ಹರಿಯಾಣ : ಬಸ್ ಹಾಗೂ ಟ್ರಕ್ ಮುಖಾಮುಖಿ ಢಿಕ್ಕಿಯಾಗಿ (Truck Bus Accident) ಓರ್ವ ಸಾವನ್ನಪ್ಪಿ 50 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹರಿಯಾಣದ ಜಿಂದ್ ಜಿಲ್ಲೆಯಲ್ಲಿ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.
ಹರಿಯಾಣದ ಜಿಂದ್-ರೋಹ್ಟಕ್ ರಾಷ್ಟ್ರೀಯ ಹೆದ್ದಾರಿಯ ಹೋಟೆಲ್ ಬಳಿ ರಸ್ತೆ ಮಾರ್ಗದ ಬಸ್ ಭಾರೀ ಸರಕು ಇರುವ ಟ್ರಕ್ ವಾಹನದೊಂದಿಗೆ ಬಸ್ ಮುಖಾಮುಖಿ ಢಿಕ್ಕಿ ಹೊಡೆದು ಟ್ರಕ್ ಚಾಲಕ ಸಾವನ್ನಪ್ಪಿದ್ದಾನೆ ಮತ್ತು ಮಕ್ಕಳು ಸೇರಿದಂತೆ 50 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಸ್ಥಳಿಯರು ಹಾಗೂ ಪೊಲೀಸ್‌ರ ಸಹಾಯದಿಂದ ಗಾಯಗೊಂಡವರನ್ನು ಕೂಡಲೇ ಜುಲಾನಾದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಯಿತು.
ಅಲ್ಲಿನ ವೈದ್ಯರು 20 ಮಂದಿ ತೀವ್ರವಾಗಿ ಗಾಯಗೊಂಡ ಪ್ರಯಾಣಿಕರನ್ನು ಹೆಚ್ಚಿನ ಚಿಕಿತ್ಸೆಗಾಗಿ ರೋಹ್ಟಕ್‌ನ PGIMS ಆಸ್ಪತ್ರೆಗೆ ಶಿಫಾರಸು ಮಾಡಿದರು. ಘಟನೆಯ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಮತ್ತು ಇತರ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಗಮನಿಸಿರುತ್ತಾರೆ. ಘಟನೆಯ ಕುರಿತು ಜೂಲಾನಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಧಿಕಾರಿಗಳ ಪ್ರಕಾರ, ರೋಡ್‌ವೇಸ್ ಬಸ್ ಮುಂಜಾನೆ ಜಿಂದ್‌ನಿಂದ ಗುರ್ಗಾಂವ್ ಕಡೆಗೆ ಹೊರಟಿತು ಮತ್ತು ಜುಲಾನಾ ಬಳಿಯ ಜಿಂದ್-ರೋಹ್ಟಕ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹವೇಲಿ ಹೋಟೆಲ್‌ಗೆ ಆಗಮಿಸಿದ ತಕ್ಷಣ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. 2020 ರಲ್ಲಿ ಒಟ್ಟು 9,431 ಅಪಘಾತಗಳು ಸಂಭವಿಸಿದೆ ಎಂದು ವರದಿಯಾಗಿದೆ. ಇದು 2019 ರಲ್ಲಿ ಅದೇ ಅವಧಿಯಲ್ಲಿ ವರದಿಯಾದ ಸಂಖ್ಯೆಗಿಂತ 13.82% ಕಡಿಮೆಯಾಗಿದೆ. 2019 ರಲ್ಲಿ, ಪ್ರತಿ ದಿನ ಸರಿಸುಮಾರು 30 ಅಪಘಾತಗಳು ಸಂಭವಿಸಿರುತ್ತದೆ.
ಇದನ್ನೂ ಓದಿ : Ambulance Service : ದಾರಿ ಮಧ್ಯದಲ್ಲೇ ಖಾಲಿಯಾಯ್ತು ಅಂಬ್ಯುಲೆನ್ಸ್ ಇಂಧನ : ಹಾರಿ ಹೊಯ್ತು ರೋಗಿಯ ಪ್ರಾಣ, ನಿರ್ವಹಣೆ ವೈಫಲ್ಯ ಎಂದ ಸಚಿವ
ಇದನ್ನೂ ಓದಿ : Collision between two vehicles: ಗಾವಳಿಯಲ್ಲಿ ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ: ಖಾಸಗಿ ಬಸ್ ಚಾಲಕ ಗಂಭೀರ
ಇದನ್ನೂ ಓದಿ : South Korea Murder Case : ಸತ್ತ ಮಗುವನ್ನು 3 ವರ್ಷಗಳ ಕಾಲ ಕಂಟೇನರ್‌ನಲ್ಲಿ ಬಚ್ಚಿಟ್ಟ ದಂಪತಿ
2021 ರ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ದ ಅಂಕಿಅಂಶಗಳ ಪ್ರಕಾರ, ದ್ವಿಚಕ್ರ ವಾಹನಗಳು ಹೆಚ್ಚಿನ ಸಂಖ್ಯೆಯ ಮಾರಣಾಂತಿಕ ರಸ್ತೆ ಅಪಘಾತಗಳಿಗೆ (69,240 ಸಾವುಗಳು) ಕಾರಣವಾಗಿದೆ. ಇದು ಒಟ್ಟು ರಸ್ತೆ ಅಪಘಾತದ ಸಾವುಗಳಲ್ಲಿ 44.5% ರಷ್ಟಿದೆ. ನಂತರ ಕಾರುಗಳು (23,531 ಸಾವುಗಳು) ( 15.1%) ಮತ್ತು ಟ್ರಕ್‌ಗಳು/ಲಾರಿಗಳು (14,622 ಸಾವುಗಳು) ರಷ್ಟಿರುತ್ತದೆ ಎಂದು ತಿಳಿಸಿದ್ದಾರೆ.
Truck Bus Accident: 1 killed, 50 injured in truck-bus collision