Sachin Tendulkar Vs Virat Kohli : ಸಚಿನ್‌ ತೆಂಡೂಲ್ಕರ್ ಮತ್ತು ವಿರಾಟ್‌ ಕೊಹ್ಲಿ 14 ವರ್ಷಗಳ ನಂತರ ಯಾರು ಗ್ರೇಟ್ ?


ಬೆಂಗಳೂರು:‌ (Sachin Tendulkar Vs Virat Kohli
) ಆಧುನಿಕ ಕ್ರಿಕೆಟ್’ನ ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿ ಇವತ್ತಿಗೆ (ಆಗಸ್ಟ್ 18) ಭರ್ತಿ 14 ವರ್ಷ. 2008ರ ಆಗಸ್ಟ್ 18ರಂದು ಕೊಹ್ಲಿ ತಮ್ಮ ವೃತ್ತಿಜೀವನದ ಮೊದಲ ಏಕದಿನ ಪಂದ್ಯವಾಡಿದ್ದರು. ಶ್ರೀಲಂಕಾ ವಿರುದ್ಧ ದಾಂಬುಲಾ ದಲ್ಲಿ ನಡೆದ ಆ ಪಂದ್ಯದಲ್ಲಿ ಆರಂಭಿಕನಾಗಿ ಆಡಿದ್ದ ಕೊಹ್ಲಿ, ಕೇವಲ 12 ರನ್ ಗಳಿಸಿ ಔಟಾಗಿದ್ದರು.

ಕೊಹ್ಲಿಯ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ 14 ವರ್ಷಗಳು ತುಂಬಿರುವ ಹೊತ್ತಲ್ಲಿ ಸಾಮಾಜಿಕ ಜಾಲತಾಣದಲ್ಲೊಂದು ಚರ್ಚೆ ಶುರುವಾಗಿದೆ. ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ಅವರಲ್ಲಿ ಯಾರು ಗ್ರೇಟ್ ಎಂಬುದು? ಇದಕ್ಕೆ ಕ್ರಿಕೆಟ್ ಪ್ರಿಯರು ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

https://twitter.com/14_aryanp/status/1560155322320572417?s=20&t=tbKPcgIdq077_QT1g0T5aw

ಹಾಗಾದ್ರೆ ಅಂಕಿ ಅಂಶಗಳು ಏನು ಹೇಳುತ್ತವೆ? ಸಚಿನ್ ತೆಂಡೂಲ್ಕರ್ ತಮ್ಮ ಏಕದಿನ ವೃತ್ತಿಜೀವನದ ಮೊದಲ 14 ವರ್ಷಗಳಲ್ಲಿ ಎಷ್ಟು ರನ್, ಎಷ್ಟು ಶತಕ ಗಳಿಸಿದ್ದರು? ವಿರಾಟ್ ಕೊಹ್ಲಿ 14 ವರ್ಷಗಳಲ್ಲಿ ಗಳಿಸಿದ ರನ್ ಎಷ್ಟು? ಬಾರಿಸಿದ ಶತಕ, ಅರ್ಧಶತಕ ಎಷ್ಟು? ಇಬ್ಬರಲ್ಲಿ ಹೆಚ್ಚು ರನ್ ಗಳಿಸಿದವರು ಯಾರು? ಹೆಚ್ಚು ಶತಕ ಬಾರಿಸಿದವರು ಯಾರು? ಆ ಕುರಿತ ಅಂಕಿ ಅಂಶಗಳು ಇಲ್ಲಿವೆ.

ಸಚಿನ್ ತೆಂಡೂಲ್ಕರ್ ತಮ್ಮ ಏಕದಿನ ಅಂತಾರಾಷ್ಟ್ರೀಯ ವೃತ್ತಿಜೀವನದ ಮೊದಲ 14 ವರ್ಷಗಳಲ್ಲಿ 312 ಇನ್ನಿಂಗ್ಸ್’ಗಳನ್ನು ಆಡಿ 12,685 ರನ್ ಗಳಿಸಿದ್ದರು. ಬ್ಯಾಟಿಂಗ್ ಸರಾಸರಿ 45.14. ಇದರಲ್ಲಿ 36 ಶತಕಗಳು ಹಾಗೂ 64 ಅರ್ಧಶತಕಗಳು ಒಳಗೊಂಡಿದ್ದವು. ಇನ್ನಿಂಗ್ಸ್ ಒಂದರಲ್ಲಿ ಬೆಸ್ಟ್ ಸ್ಕೋರ್ 186 ನಾಟೌಟ್.

ಇದೇ ವೇಳೆ ವಿರಾಟ್ ಕೊಹ್ಲಿ ತಮ್ಮ 14 ವರ್ಷಗಳ ಏಕದಿನ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ 253 ಇನ್ನಿಂಗ್ಸ್’ಗಳನ್ನು ಆಡಿದ್ದು 57.68ರ ಅಮೋಘ ಸರಾಸರಿಯಲ್ಲಿ 12,344 ರನ್ ಗಳಿಸಿದ್ದಾರೆ. ಈ ವೇಳೆ ಕೊಹ್ಲಿ 43 ಶತಕಗಳು ಹಾಗೂ 64 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಇನ್ನಿಂಗ್ಸ್ ಒಂದರಲ್ಲಿ ಗರಿಷ್ಠ ಮೊತ್ತ 183.

ಸಚಿನ್ Vs ಕೊಹ್ಲಿ: 14 ವರ್ಷಗಳಲ್ಲಿ ಏಕದಿನ ಕ್ರಿಕೆಟ್ ಸಾಧನೆ
ಸಚಿನ್ ವಿರಾಟ್ ಕೊಹ್ಲಿ
312 ಇನ್ನಿಂಗ್ಸ್ 253
12,685 ರನ್ 12,344
45.14 ಸರಾಸರಿ 57.68
86.62 ಸ್ಟ್ರೈಕ್’ರೇಟ್ 92.83
36/64 100/50 43/64
186* ಬೆಸ್ಟ್ ಸ್ಕೋರ್ 183

ಇದನ್ನೂ ಓದಿ : Highest score in ODI Debut : ಏಕದಿನ ಪದಾರ್ಪಣೆಯಲ್ಲಿ ಅತೀ ಹೆಚ್ಚು ರನ್: ಟಾಪ್-5ನಲ್ಲಿ ನಾಲ್ವರು ಕನ್ನಡಿಗರು

ಇದನ್ನೂ ಓದಿ : Virat Kohli Fitness Secret : “ಜಪ್ಪಯ್ಯ ಅಂದ್ರೂ ಅದನ್ನು ತಿನ್ನಲ್ಲ..” ಬಯಲಾಯ್ತು ವಿರಾಟ್ ಕೊಹ್ಲಿಯ ಫಿಟ್’ನೆಸ್ ಸೀಕ್ರೆಟ್

Sachin Tendulkar Vs Virat Kohli Who is great after 14 years

Comments are closed.