ಭಾನುವಾರ, ಏಪ್ರಿಲ್ 27, 2025
HomeCrimeTwins Sons killed : ಅವಳಿ ಮಕ್ಕಳನ್ನು ಕಾರಿನಲ್ಲಿ ಕರೆದೊಯ್ದು ಉಸಿರುಗಟ್ಟಿಸಿಕೊಂದ ಇಂಜಿನಿಯರ್ ತಂದೆ

Twins Sons killed : ಅವಳಿ ಮಕ್ಕಳನ್ನು ಕಾರಿನಲ್ಲಿ ಕರೆದೊಯ್ದು ಉಸಿರುಗಟ್ಟಿಸಿಕೊಂದ ಇಂಜಿನಿಯರ್ ತಂದೆ

- Advertisement -

ಹಾವೇರಿ : Twins Sons killed: ತನ್ನ ಅವಳಿ ಮಕ್ಕಳನ್ನು ಕಾರಿನಲ್ಲಿ ಕರೆದೊಯ್ದು ತಂದೆಯೇ ಉಸಿರುಗಟ್ಟಿಸಿ ಕೊಲೆಗೈದು, ಪತ್ನಿಗೆ ಕರೆ ಮಾಡಿ ತಿಳಿಸಿರುವ ದುರಂತ ಘಟನೆ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಟೋಲ್‌ಗೇಟ್‌ ಬಳಿಯಲ್ಲಿ ನಡೆದಿದೆ. ಕೌಟುಂಬಿಕ ಕಲಹವೇ ದುರಂತಕ್ಕೆ ಕಾರಣವೆನ್ನಲಾಗುತ್ತಿದೆ.

ನಾಲ್ಕು ವರ್ಷ ಪ್ರಾಯದ ಅದ್ವೈತ್‌ ಹಾಗೂ ಅಮ್ವಿತ್‌ ಎಂಬವರೇ ಮೃತ ದುರ್ದೈವಿಗಳು. ಬೆಳಗಾವಿ ಜಿಲ್ಲೆಯ ಗೋಕಾಕ್‌ ನಿವಾಸಿ ಅಮರ್‌ ಕಿತ್ತೂರು ಎಂಬಾತನೇ ಮಕ್ಕಳ ಕೊಲೆಗೈದ ಪಾಪಿ ತಂದೆ. ಅಮರ್‌ ಕಿತ್ತೂರು ದಾವಣಗೆರೆಯ ಆಂಜನೇತ ಮಿಲ್‌ ಬಡಲಾವಣೆಯಲ್ಲಿ ವಾಸವಾಗಿದ್ದು, ಹರಿಹರ ಬಳಿಯಲ್ಲಿರುವ ಕಾರ್ಗಿಲ್‌ ಫ್ಯಾಕ್ಟರಿಯಲ್ಲಿ ಕೆಮಿಕಲ್‌ ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದ. ಅಮರ್‌ ತನ್ನ ಮಕ್ಕಳನ್ನು ಕರೆದೊಯ್ದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ಮಕ್ಕಳನ್ನು ಅಮರ್‌ ಕರೆದೊಯ್ದಿರುವ ವಿಚಾರ ತಿಳಿಯುತ್ತಿದ್ದಂತೆಯೇ ಪತ್ನಿ ಅಮರ್‌ಗೆ ಕರೆ ಮಾಡಿದ್ದಾರೆ. ಆದರೆ ಈ ವೇಳೆಯಲ್ಲಿ ಅಮರ್‌ ಮಕ್ಕಳ ಕಥೆ ಮುಗಿದಿದೆ ಎಂದು ಹೇಳಿ ಕಾಲ್‌ ಕಟ್‌ ಮಾಡಿದ್ದ. ನಂತರ ತನ್ನ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡಿದ್ದಾನೆ. ಅಷ್ಟೇ ಅಲ್ಲದೇ ಅಮರ್‌ ತನ್ನ ಕಾರಿನಲ್ಲಿಯೇ ಮಕ್ಕಳ ಶವಗಳನ್ನು ದಾವಣಗೆರೆಗೆ ತಂದಿದ್ದಾನೆ ಎಂದು ತಿಳಿದುಬಂದಿದೆ.

Twins Sons killed : ಮಕ್ಕಳನ್ನು ಕೊಲೆಗೈದು ಪತ್ನಿಗೆ ತಿಳಿಸಿದ !

ಅಮರ್‌ ಕಿತ್ತೂರು ಮಕ್ಕಳ ಕಥೆ ಮುಗಿದಿದೆ ಎನ್ನುತ್ತಿದ್ದಂತೆಯೇ ಪತ್ನಿ ಕೂಡಲೇ ದಾವಣಗೆರೆ ಠಾಣೆಯ ಪೊಲೀಸರಿಗ ಕರೆ ಮಾಡಿ ಮಕ್ಕಳನ್ನು ರಕ್ಷಿಸುವಂತೆ ಮೊರೆಯಿಟ್ಟಿದ್ದಾರೆ. ನಂತರ ಆತನ ಮೊಬೈಲ್‌ ಲೋಕೇಷನ್‌ ಆಧಾರದ ಮೇಲೆ ಅಮರ್‌ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದು, ಕಾರಿನಲ್ಲಿ ಮಕ್ಕಳ ಶವ ಪತ್ತೆಯಾಗಿದೆ. ಅಲ್ಲದೇ ಈ ಕೊಲೆಯನ್ನು ತಾನೇ ಮಾಡಿರುವುದಾಗಿಯೂ ಒಪ್ಪಿಕೊಂಡಿದ್ದಾನೆ. ಮೇಲ್ನೋಟಕ್ಕೆ ಕೌಟುಂಬಿಕ ಕಲಹದ ಹಿನ್ನೆಲಯಲ್ಲಿ ಈ ಕೃತ್ಯ ನಡೆದಿದೆ ಎನ್ನಲಾಗುತ್ತಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ : LPG commercial Price : ಎಲ್ ಪಿಜಿ ಗ್ರಾಹಕರಿಗೆ ಗುಡ್ ನ್ಯೂಸ್ : ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 83.5 ರೂ ಇಳಿಕೆ

ಇದನ್ನೂ ಓದಿ : Assault on divorced woman : ವಿಚ್ಚೇದಿತ ಮಹಿಳೆಯ ವಿವಸ್ತ್ರಗೊಳಿಸಿ ಹಲ್ಲೆ : ಪತಿ ಸೇರಿ ನಾಲ್ವರ ಬಂಧನ

Twins Sons killed father Amar Kittur in chalageri toll plaza Ranebennur Haveri

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular