ಶುಕ್ರವಾರ, ಮೇ 16, 2025
HomeCrimeSuicide Case : ನಿನ್ನೆ ಎರಡನೇ ಮದುವೆ ಗಲಾಟೆ, ಇಂದು ಯೋಧ ಮೊದಲನೇ ಹೆಂಡತಿ ಜೊತೆ...

Suicide Case : ನಿನ್ನೆ ಎರಡನೇ ಮದುವೆ ಗಲಾಟೆ, ಇಂದು ಯೋಧ ಮೊದಲನೇ ಹೆಂಡತಿ ಜೊತೆ ಅತ್ಮಹತ್ಯೆ

- Advertisement -

ಹಾಸನ : (Suicide Case) ಯೋಧನೋರ್ವ ವಿಧವೆಯೋರ್ವಳನ್ನುಮದುವೆಯಾಗಿರುವ ವಿಷಯ ಮುಚ್ಚಿಟ್ಟು ಎರಡನೇ ಮದುವೆ ತಯಾರಿ ನಡೆಸಿದ್ದ, ಮದುವೆ ನಡೆಯುತ್ತಿದ್ದ ವೇಳೆಯಲ್ಲಿ ಮಂಟಪಕ್ಕೆ ಬಂದ ಮೊದಲ ಪತ್ನಿ ಮದುವೆ ನಿಲ್ಲಿಸಿ ಗಲಾಟೆ ಮಾಡಿದ್ದಳು. ಇದರಿಂದ ಮನನೊಂದ ಮಹಿಳೆ ಯೋಧನ ಜೊತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನದ ಹೊಂಗೆರೆ ಗ್ರಾಮದಲ್ಲಿ ನಡೆದಿದೆ.

ಕಿರಣ್‌ ಕುಮಾರ್‌ ಹಾಗೂ ಆಶಾ ಎಂಬವರೇ ಮೃತ(Suicide Case) ದಂಪತಿ.ಯೋಧ ಕಿರಣ್‌ ಕುಮಾರ್‌ ಈ ಹಿಂದೆ ವಿಧವೆ ಆಶಾ ಎಂಬವರನ್ನು ಮದುವೆಯಾಗಿದ್ದರು.ಬಳಿಕ ಮೊದಲನೇ ಮದುವೆ ವಿಷಯ ಮುಚ್ಚಿಟ್ಟು ಎರಡನೇ ಮದುವೆಯಾಗಲು ತಯಾರಿ ನಡೆಸಿದ್ದರು. ಹಾಸನ ಹೊರವಲಯದ ಬೂವನಹಳ್ಳಿ ಬಳಿಯ ಕಲ್ಯಾಣ ಮಂಟಪದಲ್ಲಿ ಮದುವೆಗೆ ಸಿದ್ದತೆ ಜೋರಾಗಿಯೇ ನಡೆದಿತ್ತು. ಇನ್ನೇನು ಸಪ್ತಪದಿ ತುಳಿಯುವುದೊಂದೆ ಬಾಕಿ ಅನ್ನುವಾಗ ಯೋಧ ಕಿರಣ್‌ ಕುಮಾರ್‌ ನ ಮೊದಲನೆ ಹೆಂಡತಿ ಮಂಟಪಕ್ಕೆ ಬಂದು ಗಲಾಟೆ ನಡೆಸಿ ಮದುವೆ ನಿಲ್ಲಿಸಿದ್ದಾರೆ.

ಆಶಾ ಎಂಬಾಕೆಯನ್ನು ಕಿರಣ್ ಕುಮಾರ್ ಸುಮಾರು ಆರು ತಿಂಗಳ ಹಿಂದೆಯೇ ಮನೆಯಲ್ಲಿ ದೇವರ ಮುಂದೆ ತಾಳಿ ಕಟ್ಟಿ ಗುಟ್ಟಾಗಿ ಮದುವೆಯಾಗಿದ್ದರು. ಈಗ ಈ ವಿಷಯವನ್ನು ಮುಚ್ಚಿಟ್ಟು ಇನ್ನೊಂದು ಮದುವೆ ಆಗುತ್ತಿದ್ದಾರೆ ಎಂದು ಆಶಾ ಆರೋಪ ಮಾಡಿದ್ದಾರೆ. ವಿಚಾರ ಬಹಿರಂಗವಾಗುತ್ತಿದ್ದಂತೆಯೆ ಹುಡುಗಿ ಕಡೆಯವರು ಮದುವೆಯನ್ನು ನಿಲ್ಲಿಸಿದರು. ಬಳಿಕ ಯೋಧ ಕಿರಣ್‌ ಕುಮಾರ್‌ ಅನ್ನು ಹುಡುಗಿ ಮನೆಯವರು ತರಾಟೆಗೆ ತೆಗದುಕೊಂಡಿದ್ದಾರೆ. ಆಶಾ ಜೊತೆ ಮಂಟಪದಲ್ಲೇ ಕಿರಣ್‌ ಜಗಳ ಕೂಡ ಮಾಡಿದ್ದ. ಮದುವೆ ಮಂಟಪವೇ ಅಲ್ಲೋಲ ಕಲ್ಲೋಲವಾಗಿತ್ತು.

ಇದನ್ನೂ ಓದಿ : RL Kashyap passed away : ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಸಂಶೋಧಕ ಆರ್.ಎಲ್ ಕಶ್ಯಪ್ ವಿಧಿವಶ

ಇದನ್ನೂ ಓದಿ : School vehicle overturned : ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಾಹನ ಪಲ್ಟಿ : ಓರ್ವ ಮಹಿಳೆ ಸಾವು

ಇದನ್ನೂ ಓದಿ : Crime News : ಕಾರಿನಲ್ಲಿ ಅಕ್ರಮವಾಗಿ ರೂ.2 ಕೋಟಿ ಸಾಗಾಟ : 8 ಮಂದಿ ಬಂಧನ

ಈ ವಿಷಯ ತಿಳಿಯುತ್ತಿದ್ದಂತೆ ಪೋಲೀಸರು ಸ್ಥಳಕ್ಕೆ ಧಾವಿಸಿದ್ದು, ಗಲಾಟೆಯನ್ನು ನಿಲ್ಲಿಸಿ ನಂತರ ಎಲ್ಲರನ್ನೂ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಪೋಲೀಸರ ವಿಚಾರಣೆ ಬಳಿಕ ಯೋಧ ಕಿರಣ್‌ ಹಾಗೂ ಆಶಾ ಹೊಂಗೆರೆ ಅರಣ್ಯದ ಬಳಿ ತೆರಳಿದ್ದು, ಸಂಬಂಧಿಯೊಬ್ಬರಿಗೆ ವಾಟ್ಸಾಪ್‌ ಮೂಲಕ ಮೆಸೇಜ್‌ ಮಾಡಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಾಂತಿ ಗ್ರಾಮ ಪೋಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(Suicide Case) A soldier was preparing for a second marriage by concealing the fact that he had married a widow, and while the marriage was going on, the first wife who came to the mandap stopped the marriage and raised a ruckus. An incident where a woman who was offended by this committed suicide along with a soldier took place in Hongere village of Hassan.

RELATED ARTICLES

Most Popular