Pro Kabaddi League : ಪಲ್ಟನ್ ವಿರುದ್ಧ ಸೇಡು ತೀರಿಸಿಕೊಂಡ ಯು ಮುಂಬಾ, ಜೈಪುರ ವಿರುದ್ಧ ಗೆದ್ದ ಪೈರೇಟ್ಸ್

ಪುಣೆ: ಪ್ರೊ ಕಬಡ್ಡಿ ಲೀಗ್-9ನೇ (Pro Kabaddi League)ಆವೃತ್ತಿಯ ಟೂರ್ನಿಯ ಮಹಾರಾಷ್ಟ್ರ ಡರ್ಬಿಯಲ್ಲಿ ಪುಣೇರಿ ಪಲ್ಟನ್ ವಿರುದ್ಧ ಯು ಮುಂಬಾ 34-33 ಅಂತರದ ರೋಚಕ ಗೆಲುವು ಸಾಧಿಸಿದೆ.ಪುಣೆಯ ಬಾಳೇವಾಡಿಯಲ್ಲಿರುವ ಛತ್ರಪತಿ ಶಿವಾಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್’ನಲ್ಲಿ ನಡೆದ ಲೀಗ್’ನ 71ನೇ ಪಂದ್ಯದಲ್ಲಿ ಪುಣೇರಿ ಪಲ್ಟನ್ ವಿರುದ್ಧ ಒಂದು ಅಂಕದ ರೋಚಕ ಗೆಲುವು ಸಾಧಿಸಿದ ಯು ಮುಂಬಾ, ಈ ಹಿಂದಿನ ಪಂದ್ಯದಲ್ಲಿ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಂಡಿತು. ಯು ಮಂಬಾ ಪರ ರೇಡರ್ ಗುಮಾನ್ ಸಿಂಗ್ ಸೂಪರ್-10 ಸಾಧನೆ ಮಾಡಿ ತಂಡದ ಗೆಲುವಿಗೆ ಕಾರಣರಾದರು.

ಯು ಮುಂಬಾ ವಿರುದ್ಧ ಸೋತರೂ ಅಂಕಪಟ್ಟಿಯಲ್ಲಿ ಪುಣೇರಿ ಪಲ್ಟನ್ ಅಗ್ರಸ್ಥಾನದಲ್ಲೇ ಮುಂದುವರಿದಿದೆ. ಆಡಿದ 13 ಪಂದ್ಯಗಳಿಂದ 7 ಗೆಲುವು 4 ಸೋಲು ಹಾಗೂ 2 ಟೈ ಫಲಿತಾಂಶದೊಂದಿಗೆ ಒಟ್ಟು 44 ಅಂಕ ಕಲೆ ಹಾಕಿರುವ ಪಲ್ಟನ್ ಬಳಗ, ಲೀಗ್ ಲೀಡರ್ ಸ್ಥಾನವನ್ನು ತನ್ನಲ್ಲೇ ಉಳಿಸಿಕೊಂಡಿದೆ. 12 ಪಂದ್ಯಗಳಿಂದ 7 ಗೆಲುವು ಸಾಧಿಸಿರುವ ಬೆಂಗಳೂರು ಬುಲ್ಸ್ 41 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ.


ದಿನದ ಮತ್ತೊಂದು ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ 37-30ರ ಅಂತರದಲ್ಲಿ ಗೆದ್ದ ಮೂರು ಬಾರಿಯ ಚಾಂಪಿಯನ್ಸ್ ಪಾಟ್ನಾ ಪೈರೇಟ್ಸ್ 6ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ (ಒಟ್ಟು 38 ಅಂಕ) 5ನೇ ಸ್ಥಾನಕ್ಕೇರಿತು. ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಯು.ಪಿ ಯೋಧಾ ಬಳಗ ಹರ್ಯಾಣ ಸ್ಟೀಲರ್ಸ್ ಪಡೆಯನ್ನು 40-34ರಲ್ಲಿ ಬಗ್ಗು ಬಡಿಯಿತು.

ಪ್ರೊ ಕಬಡ್ಡಿ ಲೀಗ್’ನಲ್ಲಿ ಶನಿವಾರವೂ 3 ಪಂದ್ಯಗಳು ನಡೆಯಲಿದ್ದು, ದಿನದ ಮೊದಲ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ. 2ನೇ ಪಂದ್ಯ ತೆಲುಗು ಟೈಟನ್ಸ್ ಮತ್ತು ಯು.ಪಿ ಯೋಧಾ ಮಧ್ಯೆ ನಡೆಯಲಿದ್ದರೆ, 3ನೇ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಹಾಗೂ ಹಾಲಿ ಚಾಂಪಿಯನ್ಸ್ ದಬಾಂಗ್ ಡೆಲ್ಲಿ ಕೆ.ಸಿ ಸೆಣಸಾಡಲಿವೆ.

ಪ್ರೊ ಕಬಡ್ಡಿ ಲೀಗ್-9: ಶನಿವಾರದ ಪಂದ್ಯಗಳು

  1. ಬೆಂಗಾಲ್ ವಾರಿಯರ್ಸ್ Vs ಗುಜರಾತ್ ಜೈಂಟ್ಸ್
  2. ತೆಲುಗು ಟೈಟನ್ಸ್ Vs ಯು.ಪಿ ಯೋಧಾ
  3. ದಬಾಂಗ್ ಡೆಲ್ಲಿ ಕೆ.ಸಿ Vs ಜೈಪುರ ಪಿಂಕ್ ಪ್ಯಾಂಥರ್ಸ್

ಇದನ್ನೂ ಓದಿ : Pro Kabaddi League : ಬುಲ್ಸ್‌ಗೆ ಸ್ಟೀಲರ್ಸ್ ಸವಾಲ್, ಅಗ್ರಸ್ಥಾನದ ಮೇಲೆ ಕೆಂಪುಗೂಳಿಗಳ ಕಣ್ಣು

ಇದನ್ನೂ ಓದಿ : Pro Kabaddi League : ಇಂದು ಮಹಾರಾಷ್ಟ್ರ ಡರ್ಬಿ, ಪುಣೇರಿ ವಿರುದ್ಧ ಯು ಮುಂಬಾಗೆ ಸೇಡಿನ ಪಂದ್ಯ

ಇದನ್ನೂ ಓದಿ : Pro Kabaddi League: ಫೋಟೋ ಫಿನಿಷ್ ರೇಸ್‌ನಲ್ಲಿ ಬೆಂಗಳೂರು ಬುಲ್ಸ್, ಪುಣೇರಿ ಪಲ್ಟನ್ ಪಡೆಗೆ ಸೋಲು

ಸ್ಥಳ: ಛತ್ರಪತಿ ಶಿವಾಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಬಾಳೇವಾಡಿ; ಪುಣೆ (ಮಹಾರಾಷ್ಟ್ರ)
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

Pro Kabaddi League: U Mumba took revenge against Paltan, Pirates won against Jaipur

Comments are closed.