ಸೋಮವಾರ, ಏಪ್ರಿಲ್ 28, 2025
HomeCrimeTeacher murder: ಆನ್‌ಲೈನ್ ತರಗತಿ ವೇಳೆ ಶಿಕ್ಷಕ ಕತ್ತು ಹಿಸುಕಿ ಕೊಲೆ

Teacher murder: ಆನ್‌ಲೈನ್ ತರಗತಿ ವೇಳೆ ಶಿಕ್ಷಕ ಕತ್ತು ಹಿಸುಕಿ ಕೊಲೆ

- Advertisement -

ಗೊಂಡಾ: (Teacher murder) ಆನ್‌ಲೈನ್‌ನಲ್ಲಿ ವಿಡಿಯೋ ಪಾಠ ಮಾಡುತ್ತಿದ್ದಾಗ ಶಿಕ್ಷಕನೋರ್ವನನ್ನು ಇಬ್ಬರು ದುಷ್ಕರ್ಮಿಗಳು ಕತ್ತು ಹಿಸುಕಿ ಕೊಲೆಗೈದಿರುವ ಘಟನೆ ಉತ್ತರ ಪ್ರದೇಶದ ಗೊಂಡಾದ ಫೋರ್ಬ್ಸ್‌ಗಂಜ್ ಪ್ರದೇಶದಲ್ಲಿ ನಡೆದಿದೆ. ಶಿಕ್ಷಕ ಕೃಷ್ಣ ಕುಮಾರ್ ಯಾದವ್ (32 ವರ್ಷ) ಕೊಲೆಯಾದ ವ್ಯಕ್ತಿ.

ಅಂಬೇಡ್ಕರ್‌ನಗರ ಜಿಲ್ಲೆಯವರಾದ ಶ್ರೀ ಯಾದವ್ ಅವರು ಉತ್ತರ ಪ್ರದೇಶದ ಗೊಂಡಾದ ಫೋರ್ಬ್ಸ್‌ಗಂಜ್ ಪ್ರದೇಶದಲ್ಲಿ ಬಾಡಿಗೆಗೆ ವಾಸಿಸುತ್ತಿದ್ದರು. ಇವರು ಶಿಕ್ಷಕರಾಗಿದ್ದು, ತಮ್ಮ ಕೋಣೆಯಲ್ಲಿ ಒಬ್ಬಂಟಿಯಾಗಿದ್ದು, ಆನ್‌ಲೈನ್ ಟ್ಯೂಷನ್ ತರಗತಿಯನ್ನು ನೀಡುತ್ತಿದ್ದರು. ಈ ವೇಳೆ ಆರೋಪಿಗಳು ಕೋಣೆಯೊಳಗೆ ನುಗ್ಗಿ ಶಿಕ್ಷಕನನ್ನು ಕತ್ತು ಹಿಸುಕಿ ಕೊಲೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಪ್ರಕರಣದ ಸಂಬ‍ಂಧ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.

ವಿಚಾರಣೆ ವೇಳೆಯಲ್ಲಿ ಮೃತ ಯಾದವ್ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದು, ಶಿಕ್ಷಕಿಯಾಗಿದ್ದ ತನ್ನ ಸಹೋದರಿಯೊಂದಿಗೆ ವಾಸಿಸುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರಮುಖ ಆರೋಪಿ ಸಂದೀಪ್ ಯಾದವ್, ಶಿಕ್ಷಕಿಯಾಗಿದ್ದ ಕೃಷ್ಣ ಯಾದವ್ ಅವರ ಸಹೋದರಿಯೊಂದಿಗೆ ಮಾತನಾಡಲು ಪ್ರಾರಂಭಿಸಿದ್ದನು. ಈ ವಿಚಾರವಾಗಿ ಸಂದೀಪ್ ಅವರನ್ನು ಕೃಷ್ಣ ಯಾದವ್ ನಿಂದಿಸಿದ್ದರು. ಇದರಿಂದ ಆರೋಪಿ ಸಂದೀಪ್‌ ಯಾದವ್‌ ಕೋಪಗೊಂಡಿದ್ದನು. ಇದೇ ಕಾರಣಕ್ಕೆ ಆರೋಪಿಗಳಾದ ಸಂದೀಪ್ ಯಾದವ್ ಮತ್ತು ಜವಾಹಿರ್ ಮಿಶ್ರಾ ಅಲಿಯಾಸ್ ಜಗ್ಗ ಅವರ ಮನೆಗೆ ನುಗ್ಗಿ ವಾಗ್ವಾದ ನಡೆಸಿ ನಂತರ ಕತ್ತು ಹಿಸುಕಿ ಕೊಂದಿದ್ದಾರೆ ಎಂದು ತಿಳಿದುಬಂದಿದೆ.

ಅಲ್ಲದೇ ಕೃಷ್ಣ ಕುಮಾರ್ ಯಾದವ್ ಅವರನ್ನು ಕೊಲೆ ಮಾಡಲು ಸಂದೀಪ್ ತನ್ನ ಸ್ನೇಹಿತ ಜಗ್ಗನ ಸಹಾಯವನ್ನು ಕೋರಿದ್ದಾನೆ ಎನ್ನಲಾಗಿದೆ. ಇದೀಗ ಪ್ರಕರಣದ ಸಂಬಂಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ. ಅಲ್ಲದೇ ಶಿಕ್ಷಕ ಕೃಷ್ಣ ಕುಮಾರ್ ಆನ್‌ ಲೈನ್‌ ತರಗತಿ ನಡೆಸಲು ಬಳಸುತ್ತಿದ್ದ ಮೊಬೈಲ್‌ ಫೋನ್‌ ಅನ್ನು ವಶಕ್ಕೆ ಪಡೆದುಕೊಂಡು ಸಾಕ್ಷ್ಯಾಧಾರಗಳನ್ನು ಪರಿಶೀಲಿಸುತ್ತಿದ್ದಾರೆ.

ಇದನ್ನೂ ಓದಿ : Padma Royal Challenge Scheme Fraud: ಕುಂದಾಪುರದಲ್ಲಿ ಪದ್ಮಾ ರಾಯಲ್‌ ಚಾಲೆಂಜ್‌ ಸ್ಕೀಮ್‌ ಹೆಸರಲ್ಲಿ ಕೋಟ್ಯಾಂತರ ರೂ ವಂಚನೆ: ಪ್ರಕರಣ ದಾಖಲು

ಇದನ್ನೂ ಓದಿ : Beltangadi Auto accident: ಸೇತುವೆ ಗೋಡೆಗೆ ಆಟೋ ರಿಕ್ಷಾ ಢಿಕ್ಕಿ: 1.2 ವರ್ಷದ ಮಗು ಸಾವು, ಮೂವರಿಗೆ ಗಾಯ

Teacher murder: Teacher strangled to death during online class

RELATED ARTICLES

Most Popular