ಹಾಸನ : Swamiji cheated : ನಿಧಿ ಆಸೆಗಾಗಿ ಕೊಲೆಗಳು ನಡೆದಂತಹ ಸಾಕಷ್ಟು ಪ್ರಕರಣಗಳನ್ನು ಕೇಳಿರುತ್ತೀರಿ. ನಿಧಿಗಾಗಿ ಮಕ್ಕಳನ್ನು ಬಲಿ ಕೊಡುವುದು, ಅಥವಾ ನಿಧಿಯನ್ನು ಹುಡುಕುತ್ತಾ ಜೀವಕ್ಕೇ ಅಪಾಯ ತಂದುಕೊಳ್ಳುವಂತಹ ಸಾಕಷ್ಟು ಘಟನೆಗಳು ದಿನ ನಿತ್ಯದ ಜೀವನದಲ್ಲಿ ನಡೆಯುತ್ತಲೇ ಇರುತ್ತದೆ. ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಗ್ರಾಮದಲ್ಲಿ ನಿಧಿ ಆಸೆಯನ್ನು ತೋರಿಸಿದ ಕಳ್ಳ ಸ್ವಾಮೀಜಿಯೊಬ್ಬ ದಂಪತಿಗೆ ಪಂಗನಾಮ ಹಾಕಿದ ಘಟನೆಯು ವರದಿಯಾಗಿದೆ.
ಮನೆಯ ತೋಟದಲ್ಲಿ ನಿಧಿ ಇದೆ ಎಂದು ದಂಪತಿಯನ್ನು ನಂಬಿಸಿದ್ದ ಕಳ್ಳ ಸ್ವಾಮೀಜಿ ಮಂಜುನಾಥ ಅಲಿಯಾಸ್ ಮಂಜೇ ಗೌಡ ಎಂಬಾತ ಚಂದ್ರೇ ಗೌಡ ದಂಪತಿಗೆ ಪಂಗನಾಮ ಹಾಕಿ ಎಸ್ಕೇಪ್ ಆಗಿದ್ದಾನೆ. ಈ ಪ್ರಕರಣ ಸಂಬಂಧ ಅರಕಲಗೂರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದೇವೆ ಎಂದು ಚಂದ್ರೇಗೌಡ ಪುತ್ರ ಪುನೀತ್ ಮಾಹಿತಿ ನೀಡಿದ್ದಾರೆ.
ಕಬ್ಬಿಣದ ವಿಗ್ರಹಕ್ಕೆ ಚಿನ್ನದ ಲೇಪನವನ್ನು ಹಾಕಿಟ್ಟು ಚಂದ್ರೇಗೌಡರ ತೋಟದಲ್ಲಿ ಹೂತಿಟ್ಟಿದ್ದ ಮಂಜುನಾಥ್ ಬಳಿಕ ಚಂದ್ರೇಗೌಡರ ಬಳಿ ಬಂದು, ನಿಮ್ಮ ತೋಟದಲ್ಲಿ ನಿಧಿಯಿದೆ ಎಂದು ಹೇಳಿದ್ದಾನೆ. ಸ್ವಾಮೀಜಿ ಮಾತನ್ನು ನಂಬಿದ ಚಂದ್ರೇಗೌಡ ರಾತ್ರೋ ರಾತ್ರಿ ನಿಧಿ ಹುಡುಕಾಟಕ್ಕೆ ಮುಂದಾಗಿದ್ದಾರೆ. ಈ ವೇಳೆ ಈ ವಿಗ್ರಹ ಪತ್ತೆಯಾಗಿದೆ. ಚಿನ್ನದ ವಿಗ್ರಹ ಸಿಕ್ಕಿತೆಂದು ಚಂದ್ರೇಗೌಡ ಕುಟುಂಬ ಕಳ್ಳ ಸ್ವಾಮೀಜಿಗೆ ಲಕ್ಷಗಟ್ಟಲೇ ಹಣ ನೀಡಿದ್ದಾರೆ.
ಇದು ಚಿನ್ನದ ವಿಗ್ರಹವಲ್ಲ, ಬದಲಾಗಿ ಕಬ್ಬಿಣದ ವಿಗ್ರಹ ಎಂದು ತಿಳಿದ ಚಂದ್ರೇಗೌಡ ಕುಟುಂಬಸ್ಥರು ಕಳ್ಳ ಸ್ವಾಮೀಜಿಗಾಗಿ ಹುಡುಕಾಟ ನಡೆಸಿದ್ದಾರೆ. ಕಳ್ಳ ಸ್ವಾಮೀಜಿ ಮಂಜುನಾಥ್ ಮೂಲತಃ ದೊಡ್ಡಹಳ್ಳಿ ಗ್ರಾಮದವನಾಗಿದ್ದಾನೆ . ವಿಷಯ ಬಹಿರಂಗವಾಗುತ್ತಿದ್ದಂತೆಯೇ ಈತ ಎಸ್ಕೇಪ್ ಆಗಿದ್ದಾನೆ.
ಇದನ್ನು ಓದಿ : KKR Head Coach Chandrakant Pandit : ಕೋಲ್ಕತಾ ನೈಟ್ ರೈಡರ್ಸ್‌ಗೆ ರಣಜಿ ಹೀರೋ ಚಂದ್ರಕಾಂತ್ ಪಂಡಿತ್ ಹೆಡ್ ಕೋಚ್
ಇದನ್ನೂ ಓದಿ : Kamblihula Movie : ಮೋಡಿ ಮಾಡಿದೆ ಕಂಬ್ಳಿಹುಳ ಸಿನಿಮಾದ ಜಾರೀ ಬಿದ್ದರೂ ಯಾಕೀ ನಗು ಹಾಡು
ಇದನ್ನೂ ಓದಿ : illicit relationship :ಸೋದರತ್ತೆಯೊಂದಿಗೆ ಅಳಿಯನ ಅಕ್ರಮ ಸಂಬಂಧ ಕೊಲೆಯಲ್ಲಿ ಅಂತ್ಯ
Swamiji cheated lakhs of money believing that there is a treasure