಾನು ಪ್ರೀತಿಸಿದ ಹುಡುಗಿಯನ್ನು ಮದುವೆ ಆಗುವುದಾಗಿ ಹುಡುಗಿ ಹಾಗೂ ಆಕೆಯ ಮನೆಯವರಲ್ಲಿ ಪ್ರಸ್ತಾಪವನ್ನು ಇಟ್ಟಿದ್ದಾನೆ. ಬಳಿಕ ಹುಡುಗಿ ಕುಟುಂಬದ ನಿರಾಕರಣೆ ಹಾಗೂ ಒತ್ತಡದಿಂದಾಗಿ ಮದುವೆಯಾಗಲು ನಿರಾಕರಿಸಿದ್ದಾಳೆ. ಇದರಿಂದ ಮನನೊಂದ ಪಾಗಲ್ ಪ್ರೇಮಿ ತಮ್ಮ ಫೇಸ್ ಬುಕ್ ನಲ್ಲಿ ಲೈವ್ ಬಂದು ತಾನು ಆತ್ಮಹತ್ಯೆ (Suicide at Live streaming) ಮಾಡಿಕೊಳ್ಳುತ್ತಿರುವುದಕ್ಕೆ ತನ್ನ ಗೆಳತಿ ಮದುವೆಗೆ ನಿರಾಕರಿಸಿದ್ದು ಕಾರಣ ಎಂದು ಹೇಳಿದ್ದಾನೆ.
” ನಾನು ಮದುವೆಯ ಪ್ರಸ್ತಾಪವನ್ನು ಆಕೆಯ ಕುಟುಂಬದ ಮುಂದಿಟ್ಟಿದ್ದೇನೆ. ಆದರೆ ಎಲ್ಲರ ಮುಂದೆ ಆಕೆ ಮದುವೆಯಾಗುವುದನ್ನು ನಿರಾಕರಿಸಿದ್ದಾಳೆ. ನಂತರ ಆಕೆಯ ಚಿಕ್ಕಪ್ಪ ನನ್ನ ಬಳಿಗೆ ಬಂದು ಅವಳೊಂದಿಗೆ ಸಂಬಂಧ ಮುಂದುವರಿಸಿದರೆ ಆಕೆಯನ್ನು ಕೊಲ್ಲುವುದಾಗಿ ಹೇಳಿದರು. ನನ್ನಿಂದಾಗಿ ಆಕೆಗೆ ತೊಂದರೆಯಾಗಬಾರದು ಎಂದು ನಾನು ಇಹಲೋಕ ತ್ಯಜಿಸುತ್ತಿದ್ದೇನೆ” ಎಂದು ಲೈಸ್ ಸ್ಟ್ರೀಮಿಂಗ್ ನಲ್ಲಿ ಹೇಳಿದ್ದಾನೆ.
ಅಲ್ಲದೇ ತಾನು ಆತ್ಮಹತ್ಯೆ (Suicide at Live streaming) ಮಾಡಿಕೊಳ್ಳುತ್ತಿರುವುದಕ್ಕೆ ತನ್ನ ಕುಟುಂಬ ಸದಸ್ಯರಲ್ಲಿ ಕ್ಷಮೆಯಾಚಿಸಿ ಕುಟುಂಬದ ಮೇಲಿನ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾನೆ. ಆದರೆ ಹುಡುಗಿಯ ಮೇಲೆ ನನಗೆ ಹೆಚ್ಚು ಪ್ರೀತಿ, ಅವಳನ್ನು ಬಿಟ್ಟು ನನಗೆ ಬದುಕಲು ಸಾಧ್ಯವಿಲ್ಲ ಎಂಬುದಾಗಿ ಕೂಡ ಹೇಳಿ ಲೈವ್ ಸ್ಟ್ರೀಮಿಂಗ್ ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತನ ಸಹೋದರ ಹುಡುಗಿಯ ಕುಟುಂಬದ ಮೇಲೆ ಆರೋಪಿಸಿದ್ದು, ” ಹುಡುಗಿಯ ಕುಟುಂಬದವರು ತನ್ನ ತಮ್ಮನ ಮೇಲೆ ಒತ್ತಡ ಹೇರಿದ್ದಾರೆ. ಆಕೆಯ ಚಿಕ್ಕಪ್ಪ ಅವಳನ್ನು ಕೊಲ್ಲುವುದಾಗಿ ಇವನಲ್ಲಿ ಬೆದರಿಕೆ ಹಾಕಿದ್ದಾರೆ. ನನ್ನ ಸಹೋದರ ಒಳ್ಳೆಯ ವ್ಯಕ್ತಿ ಹಾಗೂ ನಮ್ಮ ಇಡೀ ಕುಟುಂಬವನ್ನು ಆತನೇ ನೋಡಿಕೊಳ್ಳುತ್ತಿದ್ದನು. ಅವನು ಸಂಪಾದನೆ ಕೂಡ ಚೆನ್ನಾಗೇ ಮಾಡುತ್ತಿದ್ದ, ಅದರೆ ಹುಡುಗಿಯ ಕುಟುಂಬಕ್ಕೆ ಸಮಸ್ಯೆಯಾಗಿದ್ದು ಏನು ಎಂಬುದು ನನಗೆ ಅರ್ತವಾಗಿಲ್ಲ” ಎಂದು ಮಾಧ್ಯಮದವರ ಮುಂದೆ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ : 100 medical students fall sick : ವಿಷಾಹಾರ ಸೇವನೆ 100ಕ್ಕೂ ಅಧಿಕ ವೈದ್ಯಕೀಯ ವಿದ್ಯಾರ್ಥಿಗಳು ಅಸ್ವಸ್ಥ
ಇದೀಗ ಕುಟುಂಬದವರು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಾಗಿದ್ದು, ಯನಿಖೆ ನಡೆಯುತ್ತಿದೆ.
A tragic incident took place in Silchar where a 27-year-old Pagal lover committed suicide live on Facebook because his girlfriend refused to marry him.