ಮಂಗಳೂರು : students escaped : ಕೆಲವು ದಿನಗಳ ಹಿಂದೆಯಷ್ಟೇ ಚಂಡೀಗಢದ ಮೊಹಾಲಿ ಎಂಬಲ್ಲಿ 60 ವಿದ್ಯಾರ್ಥಿನಿಯರು ಹಾಸ್ಟೆಲ್ನಲ್ಲಿ ಸ್ನಾನ ಮಾಡುತ್ತಿದ್ದ ಖಾಸಗಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಘಟನೆ ಮಾಸುವ ಮುನ್ನವೇ ಇದೀಗ ಮಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯರು ಹಾಸ್ಟೆಲ್ನಿಂದ ಎಸ್ಕೇಪ್ ಆಗಿರುವ ಘಟನೆಯೊಂದು ಬೆಳಕಿಗೆ ಬಂದಿದ್ದು ಹಾಸ್ಟೆಲ್ಗೆ ಮಕ್ಕಳನ್ನು ಪೋಷಕರು ಯಾವ ನಂಬಿಕೆ ಮೇಲೆ ಕಳಿಸಬೇಕು ಎಂಬ ಪ್ರಶ್ನೆ ಇದೀಗ ಮೂಡಿದೆ.
ಖಾಸಗಿ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಹಾಸ್ಟೆಲ್ನ ಕಿಟಕಿಯ ರಾಡ್ ಮುರಿದು ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ. ನಾಪತ್ತೆಯಾಗಿರುವ ವಿದ್ಯಾರ್ಥಿನಿಯರನ್ನು ಯಶಸ್ವನಿ, ದಕ್ಷತಾ ಹಾಗೂ ಸಿಂಚನಾ ಎಂದು ಗುರುತಿಸಲಾಗಿದೆ. ನಾಪತ್ತೆಯಾದ ವಿದ್ಯಾರ್ಥಿನಿಯರ ಪೈಕಿ ಯಶಸ್ವಿನಿ ಹಾಗೂ ದಕ್ಷತಾ ಬೆಂಗಳೂರು ನಿವಾಸಿಗಳಾಗಿದ್ದಾರೆ. ಸಿಂಚನಾ ಚಿತ್ರದುರ್ಗ ಮೂಲದ ವಿದ್ಯಾರ್ಥಿನಿಯಾಗಿದ್ದಾರೆ. ಇಂದು ಮುಂಜಾನೆ ಮೂರು ಗಂಟೆ ಸುಮಾರಿಗೆ ಈ ಮೂವರು ವಿದ್ಯಾರ್ಥಿನಿಯರು ಎಸ್ಕೇಪ್ ಆಗಿದ್ದಾರೆ. ಈ ಮೂವರು ವಿದ್ಯಾರ್ಥಿನಿಯರು ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.
ವಿದ್ಯಾರ್ಥಿನಿಯರು ಲಗೇಜು ಸಮೇತ ಹಾಸ್ಟೆಲ್ ಮುಂಭಾಗದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇಂದು ಮುಂಜಾನೆ ಸರಿಯಾಗಿ 3:09ಕ್ಕೆ ಈ ವಿದ್ಯಾರ್ಥಿನಿಯರು ಹಾಸ್ಟೆಲ್ ಗೇಟ್ನಿಂದ ಹೊರ ಬಿದ್ದಿದ್ದಾರೆ. ಹಾಸ್ಟೆಲ್ನ ಕಿಟಕಿಯ ರಾಡ್ ಮುರಿದ ಈ ಮೂವರು ವಿದ್ಯಾರ್ಥಿನಿಯರು ಹಾಸ್ಟೆಲ್ನಿಂದ ಎಸ್ಕೇಪ್ ಆಗಿದ್ದಾರೆ. ಎಸ್ಕೇಪ್ ಆಗುವ ಮುನ್ನ ನೋಟ್ ಕೂಡ ಬರೆದಿಟ್ಟಿರುವ ಯಶಸ್ವಿನಿ, ದಕ್ಷತಾ ಹಾಗೂ ಸಿಂಚನಾ ನಾವು ಹೋಗುತ್ತಿದ್ದೇವೆ ಕ್ಷಮಿಸಿ ಎಂದು ಬರೆದಿದ್ದಾರೆ .
Mangaluru: private college 3 students escape from hostel today early morning. CCTV video viral in social media#mangaluru #Coastal #Karnataka #dakshinakannada #college #Students pic.twitter.com/9yaFk6bHAY
— News next English (@Newsnext5) September 21, 2022
ಮಂಗಳೂರು ನಗರದ ಮೇರಿಹಿಲ್ನಲ್ಲಿರುವ ಖಾಸಗಿ ಕಾಲೇಜಿಗೆ ಸೇರಿದ ಹಾಸ್ಟೆಲ್ ಇದಾಗಿದ್ದು ಕಾಲೇಜು ಆವರಣದಲ್ಲಿಯೇ ಹಾಸ್ಟೆಲ್ ಕಟ್ಟಡವಿದೆ. ಈ ಸಂಬಂಧ ಮಂಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ವಿದ್ಯಾರ್ಥಿನಿಯರು ಬರೆದಿಟ್ಟ ಪತ್ರ ಹಾಗೂ ಸಿಸಿಟಿವಿ ಫೂಟೇಜ್ಗಳನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನು ಓದಿ : Virat Kohli New Hair Style: ಹೊಸ ಹೇರ್ ಸ್ಟೈಲ್‌ಗೆ ವಿರಾಟ್ ಕೊಹ್ಲಿ ಖರ್ಚು ಮಾಡಿದ ಮೊತ್ತ ₹80,000
ಇದನ್ನೂ ಓದಿ : drugs at Gobhi Manchurian shop :ನಡೆಸುತ್ತಿದ್ದುದು ಗೋಭಿ ಅಂಗಡಿ, ಮಾರಾಟವಾಗಿದ್ದು ಡ್ರಗ್ಸ್ : ಕೊನೆಗೂ ಖಾಕಿ ಬಲೆಗೆ ಬಿದ್ದ ಐನಾತಿ
The female students escaped by breaking the window rod of the hostel