ಇಂಡೋನೇಷ್ಯಾ: (Suicide bombing) ಪೊಲೀಸ್ ಠಾಣೆಯೊಂದರಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಸ್ಫೋಟದಲ್ಲಿ ಪೊಲೀಸ್ ಅಧಿಕಾರಿ ಸೇರಿದಂತೆ ಆತ್ಮಾಹುತಿ ಬಾಂಬರ್ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಇಂಡೋನೇಷ್ಯಾದ ಪಶ್ಚಿಮ ಜಾವಾ ಪ್ರಾಂತ್ಯದಲ್ಲಿ ಬುದವಾರ ನಡೆದಿದೆ.
ಬೆಳಿಗ್ಗೆ 8:20 ರ ಸುಮಾರಿಗೆ ವ್ಯಕ್ತಿಯೋರ್ವ ಚಾಕು ಹಿಡಿದು ಪೊಲೀಸ್ ಠಾಣೆಯ ಕಟ್ಟಡಕ್ಕೆ ಹೋಗಿದ್ದು, ಇದರ ನಂತರ ಠಾಣೆಯಲ್ಲಿ ಸ್ಫೋಟ ಸಂಭವಿಸಿದೆ ಎಂದು ಬಂಡಂಗ್ ಪೊಲೀಸ್ ಅಧಿಕಾರಿ ಅಸ್ಟಿನ್ ಸಿಪಾಯುಂಗ್ ವರದಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ಹತ್ಯೆಗೀಡಾದ ವ್ಯಕ್ತಿಯೇ ಶಂಕಿತ ದುಷ್ಕರ್ಮಿ ಎಂದು ರಾಷ್ಟ್ರೀಯ ಪೊಲೀಸ್ ವಕ್ತಾರ ಅಹ್ಮದ್ ರಮಧನ್ ಹೇಳಿಕೆ ನೀಡಿದ್ದಾರೆ.
Suicide bombing: ಸುಟ್ಟು ಬೂದಿಯಾದ ಅವಶೇಷಗಳು
ಸ್ಫೋಟದ ತೀವ್ರತೆಗೆ ಠಾಣಾ ಕಟ್ಟಡದ ಅವಶೇಷಗಳು ಪೂರ್ತಿಯಾಗಿ ಸುಟ್ಟು ಬೂದಿಯಾಗಿವೆ. ಸ್ಫೋಟದ ಭಾರೀ ಶಬ್ಧಕ್ಕೆ ನಾವೆಲ್ಲ ಭಯಭೀತರಾಗಿದ್ದೆವು ಎಂದು ಸ್ಥಳೀಯರು ವರದಿಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ : Human Sacrifice: ಉತ್ತರ ಪ್ರದೇಶದಲ್ಲಿ ರುಂಡವಿಲ್ಲದ ಮೃತದೇಹ ಪತ್ತೆ: ನರಬಲಿಗಾಗಿ ನಡೆಯಿತೇ 3 ವರ್ಷದ ಬಾಲಕನ ಭೀಕರ ಹತ್ಯೆ..?
ಇದನ್ನೂ ಓದಿ : Bengaluru Crime: ಬೆಂಗಳೂರು : ಯುವಕನ ಕತ್ತು ಸೀಳಿ ಬರ್ಬರ ಹತ್ಯೆ
ಇದನ್ನೂ ಓದಿ : Dubai Crime News : ದುಬೈಗೆ ಪದವಿ ಶಿಕ್ಷಣಕ್ಕೆಂದು ಹೋದ ಉಡುಪಿ ವಿದ್ಯಾರ್ಥಿ ಮೃತ್ಯು
ಇದನ್ನೂ ಓದಿ : Jharkhand Crime News : ಸೋದರ ಸಂಬಂಧಿಯ ಶಿರಚ್ಛೇದ ಮಾಡಿ : ಸೆಲ್ಫಿ ತೆಗೆದು ವಿಕೃತಿ ಮೆರೆದ ವ್ಯಕ್ತಿ
ಇದನ್ನೂ ಓದಿ : Twist in murder case: 7 ವರ್ಷದ ಹಿಂದೆ ಕೊಲೆಗೀಡಾಗಿದ್ದ ಬಾಲಕಿ ಪ್ರತ್ಯಕ್ಷ; ಮಾಡದ ತಪ್ಪಿಗೆ ಜೈಲು ಶಿಕ್ಷೆ ಅನುಭವಿಸಿದನೇ ಅಮಾಯಕ?
ಸ್ಪೋಟದ ಮೂಲವೇನೆಂಬುದು ಇನ್ನೂ ತಿಳಿದಿಲ್ಲ. ಆದರೆ ಇಸ್ಲಾಮಿಕ್ ಉಗ್ರಗಾಮಿಗಳು ವಿಶ್ವದ ಅತಿ ದೊಡ್ಡ ಮುಸ್ಲಿಂ ರಾಷ್ಟ್ರದಲ್ಲಿ ಚರ್ಚುಗಳು, ಪೊಲೀಸ್ ಠಾಣೆಗಳು ಮತ್ತು ವಿದೇಶಿಗರು ಹೆಚ್ಚಾಗಿ ಭೇಟಿ ನೀಡುವ ಸ್ಥಳಗಳು ಸೇರಿದಂತೆ ಹಲವು ಕಡೆ ದಾಳಿಗಳನ್ನು ನಡೆಸಿದ್ದಾರೆ ಎಂಬ ಮಾಹಿತಿ ಇದೆ.
A suicide bomb attack took place in a police station, and the suicide bomber including a police officer was killed in the explosion and many others were injured.