ಬುಧವಾರ, ಜೂನ್ 18, 2025
HomeCrimeಸರಸದ ವೇಳೆ ಸಿಕ್ಕಿಬಿದ್ದವನ ಮರ್ಮಾಂಗ ಕತ್ತರಿಸಿ ಕೊಲೆ, ಹುಡುಗಿ ಮನೆ ಎದುರಲ್ಲೇ ಬಾಲಕನ ಅಂತ್ಯಕ್ರೀಯೆ

ಸರಸದ ವೇಳೆ ಸಿಕ್ಕಿಬಿದ್ದವನ ಮರ್ಮಾಂಗ ಕತ್ತರಿಸಿ ಕೊಲೆ, ಹುಡುಗಿ ಮನೆ ಎದುರಲ್ಲೇ ಬಾಲಕನ ಅಂತ್ಯಕ್ರೀಯೆ

- Advertisement -

ಪಾಟ್ನಾ : ಯುವತಿಯ ಜೊತೆ ಆಕೆಯ ಮನೆಯಲ್ಲಿ ಸರಸವಾಡುತ್ತಿದ್ದ ವೇಳೆಯಲ್ಲಿ ಯುವಕ ಸಿಕ್ಕಿಬಿದ್ದಿದ್ದಾನೆ. ಇದರಿಂದ ಕೆರಳಿದ ಯುವತಿ ಪೊಲೀಸರು ಯುವಕನ ಮರ್ಮಾಂಗ ಕತ್ತರಿಸಿ ಕೊಲೆಗೈದಿದ್ದಾರೆ. ನಂತರ ಯುವಕನ ಅಂತ್ಯಕ್ರೀಯೆಯನ್ನು ಯುವತಿಯ ಮನೆ ಮುಂದೆ ನೆರವೇರಿಸಿದ್ದಾರೆ.

ಇಂತಹ ಅಮಾನವೀಯ ಘಟನೆ ನಡೆದಿರೋದು ಬಿಹಾರದ ಮುಜಾಫರ್‌ ನಗರ ಜಿಲ್ಲೆಯ ರೆಪುರಾ ಗ್ರಾಮದಲ್ಲಿ. 17 ವರ್ಷದ ಯುವಕ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ಯುವತಿಯ ಮನೆಯವರಿಗೆ ಈ ಸಂಬಂಧ ಇಷ್ಟವಿರಲಿಲ್ಲ. ಹೀಗಾಗಿ ಯುವಕನಿಗೆ ಸಾಕಷ್ಟು ಬಾರಿ ವಾರ್ನಿಂಗ್‌ ಕೊಟ್ಟಿದ್ದಾರೆ. ಆದರೆ ಯುವಕ ರಾತ್ರಿಯ ವೇಳೆಯಲ್ಲಿ ಯುವತಿಯ ಮನೆಗೆ ತೆರಳಿ, ರಾಸಲೀಲೆಯಲ್ಲಿ ತೊಡಗಿದ್ದಾನೆ.

ಇದನ್ನೂ ಓದಿ : ಬಾಲಿವುಡ್ ನಲ್ಲಿ ಮಾದಕ ಮೈಮಾಟ ತೋರಿದ ಸ್ಯಾಂಡಲ್ ವುಡ್ ಬೆಡಗಿ…! ಪ್ರಣೀತಾ ಹಾಟ್ ಪೋಟೋ ವೈರಲ್…!!

ಇದರಿಂದ ಕೆರಳಿದ ಯುವತಿಯ ಪೋಷಕರು ಯುವಕನ ಬಟ್ಟೆಯನ್ನು ಬಿಚ್ಚಿ ಮನಬಂದಂತೆ ಥಳಿಸಿದ್ದಾರೆ. ಅಷ್ಟೇ ಅಲ್ಲದೇ ಯುವಕನ ಮರ್ಮಾಂಗವನ್ನು ಕತ್ತರಿಸಿದ್ದಾರೆ. ಗಂಭೀರ ವಾಗಿ ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರೂ ಕೂಡ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಇದರಿಂದ ಆಕ್ರೋಶಗೊಂಡ ಯುವಕನ ಪೋಷಕರು ಯುವತಿಯ ಮನೆಯವರಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ.

ಇದನ್ನೂ ಓದಿ : ಯುವತಿಯರಿಗೆ ಸಿನಿಮಾದ ಆಫರ್‌ : ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ನಿರ್ಮಾಪಕ ಅರೆಸ್ಟ್‌

ಅಷ್ಟೇ ಅಲ್ಲದೇ ಯುವಕನ ಅಂತ್ಯಕ್ರೀಯೆಯನ್ನು ಯುವತಿಯ ಮನೆಯ ಮುಂದೆಯೇ ನೆರವೇರಿಸೋ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಈ ಕುರಿತು ಶಾಂತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular