ಮುಂಬೈ : ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನೇಣಿಗೆ ಶರಣಾಗಿದ್ದರು. ಸುಶಾಂತ್ ಮೃತಪಟ್ಟ ಕೆಲವೇ ಗಂಟೆಗಳಲ್ಲಿ ಮೃತದೇಹದ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದ್ರೀಗ ಮೃತದೇಹ ಪೋಟೋವನ್ನು ಯಾರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಬಾರದು ಎಂದು ಮುಂಬೈ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ನಟ ಸುಶಾಂತ್ ಸಿಂಗ್ ರಜಪೂತ್ ಮರಣೋತ್ತರ ವರದಿ ಪೊಲೀಸರ ಕೈ ಸೇರಿದ್ದು, ವರದಿಯಲ್ಲಿ ನಟ ಸಾವನ್ನಪ್ಪಿರುವುದು ಕೊಲೆಯಿಂದಲ್ಲ, ಆತ್ಮಹತ್ಯೆಯಿಂದ ಅಂತಾ ಹೇಳಲಾಗಿದೆ. ಆದ್ರೆ ಕುಟುಂಬಸ್ಥರು ಕೊಲೆ ಆರೋಪ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲೀಗ ಮುಂಬೈ ಪೊಲೀಸರು ಶೇರ್ ಆಗಿರುವ ಪೋಟೋವನ್ನು ಡಿಲೀಟ್ ಮಾಡಬೇಕು ಅಂತಾ ಎಚ್ಚರಿಕೆ ನೀಡಿದ್ದಾರೆ.

ಪೋಟೋ ಶೇರ್ ಮಾಡಿರುವುದು ಸೈಬರ್ ಅಪರಾಧವಾಗುತ್ತದೆ. ಒಂದೊಮ್ಮೆ ಯಾರಾದ್ರೂ ಮೃತದೇಹದ ಪೋಟೋ ಶೇರ್ ಮಾಡಿರುವುದು ಕಂಡುಬಂದ್ರೆ ಅಂತವರ ವಿರುದ್ದ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.