SIIMA Award 2022:ಸೈಮಾ ಪಾರ್ಟಿ ವಿರುದ್ದ ದೂರು : ವೈರಲ್‌ ಆಯ್ತು ಸೆಲೆಬ್ರಿಟಿಗಳ ಮೋಜು ಮಸ್ತಿ

ಬೆಂಗಳೂರು :(SIIMA Award 2022)ಸೈಮಾ ಆವಾರ್ಡ್‌ 2022ರ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆದಿದೆ. ಅದ್ದೂರಿ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್‌, ಬಾಲಿವುಡ್‌ ಜೊತೆಗೆ ತೆಲುಗು, ತಮಿಳು ಹಾಗೂ ಮಲಯಾಲಂ ಚಿತ್ರರಂಗದ ಗಣ್ಯರು ಭಾಗಿಯಾಗಿದ್ದರು. ಆದ್ರೆ ಸೈಮಾ ಅವಾರ್ಡ್‌ ಬೆನ್ನಲ್ಲೇ ನಡೆದ ಸೈಮಾ ಪಾರ್ಟಿ ಇದೀಗ ವಿವಾದಕ್ಕೆ ಕಾರಣವಾಗಿದ್ದು, ಪೊಲೀಸ್‌ ಠಾಣೆಯಲ್ಲಿ ಆಯೋಜಕರ ವಿರುದ್ದ ದೂರು ದಾಖಲಾಗಿದೆ.

(SIIMA Award 2022)ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೈಮಾ ಅವಾರ್ಡ್‌ ಕಾರ್ಯಕ್ರಮ ನಡೆದಿತ್ತು. ಕಾರ್ಯಕ್ರಮದ ಬೆನ್ನಲ್ಲೇ ಸೈಮಾ ಅವಾರ್ಡ್‌ ಇದೀಗ ಕಾನೂನಿನ ಕೆಂಗಣ್ಣಿಗೆ ಗುರಿಯಾಗಿದೆ. ಐಷಾರಾಮಿ ಹೋಟೆಲ್‌ವೊಂದರಲ್ಲಿ ಸೈಮಾ ಪಾರ್ಟಿಯನ್ನು ಏರ್ಪಡಿಸಲಾಗಿತ್ತು. ಬೆಂಗಳೂರಿನ ಪ್ರಸಿದ್ಧ JW ಮ್ಯಾರಿಯಟ್‌ ಹೋಟೆಲ್‌ ನಲ್ಲಿ ಸೈಮಾ ಪಾರ್ಟಿಯನ್ನು ಏರ್ಪಡಿಸಲಾಗಿತ್ತು. ಪಾರ್ಟಿಯಲ್ಲಿ ಹಿಂದಿ, ತೆಲುಗು, ಕನ್ನಡ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ಅನೇಕ ಸ್ಟಾರ್‌ ಸೆಲೆಬ್ರಿಟಿಗಳು ಪಾರ್ಟಿಯಲ್ಲಿ ಭಾಗವಹಿಸಿದ್ದರು.

ಸೈಮಾ ಪಾರ್ಟಿ ರಾತ್ರಿ ಒಂದು ಗಂಟೆಯ ಒಳಗೆ ಮುಗಿಯ ಬೇಕಾಗಿತ್ತು. ಆದ್ರೆ ಆಯೋಜಕರು ನಿಯಮವನ್ನು ಉಲ್ಲಂಘಿಸಿ ಸೈಮಾ ಪಾರ್ಟಿಯನ್ನು ತಡರಾತ್ರಿ 3.30ರವರೆಗೂ ನಡೆಸಿದ್ದರು. ಇದೀಗ ಲೇಟ್‌ನೈಟ್‌ ಪಾರ್ಟಿ ನಡೆಸುವ ಮೂಲಕ ನಿಯಮ ಉಲ್ಲಂಘನೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಪಾರ್ಟಿ ಆಯೋಜಕರು, ಹೋಟೆಲ್‌ ಮ್ಯಾನೇಜರ್‌ ಕೇಳಿ ಬಂದಿರುವ ಆರೋಪದ ಹಿನ್ನೆಲೆಯಲ್ಲಿ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಖ್ಯಾತ ಹಾಸ್ಯನಟ ರಾಜು ಶ್ರೀವಾತ್ಸವ್​ ವಿಧಿವಶ

ಇದನ್ನೂ ಓದಿ : ಕೊನೆಗೂ ಮಗುವಿನ ಪೋಟೋವನ್ನು ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ

ಇದನ್ನೂ ಓದಿ : ಮೇರಿ ಕ್ರಿಸ್‌ಮಸ್ ನಲ್ಲಿ ವಿಜಯ ಸೇತುಪತಿ ಜೊತೆಯಾದ ನಟಿ ಕತ್ರಿನಾ ಕೈಫ್

ಇದನ್ನೂ ಓದಿ : ಆಸ್ಕರ್‌ಗೆ ಆರ್‌ಆರ್‌ ಆರ್‌ : ಎಸ್‌ಎಸ್‌ ರಾಜಮೌಳಿ ಹೇಳಿದ್ದೇನು ಗೊತ್ತಾ ?

ಇನ್ನು ಸೈಮಾ ಪಾರ್ಟಿ ವೇಳೆಯಲ್ಲಿ ಡಿಜೆ ಎದುರಿಗೆ ರಾಕಿಂಗ್‌ ಸ್ಟಾರ್‌ ಯಶ್‌ ಮತ್ತು ಅಭಿಷೇಕ್‌ ಅಂಬರೀಶ್ ರವರು ಮೈಕ್‌ ಹಿಡಿದುಕೊಂಡಿರುವ ವಿಡಿಯೋ ಕೂಡ ಸಖತ್‌ ವೈರಲ್‌ ಆಗಿದೆ. ಒಟ್ಟಿನಲ್ಲಿ ಸೈಮಾ ಅವಾರ್ಡ್‌ ಆಯೋಜನೆಯನ್ನು ಅದ್ದೂರಿಯಾಗಿ ನಡೆಸಿದ್ದ ಆಯೋಜಕರಿಗೆ ಇದೀಗ ಸೈಮಾ ಪಾರ್ಟಿ ಕಂಟಕವಾಗಿ ಪರಿಣಮಿಸಿದೆ.

Complaint against Siima Party: Goes viral and makes fun of celebrities

Comments are closed.