SSLC Revaluation Result : SSLC ಮರುಮೌಲ್ಯಮಾಪನ ಫಲಿತಾಂಶ ಪ್ರಕಟ : 625ಕ್ಕೆ 625 ಅಂಕ ಪಡೆದ ರಾಮನಗರದ ರುಚಿತಾ

ಬೆಂಗಳೂರು : ರಾಜ್ಯದಲ್ಲಿ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಮರುಮೌಲ್ಯಮಾಪನ (SSLC Revaluation Result) ಫಲಿತಾಂಶವನ್ನು ಇಂದು (ಜೂನ್‌ 6) ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದೆ. ಸದ್ಯ ಎಸ್‌ಎಸ್‌ಎಲ್‌ಸಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಪಟ್ಟಿ ಹೊರಬಿದ್ದಿದ್ದೆ. ಇದರಲ್ಲಿ ರಾಮನಗರದ ಜಿಲ್ಲೆಯ ಮಾಗಡಿಯ ರುಚಿತಾ ಅವರು ನೂರಕ್ಕೆ ನೂರಷ್ಟು ಅಂಕವನ್ನು ಪಡೆದು ಅಗ್ರಸ್ಥಾನ ಗಳಿಸಿದ್ದಾರೆ.

ರಾಜ್ಯದಲ್ಲಿ ಈ ವರ್ಷ ಎಸ್‌ಎಸ್‌ಎಲ್‌ಸಿ ಮುಮೌಲ್ಯಮಾಪನಕ್ಕೆ ಒಟ್ಟು 12986 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, 2353 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅದರಲ್ಲಿ ರಾಮನಗರದ ಜಿಲ್ಲೆಯ ಮಾಗಡಿಯ ರುಚಿತಾ ವಿಜ್ಞಾನ ವಿಷಯಕ್ಕೆ 99 ಅಂಕ ಪಡೆದಿದ್ದರಿಂದ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದೀಗ ಮರುಮೌಲ್ಯಮಾಪನದಲ್ಲಿ ಒಂದು ಅಂಕ ಹೆಚ್ಚಿಗೆ ಪಡೆದಿದ್ದು, ಹೀಗಾಗಿ ಎಲ್ಲಾ ವಿಷಯಗಳನ್ನು ಸೇರಿಸಿ 625ಕ್ಕೆ 625 ಅಂಕ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ : Karnataka School Textbook revision : ಶಾಲಾ ಪಠ್ಯಪುಸ್ತಕ ಪರಿಷ್ಕರಣೆ : 2 ಅಧ್ಯಾಯ ಕೈ ಬಿಡಲು ಸರಕಾರ ನಿರ್ಧಾರ

ಈ ಬಾರಿ ಒಟ್ಟು 835102 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದು, ಶೇ. 83.88ರಷ್ಟು ಅಂದರೆ 700619 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಅದರಲ್ಲಿ ನಾಲ್ವರು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿದ್ದರು. ಜಿಲ್ಲಾವಾರು ಫಲಿತಾಂಶದಲ್ಲಿ ಚಿತ್ರದುರ್ಗ ಶೇ. 96.8 ಪ್ರಥಮ ಸ್ಥಾನ ಪಡೆದಿದೆ. ಶೇ. 96.78 ಪಡೆದ ಮಂಡ್ಯ, ಶೇ. 96.68 ಪಡೆದ ಹಾಸನ ನಾಲ್ಕನೇ ಸ್ಥಾನ ಪಡೆದಿತ್ತು. ಈ ಬಾರಿಯೂ ಕೂಡ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

SSLC Revaluation Result Announced: Ruchita from Ramanagara scored 625 out of 625

Comments are closed.