Terrorist arrested in bengaluru: ಬೆಂಗಳೂರಿನಲ್ಲಿ ಭಯೋತ್ಪಾದಕರ ನಂಟು ಹೊಂದಿರುವ ವ್ಯಕ್ತಿ ಬಂಧನ

ಬೆಂಗಳೂರು: (Terrorist arrested in bengaluru) ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದ ಅಲಿಗಢ ಮೂಲದ ವ್ಯಕ್ತಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಈತ ಸಿರಿಯಾಕ್ಕೆ ಪ್ರಯಾಣಿಸಲು ಬಯಸಿದ್ದ ಎಂದು ತಿಳಿದುಬಂದಿದೆ. ನಿರ್ದಿಷ್ಟ ಮಾಹಿತಿ ಮೇರೆಗೆ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಕರ್ನಾಟಕ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ರಾಜ್ಯದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಇದಲ್ಲದೇ ಮಂಗಳೂರಿನಲ್ಲಿ ನಡೆದ ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಿಳಿದ ಎಎನ್‌ಐ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವವರನ್ನು ಬೇಟೆಯಾಡುತ್ತಿದೆ. ಬೆಂಗಳೂರಿನ ಶಂಕಿತ ಉಗ್ರನೋರ್ವ ಅಂತಾರಾಷ್ಟ್ರೀಯ ಭಯೋತ್ಪಾದನಾ ಸಂಘಟನೆಗಳೊಂದಿಗೆ ನಂಟು ಹೊಂದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ನಿನ್ನೆ ರಾತ್ರಿ ಬೆಂಗಳೂರಿನ ಥಣಿಸಂದ್ರದಿಂದ ಮೊಹಮ್ಮದ್ ಆರಿಫ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಇದೀಗ ಆತನ ವಿಚಾರಣೆಯನ್ನು ನಡೆಸಲಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕೇಂದ್ರ ಗುಪ್ತಚರ ಸಂಸ್ಥೆಗಳು ಮತ್ತು ರಾಜ್ಯ ಪೊಲೀಸರು ಸಂಘಟಿತವಾಗಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಶ್ರೀ ಜ್ಞಾನೇಂದ್ರ ಹೇಳಿದರು. “ಕೋಮು ಭಾವನೆಗಳನ್ನು ಪ್ರಚೋದಿಸುವ ಮತ್ತು ಭಾರತವನ್ನು ದುರ್ಬಲಗೊಳಿಸುವ ಮೂಲಕ ಶಾಂತಿ ಮತ್ತು ಸೌಹಾರ್ದತೆಯನ್ನು ಕದಡಲು ಬಯಸುವ ಸಂಘಟನೆಗಳೊಂದಿಗೆ ತನ್ನನ್ನು ತಾನು ಸಂಯೋಜಿಸಲು ಪ್ರಯತ್ನಿಸುವ ಯಾರಾದರೂ ನಿಗ್ರಹಿಸಲ್ಪಡುತ್ತಾರೆ” ಎಂದು ಶ್ರೀ ಆರಗ ಜ್ಞಾನೇಂದ್ರ ಹೇಳಿದರು.

ಶಂಕಿತ ಉಗ್ರ ಆರಿಫ್ ಉತ್ತರ ಪ್ರದೇಶದ ಅಲಿಗಢ ಮೂಲದವರಾಗಿದ್ದು, ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನೆಲೆಸಿದ್ದರು ಎಂದು ಮೂಲಗಳು ತಿಳಿಸಿವೆ. ಆತನಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದು, ತಾನು ಸಿಕ್ಕಿಬಿದ್ದಾಗ ಸಿರಿಯಾಕ್ಕೆ ಹಾರಲು ಪ್ರಯತ್ನಿಸಿದ್ದನು ಎನ್ನಲಾಗಿದೆ. ಕಳೆದ ವರ್ಷ ಶಿವಮೊಗ್ಗ ಮೂಲದ ಐಎಸ್ ಪ್ರೇರಿತ ಭಯೋತ್ಪಾದಕ ಘಟಕವನ್ನು ಪೊಲೀಸರು ಭೇದಿಸಿದ್ದು, ತುಂಗಾ ನದಿಯಲ್ಲಿ ಸ್ಫೋಟಗಳನ್ನು ನಡೆಸಿತು ಮತ್ತು ಅದೇ ಸಂಘಟನೆಯ ಉಗ್ರ ಶಾರೀಖ್‌ ನವೆಂಬರ್ 19 ರಂದು ಮಂಗಳೂರಿನ ನಾಗುರಿಯಲ್ಲಿ ಆಟೋದಲ್ಲಿ ಕುಕ್ಕರ್‌ ಬಾಂಬ್ ಸ್ಫೋಟ ನಡೆಸಿದ್ದರು.

ಇದನ್ನೂ ಓದಿ : Drug trafficking-11 arrested: ಆಹಾರ ಡೆಲಿವರಿ ನೆಪದಲ್ಲಿ ಡ್ರಗ್ಸ್ ಸಾಗಾಟ : ಬೆಂಗಳೂರಲ್ಲಿ 11 ಮಂದಿ ಅರೆಸ್ಟ್

ಇದನ್ನೂ ಓದಿ : LKG Student Fail : ಶಿಕ್ಷಣ ಸಂಸ್ಥೆಯ ಎಡವಟ್ಟು: ಯುಕೆಜಿ ಮಗುವನ್ನೇ ಫೇಲ್ ಮಾಡಿದ ಶಿಕ್ಷಕ

Terrorist arrested in bengaluru: A person with terrorist links was arrested in Bengaluru

Comments are closed.