Truck collision:‌ ಬಸ್ ನಿಲ್ದಾಣದಲ್ಲಿ ನಿಂತಿದ್ದವರಿಗೆ ಟ್ರಕ್‌ ಡಿಕ್ಕಿ: 6 ಸಾವು, 12 ಮಂದಿಗೆ ಗಾಯ

ಮಧ್ಯಪ್ರದೇಶ: (Truck collision) ಬಸ್‌ ನಿಲ್ದಾಣದಲ್ಲಿ ಬಸ್‌ ಗಾಗಿ ಕಾಯುತ್ತಿದ್ದ ಜನರ ಗುಂಪಿಗೆ ಟ್ರಕ್‌ ಒಂದು ಡಿಕ್ಕಿ ಹೊಡೆದು ಆರು ಮಂದಿ ಸಾವನ್ನಪ್ಪಿದ್ದು, 12 ಮಂದಿಗೆ ಗಾಯಗಳಾಗಿರುವ ಘಟನೆ ಮಧ್ಯಪ್ರದೇಶದ ರತ್ಲಾಮ್‌ ಜಿಲ್ಲೆಯಲ್ಲಿ ನಡೆದಿದೆ. ರತ್ಲಾಮ್‌ ಜಿಲ್ಲೆಯಿಂದ ಸುಮಾರು 35 ಕಿಮೀ ದೂರದಲ್ಲಿರುವ ರತ್ಲಾಮ್-ಲೆಬಾದ್ ರಸ್ತೆಯಲ್ಲಿರುವ ಸತ್ರುಂಡಾ ಗ್ರಾಮದ ಬಳಿಯ ಟ್ರಾಫಿಕ್ ಛೇದಕದಲ್ಲಿ ಈ ಅಪಘಾತ ಸಂಭವಿಸಿದೆ.

ಟ್ರಕ್‌ ರತ್ಲಾಮ್‌ ನಿಂದ ಬದ್ನಾವರ್‌ ಗೆ ಸಾಗುತ್ತಿರುವಾಗ ಅದರ ಟಯರ್‌ ಬ್ಲಾಸ್ಟ್‌ ಆಗಿದ್ದು, ವೇಗವಾಗಿ ಚಲಿಸುತ್ತಿದ್ದ ವಾಹನವು ಬಸ್‌ ನಿಲ್ದಾಣದಲ್ಲಿ ನಿಂತಿದ್ದ ಜನರ ಗುಂಪಿಗೆ ಡಿಕ್ಕಿ (Truck collision) ಹೊಡೆದಿದೆ. ಇದರ ಪರಿಣಾಮ ಆರು ಮಂದಿ ಸಾವನ್ನಪ್ಪಿದ್ದು, ಹನ್ನೆರಡು ಮಂದಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

Truck collision: ಅಪಘಾತದ ಚಿತ್ರಣ ಸಿಸಿಟಿವಿಯಲ್ಲಿ ಸೆರೆ

ಇನ್ನೂ ಅಪಘಾತದ ವಿಡಿಯೋ ಸಿಸಿಟಿವಿ ಯಲ್ಲಿ ಸೆರೆಯಾಗಿದ್ದು, ಟ್ರಕ್‌ ಬಂದು ಜನರಿಗೆ ಡಿಕ್ಕಿ ಹೊಡೆದಿದ್ದನ್ನು ಅದರಲ್ಲಿ ಕಾಣಬಹುದು. ಘಟನೆಯ ಕುರಿತಂತೆ ಹತ್ತಿದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ : Old lady murder: ವೃದ್ಧೆಯನ್ನು ಹತ್ಯೆಗೈದು ಬೀರುವಿನಲ್ಲಿಟ್ಟು ಪರಾರಿಯಾದ ಮುಸ್ಲಿಂ ಮಹಿಳೆ

ಇದನ್ನೂ ಓದಿ : Ermayi Falls : ಬೆಳ್ತಂಗಡಿ ಎರ್ಮಾಯಿ ಫಾಲ್ಸ್ ಗೆ ಹೋದ ವಿದ್ಯಾರ್ಥಿ ನೀರಲ್ಲಿ ಮುಳುಗಿ ಸಾವು

ಇದನ್ನೂ ಓದಿ : Gangster Raju Thet: ಗ್ಯಾಂಗ್‌ಸ್ಟರ್ ರಾಜು ಥೇಟ್ ಹತ್ಯೆ: ಐವರು ಆರೋಪಿಗಳ ಬಂಧನ

ಇದನ್ನೂ ಓದಿ : Hair transplant: ಕೂದಲು ಕಸಿ ಮಾಡಲು ಹೋಗಿ ತನ್ನ ಜೀವವನ್ನೇ ಕಳೆದುಕೊಂಡ

(Truck collision) A truck collided with a group of people waiting for a bus at a bus stand, killing six people and injuring 12 others in the Ratlam district of Madhya Pradesh. The accident took place at a traffic intersection near Satrunda village on the Ratlam-Lebad road, about 35 km from Ratlam district.

Comments are closed.