ಬೆಂಗಳೂರು : twist in Praveen Nettaru’s murder case: ಹಿಂದೂ ಕಾರ್ಯಕರ್ತ ಹಾಗೂ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣವು ಇಡೀ ರಾಜ್ಯದಲ್ಲಿಯೇ ಸಂಚಲನ ಮೂಡಿಸಿದೆ. ಈಗಾಗಲೇ ರಾಜ್ಯ ಸರ್ಕಾರವು ಈ ಪ್ರಕರಣದ ಹೆಚ್ಚಿನ ತನಿಖೆಯನ್ನು ನಡೆಸುವಂತೆ ರಾಷ್ಟ್ರೀಯ ತನಿಖಾ ದಳಕ್ಕೆ ಪ್ರಕರಣವನ್ನು ಹಸ್ತಾಂತರಿಸುವುದಾಗಿ ಹೇಳಿದೆ. ಕೇರಳದಿಂದ ಬಂದವರು ಪ್ರವೀಣ್ ನೆಟ್ಟಾರು ಕೊಲೆ ಮಾಡಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೊಂದು ಅಂತಾರಾಜ್ಯ ಕೊಲೆ ಪ್ರಕರಣವೆಂದು ಭಾವಿಸಿ ಈ ಕೊಲೆ ಪ್ರಕರಣವನ್ನು ಎನ್ಐಗೆ ವಹಿಸಲಾಗಿದೆ.
ಆದರೆ ಈ ಎಲ್ಲದರ ನಡುವೆ ಇದೀಗ ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಫೋಟಕ ಮಾಹಿತಿಯೊಂದನ್ನು ನೀಡಿದ್ದಾರೆ. ಖಾಸಗಿ ಸುದ್ದಿ ವಾಹಿನಿಯೊಂದಿಗೆ ಈ ವಿಚಾರವಾಗಿ ಮಾತನಾಡಿರುವ ಆರಗ ಜ್ಞಾನೇಂದ್ರ ಸ್ಥಳೀಯರೇ ಪ್ರವೀಣ್ ನೆಟ್ಟಾರು ಕೊಲೆ ಮಾಡಿದ್ದಾರೆ ಎಂಬ ಸ್ಫೋಟಕ ಮಾಹಿತಿಯನ್ನು ನೀಡಿದ್ದಾರೆ. ಈ ಮೂಲಕ ಇಲ್ಲಿವರೆಗೆ ಕೇರಳದಿಂದ ಬಂದ ವ್ಯಕ್ತಿಗಳು ಪ್ರವೀಣ್ ಅಂಗಡಿಯಿಂದ ಹೊರ ಬರುವುದನ್ನು ಹೊಂಚು ಹಾಕಿ ಬಳಿಕ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆಂಬ ಗುಮಾನಿಗೆ ದೊಡ್ಡ ಟ್ವಿಸ್ಟ್ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯ ನೆಟ್ಟಾರು ಗ್ರಾಮದವರಾದ ಪ್ರವೀಣ್ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ವ್ಯಕ್ತಿ. ಬೆಳ್ಳಾರೆಯ ಮೇಲಿನ ಬೆಟ್ಟದಲ್ಲಿ ಚಿಕನ್ ಅಂಗಡಿಯನ್ನು ನಡೆಸುತ್ತಿದ್ದ ಪ್ರವೀಣ್ ರಾತ್ರಿ ಅಂಗಡಿಯನ್ನು ಬಂದ್ ಮಾಡಿ ಬೈಕ್ನಲ್ಲಿ ಮನೆಗೆ ತೆರಳಲು ಮುಂದಾಗುತ್ತಿದ್ದಂತೆಯೇ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಪ್ರವೀಣ್ ಕುತ್ತಿಗೆಗೆ ತಲವಾರ್ನಿಂದ ಮಾರಣಾಂತಿಕ ದಾಳಿ ನಡೆದಿ ಸ್ಥಳದಿಂದ ಎಸ್ಕೇಪ್ ಆಗಿದ್ದರು.
ತೀವ್ರ ರಕ್ತಸ್ರಾವದ ನಡುವೆ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಪ್ರವೀಣ್ ನೆಟ್ಟಾರುವನ್ನು ಆಂಬುಲೆನ್ಸ್ ಮೂಲಕ ಪುತ್ತೂರಿನ ಪ್ರಗತಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡುವ ಪ್ರಯತ್ನ ಮಾಡಲಾಗಿತ್ತಾದರೂ ಪ್ರವೀಣ್ ಘಟನೆ ನಡೆದ ಸ್ಥಳದಿಂದ 18 ಕಿಲೋ ಮೀಟರ್ ದೂರ ಕ್ರಮಿಸುವಷ್ಟರಲ್ಲಿ ಜೀವ ಚೆಲ್ಲಿದ್ದರು. ಬಳಿಕ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಪ್ರವೀಣ್ ಮೃತದೇಹವನ್ನು ಶಿಫ್ಟ್ ಮಾಡಿ ಮರಣೋತ್ತರ ಪರೀಕ್ಷೆಯನ್ನು ನಡೆಸಿ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿತ್ತು.
ಇದನ್ನು ಓದಿ : Heavy rains : ಸುಳ್ಯ ತಾಲೂಕಿನಲ್ಲಿ ವರುಣನ ರೌದ್ರ ನರ್ತನ : ಮಳೆಯ ಅಬ್ಬರಕ್ಕೆ ಕೊಚ್ಚಿ ಹೋದ ಸೇತುವೆ, ಹಲವು ಗ್ರಾಮಗಳ ಸಂಪರ್ಕ ಕಡಿತ
ಇದನ್ನೂ ಓದಿ : Ramayana quiz : ರಾಮಾಯಣ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಗಮನಾರ್ಹ ಟಾಪರ್ಗಳಾಗಿ ಹೊರ ಹೊಮ್ಮಿದ ಮುಸ್ಲಿಂ ವಿದ್ಯಾರ್ಥಿಗಳು
twist in Praveen Nettaru’s murder case: Locals are suspected to have committed the murder