ಸೋಮವಾರ, ಏಪ್ರಿಲ್ 28, 2025
HomeCrimeLPG goods train : ಒಡಿಶಾ ರೈಲು ಅಪಘಾತ ಬೆನ್ನಲ್ಲೇ ಹಳಿ ತಪ್ಪಿದ ಎಲ್‌ಪಿಜಿ ಗ್ಯಾಸ್‌...

LPG goods train : ಒಡಿಶಾ ರೈಲು ಅಪಘಾತ ಬೆನ್ನಲ್ಲೇ ಹಳಿ ತಪ್ಪಿದ ಎಲ್‌ಪಿಜಿ ಗ್ಯಾಸ್‌ ತುಂಬಿದ್ದ ಗೂಡ್ಸ್ ರೈಲು

- Advertisement -

ಜಬಲ್‌ಪುರ : (LPG goods train) ಒಡಿಶಾ ರೈಲು ಅಪಘಾತ ನಡೆದು ಇನ್ನೂ 6 ದಿನಗಳು ಕಳೆಯುವ ಬೆನ್ನಲ್ಲೇ ಮಂಗಳವಾರ ರಾತ್ರಿ ಮಧ್ಯಪ್ರದೇಶದ ಜಬಲ್‌ಪುರ ಜಿಲ್ಲೆಯ ಗ್ಯಾಸ್ ಫ್ಯಾಕ್ಟರಿಯೊಳಗೆ ರೇಕ್‌ಗಳನ್ನು ಖಾಲಿ ಮಾಡಲು ಹೋಗುತ್ತಿದ್ದಾಗ ಎಲ್‌ಪಿಜಿ ಗ್ಯಾಸ್‌ ತುಂಬಿದ್ದ ಗೂಡ್ಸ್ ರೈಲಿನಿಂದ ಎರಡು ವ್ಯಾಗನ್‌ಗಳು ಎಲ್‌ಪಿಜಿ ರೇಕ್‌ಗಳು ಹಳಿತಪ್ಪಿದೆ. ಆದರೆ ಬಾರೀ ದುರಂತ ತಪ್ಪಿದೆ.

ಜಿಲ್ಲೆಯ ಶಹಪುರ ಭಿಟೋನಿ ನಿಲ್ದಾಣದ ಭಾರತ್ ಪೆಟ್ರೋಲಿಯಂ ಡಿಪೋ ಬಳಿ ಈ ಘಟನೆ ನಡೆದಿದೆ. ಮಾಹಿತಿ ಪಡೆದ ಕೂಡಲೇ ರೈಲ್ವೆ ಅಧಿಕಾರಿಗಳು ಅಪಘಾತ ಪರಿಹಾರ ವಾಹನದೊಂದಿಗೆ ತಡರಾತ್ರಿ ಸ್ಥಳಕ್ಕೆ ತಲುಪಿದರು. ಸದ್ಯ ಈ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿರುವುದಿಲ್ಲ.

ಇದನ್ನೂ ಓದಿ : Uttar Pradesh Crime Case‌ : ಮಗಳ ಮೇಲೆ ಅತ್ಯಾಚಾರ, ಆರೋಪಿಗಳ ವಿರುದ್ದ ಕ್ರಮಕೈಗೊಳ್ಳದ ಪೊಲೀಸರು : ತಂದೆ ಆತ್ಮಹತ್ಯೆಗೆ ಶರಣು

“ಕಳೆದ ರಾತ್ರಿ ಗೂಡ್ಸ್ ರೈಲಿನ ಎಲ್‌ಪಿಜಿ ರೇಕ್‌ನ ಎರಡು ವ್ಯಾಗನ್‌ಗಳನ್ನು ಇಳಿಸಲು ಇರಿಸುವಾಗ ಹಳಿತಪ್ಪಿತು. ರೈಲುಗಳ ಯಾವುದೇ ಮುಖ್ಯ ಮಾರ್ಗದ ಸಂಚಾರಕ್ಕೆ ತೊಂದರೆಯಾಗಲಿಲ್ಲ. ಮುಖ್ಯ ಮಾರ್ಗದಲ್ಲಿ ರೈಲು ಸಂಚಾರ ಸಾಮಾನ್ಯವಾಗಿದೆ. ಸೂರ್ಯೋದಯದ ನಂತರ ಸೈಡಿಂಗ್ ಅಧಿಕಾರಿಗಳ ಸಮ್ಮುಖದಲ್ಲಿ ಸೈಡಿಂಗ್ ಮಾಲೀಕರು ನೀಡಿದ ಫಿಟ್‌ನೆಸ್ ಪ್ರಮಾಣಪತ್ರದೊಂದಿಗೆ ಜೀರ್ಣೋದ್ಧಾರ ಕಾರ್ಯ ಪ್ರಾರಂಭವಾಗಿದೆ.”.ಸಿಪಿಆರ್‌ಒ ವೆಸ್ಟ್ ಸೆಂಟ್ರಲ್ ರೈಲ್ವೇ ಇಲಾಖೆಯವರು ತಿಳಿಸಿದ್ದಾರೆ.

Train Major Accident Averted: LPG goods train derails in MP

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular