Tirupati Tirumala Temple : ತಿರುಪತಿ ತಿರುಮಲ ದೇವಸ್ಥಾನದಲ್ಲಿ ಅನಾಹುತ : ಮಹಾದ್ವಾರದಲ್ಲೇ ಉರುಳಿಬಿತ್ತು ತಿಮ್ಮಪ್ಪನ ಕಾಣಿಕೆ ಹುಂಡಿ

ತಿರುಪತಿ : ತಿರುಮಲ ಶ್ರೀವಾರಿ ದೇವಸ್ಥಾನದಲ್ಲಿ (Tirupati Tirumala Temple) ಅನಾಹುತ ಸಂಭವಿಸಿದೆ. ದೇವಸ್ಥಾನ ಪ್ರವೇಶದ ಮಹಾದ್ವಾರದಲ್ಲಿಯೇ ಕಾಣಿಕೆ ಹುಂಡಿ ಜಾರಿ ಕೆಳಗೆಬಿದ್ದಿದೆ. ಶ್ರೀವಾರಿಯ ಹುಂಡಿಯನ್ನು ಪರಕಾಮಣಿ ಮಂಟಪಕ್ಕೆ ಸ್ಥಳಾಂತರ ಮಾಡುವ ವೇಳೆಯಲ್ಲಿ ಈ ಘಟನೆ ಸಂಭವಿಸಿದೆ. ಇದರಿಂದಾಗಿ ಹುಂಡಿಯಲ್ಲಿದ್ದ ಕಾಣಿಕೆಗಳು ಕೆಳಗೆ ಬಿದ್ದಿದ್ದು, ಕೂಡಲೇ ಅಲರ್ಟ್‌ ಆದ ಸಿಬ್ಬಂದಿ ಉಡುಗೊರೆಗಳನ್ನು ಟ್ರಾಲಿ ಮೂಲಕ ಸಾಗಿಸಿದ್ದಾರೆ. ಅಲ್ಲದೇ ದೇವರ ಹುಂಡಿಯನ್ನು ಪರಕಾಮಣಿ ಮಂಟಪಕ್ಕೆ ಸ್ಥಳಾಂತರ ಮಾಡಲಾಗಿದೆ. ಬಿದ್ದಿದೆ ಎಂದು ಟಿಟಿಡಿ ಅಧಿಕಾರಿಗಳು ನಂಬಿದ್ದಾರೆ.

ತಿರುಪತಿ ದೇವಸ್ಥಾನದಲ್ಲಿ ಕಾಣಿಕೆ ಹುಂಡಿ ತುಂಬಿದ ನಂತರದಲ್ಲಿ ಆ ಹುಂಡಿಯನ್ನು ಲಾರಿಯ ಮೂಲಕ ಹೊಸ ಪರಕಾಮಣಿಗೆ ಕೊಂಡೊಯ್ಯಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾಣಿಕೆ ಹುಂಡಿಯನ್ನು ಲಾರಿಗೆ ತುಂಬುತ್ತಿದ್ದ ವೇಳೆಯಲ್ಲಿ ಈ ಘಟನೆ ಸಂಭವಿಸಿದೆ. ತಿರುಪತಿ ವೆಂಕಟೇಶ್ವರನ ದರ್ಶನಕ್ಕಾಗಿ ಪ್ರತಿದಿನ ಸಾವಿರಾರು ಭಕ್ತರು ತಿರುಮಲಕ್ಕೆ ಭೇಟಿ ನೀಡುತ್ತಾರೆ. ಹೀಗೆ ಬರುವ ಭಕ್ತರು ದೇವರಿಗೆ ಕಾಣಿಕೆಯನ್ನು ಸಮರ್ಪಿಸುವುದು ಅತ್ಯಂತ ಪವಿತ್ರ ಎಂದೇ ನಂಬಿದ್ದಾರೆ. ಭಕ್ತರು ಹಣ, ಚಿನ್ನ ಹಾಗೂ ಇತರ ಅಮೂಲ್ಯ ವಸ್ತುಗಳ ರೂಪದಲ್ಲಿ ತಿಮ್ಮಪ್ಪನಿಗೆ ಹರಿಕೆಯನ್ನು ಸಲ್ಲಿಸುತ್ತಿದ್ದಾರೆ. ಇದರಿಂದಾಗಿಯೇ ದೇವಾಲಯಕ್ಕೆ ನಿತ್ಯವೂ ಕೋಟ್ಯಾಂತರ ರೂಪಾಯಿ ಆದಾಯ ಹರಿದು ಬರುತ್ತಿದೆ. ಅಲ್ಲದೇ ತಿರುಪತಿ ದೇವರ ಹುಂಡಿ ಅತ್ಯಂತ ಪವಿತ್ರವಾದುದು ಎಂದು ಹೇಳಲಾಗುತ್ತಿದೆ. ಇದೀಗ ಹುಂಡಿ ಕೆಳಗೆ ಬೀಳುತ್ತಿರುವ ಬಗ್ಗೆ ಭಕ್ತರು ಆತಂಕ ವ್ಯಕ್ತಪಡಿಸಿದ್ದಾರೆ.

ತಿರುಪತಿ ದೇವಸ್ಥಾನಕ್ಕೆ ಇದೀಗ ಭಕ್ತರ ದಂಡೇ ಹರಿದು ಬರುತ್ತಿದೆ. ಬುಧವಾರ 77,299ಕ್ಕೂ ಭಕ್ತರು ಸ್ವಾಮಿಯ ದರ್ಶನ ಪಡೆದುಕೊಂಡಿದ್ದಾರೆ. ಅಲ್ಲದೇ ಒಂದೇ ದಿನ 3.93 ಕೋಟಿ ರೂ. ಕಾಣಿಕೆ ಹರಿದು ಬಂದಿದೆ. ಇನ್ನು 30,479 ಭಕ್ತರು ಸ್ವಾಮಿಗೆ ತಾಲನಿಲ ಸಮರ್ಪಿಸಿ ಹರಕೆ ತೀರಿಸಿದರು. ಟೋಕನ್ ರಹಿತ ಭಕ್ತರು ಸರ್ವದರ್ಶನಕ್ಕಾಗಿ 21 ಕಂಪಾರ್ಟ್ ಮೆಂಟ್ ಗಳಲ್ಲಿ ಕಾಯುತ್ತಿದ್ದಾರೆ. ಅಲ್ಲದೇ ಶ್ರೀವಾರಿ ಸರ್ವದರ್ಶನಕ್ಕೆ 12 ಗಂಟೆಗಳ ಕಾಲ ಕಾಯಲೇ ಬೇಕು. ಕಳೆದ ನಾಲ್ಕೈದು ದಿನಗಳಿಂದಲೂ ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ.

ಇದನ್ನೂ ಓದಿ : Murder case‌ : 2 ತಿಂಗಳ ಹಿಂದೆಯಷ್ಟೇ ಮದುವೆ, ಆದರೆ ಪತ್ನಿ 4 ತಿಂಗಳ ಗರ್ಭಿಣಿ : ಅಮಾಯಕ ಪತ್ನಿಯ ಕತ್ತು ಸೀಳಿ ಕೊಲೆಗೈದ ಪತಿ

ಇದನ್ನೂ ಓದಿ : Uttar Pradesh Murder Case‌ : ಗರ್ಭಿಣಿ ಮಹಿಳೆಯನ್ನು ಇಟ್ಟಿಗೆಯಿಂದ ಹಲ್ಲೆ ನಡೆಸಿ ಹತ್ಯೆಗೈದ ಪ್ರಿಯಕರ

ಇನ್ನು ತಿರುಪತಿ ದೇವರ ಬ್ರೇಕ್‌ ಟಿಕೆಟ್‌ ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ ಆರೋದ ಹಿನ್ನೆಲೆಯಲ್ಲಿ ಟಿಟಿಡಿ ನೌಕರರನ್ನು ಪೊಲೀಸರು ಬಂಧಿಸಿದ್ದಾರೆ. ಹೈದರಾಬಾದ್‌ನ ಭಕ್ತರಿಗೆ ದೇವರ ದರ್ಶನದ ಟಿಕೆಟ್‌ ಅನ್ನು ಬರೋಬ್ಬರಿ 36 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಇದರಿಂದ ಅನುಮಾನಗೊಂಡ ಟಿಟಿಡಿ ವಿಜಿಲೆನ್ಸ್ ಅಧಿಕಾರಿಗಳು ವೈಕುಂಠಂ ಸರತಿ ಸಾಲಿನಲ್ಲಿದ್ದ ಭಕ್ತರನ್ನು ಪ್ರಶ್ನಿಸಿದ್ದಾರೆ. ಈ ವೇಳೆಯಲ್ಲಿ ಅತೀ ಹೆಚ್ಚು ಬೆಲೆಗೆ ಟಿಕೆಟ್‌ ಖರೀದಿ ಮಾಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ನೌಕರರನ್ನು ಬಂಧಿಸಲಾಗಿದೆ.

Tirupati Tirumala Temple : Disaster in Tirumala Tirumala Temple: Thimpappa’s offering pot fell down in the Mahadwara.

Comments are closed.