Tata Motors : ಇಂದಿನಿಂದ ದುಬಾರಿಯಾಗಲಿದೆ ಟಾಟಾದ ಪ್ರಯಾಣಿಕ ವಾಹನಗಳು

ದೇಶೀಯ ವಾಹನ ತಯಾರಿಕಾ ಕಂಪನಿ ಟಾಟಾ ಮೋಟಾರ್ಸ್‌ (Tata Motors), ಇಂದಿನಿಂದ (ಫೆಬ್ರವರಿ 1, 2023) ಟಾಟಾ ಟಿಯಾಗೋ, ಟಾಟಾ ಪಂಚ್‌, ಟಿಗೋರ್‌ ಸೇರಿದಂತೆ ಪ್ರಯಾಣಿಕ ವಾಹನಗಳ (Passenger Vehicles) ಬೆಲೆಯನ್ನು ಏರಿಸಿದೆ. ಇದು ಪ್ರತಿ ವಾಹನದ ಮೇಲೆ 1.2% ನಷ್ಟು ಬೆಲೆ ಹೆಚ್ಚಿಸಿದೆ. ಇದಕ್ಕೆ ಕಾರಣವೇನೆಂದರೆ ಒಟ್ಟಾರೆ ಇನ್‌ಪುಟ್‌ ವೆಚ್ಚವು ಏರಿಕೆಯಾಗಿರುವುದರಿಂದ ಬೆಲೆ ಏರಿಕೆಯಾಗಿದೆ ಎಂದು ಟಾಟಾ ಮೋಟಾರ್ಸ್‌ ಹೇಳಿದೆ. ಜನವರಿಯಲ್ಲಿ ಇದು ವಾಣಿಜ್ಯ ವಾಹನಗಳ (Commercial Vehicles) ಬೆಲೆಯನ್ನು 2% ವರೆಗೆ ಹೆಚ್ಚಿಸಿತ್ತು. ಈ ಬೆಲೆ ಏರಿಕೆಯ ಮೂಲಕ ಕಂಪನಿಯ ಒಟ್ಟಾರೆ ಹೆಚ್ಚಾದ ಇನ್‌ಪುಟ್‌ ವೆಚ್ಚಗಳು ಮತ್ತು ನಿಯಂತ್ರಕ ಬದಲಾವಣೆಗಳಲ್ಲಿ ಕೆಲವು ಭಾಗವನ್ನು ಇದು ಸರಿದೂಗಿಸುತ್ತದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Hero Maestro XOOM : 68,599 ರೂ. ಗಳಿಗೆ ಮೆಸ್ಟ್ರೋ XOOM ಲಾಂಚ್‌ ಮಾಡಿದ ಹೀರೋ

ಜನವರಿಯಲ್ಲಿ, ಟಾಟಾದ ಪ್ರತಿಸ್ಫರ್ಧಿ ಹಾಗೂ ದೇಶದ ಅಗ್ರ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ತನ್ನ ಎಲ್ಲಾ ಮಾದರಿಗಳ ಬೆಲೆಯನ್ನು ಸರಾಸರಿ 1.1% ರಷ್ಟು ಹೆಚ್ಚಿಸಿದೆ. ಆಗ ಮಾರುತಿ ಸುಜುಕಿಯು ಕೂಡ ಇದೇ ರೀತಿಯ ವೆಚ್ಚದ ಒತ್ತಡವನ್ನು ಹೇಳಿತ್ತು. ಇತ್ತೀಚಿಗೆ, ಮಹಿಂದ್ರಾ ಸ್ಕಾರ್ಪಿಯೋ–N ಮತ್ತು ಸ್ಕಾರ್ಪಿಯೋ ಕ್ಲಾಸಿಕ್‌ ಬೆಲೆಗಳನ್ನು ಹೆಚ್ಚಿಸಿದೆ. ಇದು ಎಸ್‌ಯುವಿ ಕಾರುಗಳ ಬೆಲೆಯನ್ನು 85,000 ರೂ. ಗಳ ವರೆಗೆ ಹೆಚ್ಚಿಸಿದೆ. ಜೊತೆಗೆ ಸ್ಕಾರ್ಪಿಯೋ–Nನ ಬೆಲೆಯನ್ನು 1 ಲಕ್ಷದ ವರೆಗೆ ಹೆಚ್ಚಿಸಿದೆ.

ಇದೇ ರೀತಿ ಬೆಲೆ ಹೆಚ್ಚಳವನ್ನು ಕೋರಿಯಾದ ಹುಂಡೈ ಸಹ ಮಾಡಿದೆ. ಅದು ತನ್ನ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ i20 ಮತ್ತು ಅದರ ಸ್ಪೋರ್ಟ್ಸ್‌ ಆವೃತ್ತಿಯ i20 N-ಲೈನ್‌ ಬೆಲೆಗಳನ್ನು ಹೆಚ್ಚಿಸಿದೆ. ಇದು ಕೇವಲ ನಾಲ್ಕು ತಿಂಗಳುಗಳಲ್ಲಿ ಎರಡನೇ ಬಾರಿ ಹೆಚ್ಚಿಸಿದೆ. ಅಂದರೆ ಕಂಪನಿಯು i20 ಯ ಬೆಲೆಯನ್ನು 21,500 ರೂ. ಹೆಚ್ಚಿಸಿದೆ. ಹ್ಯಾಚ್‌ಬ್ಯಾಕ್‌ ಕಾರಿನ ಬೆಲೆಗಳು ಈಗ 7.18 ಲಕ್ಷ ರೂ. ದಿಂದ ಪ್ರಾರಂಭವಾಗುತ್ತಿದೆ. ಇದರ DCT ಟ್ರಾನ್ಸ್‌ಮಿಷನ್‌ ಇರುವ ಮತ್ತು ಟಾಪ್‌ ಕಾರಾದ ಆಸ್ತಾ (O) ಬೆಲೆ 11.68 ಲಕ್ಷ ರೂ. (ಎಕ್ಸ್‌–ಶೋರೂಮ್‌) ವರೆಗೆ ಏರಿಸಿದೆ.

ಇದನ್ನೂ ಓದಿ: Automobile : ವಾಹನ ಖರೀದಿದಾರರಿಗೆ ಗುಡ್‌ ನ್ಯೂಸ್:‌ ಇವಿ ಕಾರುಗಳಿಗೆ ಬೆಲೆ ಇಳಿಕೆ

(Tata Motors hikes prices of passenger vehicles from today)

Comments are closed.