Rohit Sharma Fitness Update : ರೋಹಿತ್ ಶರ್ಮಾ ಕಂಪ್ಲೀಟ್ ಫಿಟ್.. ವಿಂಡೀಸ್ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ಆಡಲಿದ್ದಾರೆ ಟೀಮ್ ಇಂಡಿಯಾ ಕ್ಯಾಪ್ಟನ್

ಫ್ಲೋರಿಡಾ: (Rohit Sharma Fitness Update ) ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟಿ20 ಪಂದ್ಯದ ವೇಳೆ ಬೆನ್ನು ನೋವಿನ ಸಮಸ್ಯೆ ಎದುರಿಸಿದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಸಂಪೂರ್ಣ ಫಿಟ್ ಆಗಿದ್ದು 4ನೇ ಟಿ20 ಪಂದ್ಯದಲ್ಲಿ ಆಡಲಿದ್ದಾರೆ.

ಸೇಂಟ್ ಕಿಟ್ಸ್’ನ ವಾರ್ನರ್ ಪಾರ್ಕ್ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ (India vs West Indies T20 Series) ಬ್ಯಾಟಿಂಗ್ ಮಾಡುವ ವೇಳೆ ರೋಹಿತ್ ಶರ್ಮಾ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿತ್ತು. ಕೇವಲ 5 ಎಸೆತಗಳಲ್ಲಿ ಒಂದು ಬೌಂಡರಿ, 1 ಸಿಕ್ಸರ್ ಸಿಡಿಸಿ ಉತ್ತಮ ಆರಂಭ ಪಡೆದಿದ್ದ ರೋಹಿತ್ ಶರ್ಮಾ, ಬೆನ್ನ ನೋವಿನ ಕಾರಣ ತಮ್ಮ ಆಟವನ್ನು ಮೊಟಕುಗೊಳಿಸಿ ಕ್ರೀಸ್ ತೊರೆದಿದ್ದರು. ಹೀಗಾಗಿ 4ನೇ ಪಂದ್ಯದಲ್ಲಿ ರೋಹಿತ್ ಆಡುವ ಬಗ್ಗೆ ಅನುಮಾನಗಳು ಎದ್ದಿದ್ದವು. ಆದರೆ ಈಗ ರೋಹಿತ್ ಶರ್ಮಾ ಅವರ ಫಿಟ್ನೆಸ್ ಬಗ್ಗೆ ಸ್ಪಷ್ಟ ಮಾಹಿತಿ ಹೊರ ಬಿದ್ದಿದ್ದು, 4ನೇ ಟಿ20 ಪಂದ್ಯಕ್ಕೆ ಹಿಟ್ ಮ್ಯಾನ್ ಲಭ್ಯರಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ 4 ಹಾಗೂ 5ನೇ ಪಂದ್ಯ ಶನಿವಾರ ಮತ್ತು ಭಾನುವಾರ ಅಮೆರಿಕದ ಫ್ಲೋರಿಡಾದ ಲಾಡರ್’ಹಿಲ್ ಮೈದಾನದಲ್ಲಿ ನಡೆಯಲಿದೆ. ವೆಸ್ಟ್ ಇಂಡೀಸ್ ವಿರುದ್ಧ ಐದು ಪಂದ್ಯಗಳ ಸರಣಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ 2-1ರ ಮುನ್ನಡೆಯಲ್ಲಿದೆ. ಮೊದಲ ಪಂದ್ಯವನ್ನು ಭಾರತ 68 ರನ್’ಗಳಿಂದ ಗೆದ್ದಿದ್ರೆ, 2ನೇ ಪಂದ್ಯವನ್ನು ವೆಸ್ಟ್ ಇಂಡೀಸ್ 5 ವಿಕೆಟ್’ಗಳಿಂದ ಗೆದ್ದುಕೊಂಡಿತ್ತು.

3ನೇ ಪಂದ್ಯವನ್ನು 7 ವಿಕೆಟ್’ಗಳಿಂದ ಭರ್ಜರಿಯಾಗಿ ಗೆದ್ದಿದ್ದ ರೋಹಿತ್ ಶರ್ಮಾ ಬಳಗ ಸರಣಿಯಲ್ಲಿ 2-1ರ ಮುನ್ನಡೆ ಸಾಧಿಸಿತ್ತು. ಫ್ಲೋರಿಡಾದಲ್ಲಿ ನಡೆಯುವ 4ನೇ ಪಂದ್ಯವನ್ನೂ ಟೀಮ್ ಇಂಡಿಯಾ ಗೆದ್ದಲ್ಲಿ, ವಿಂಡೀಸ್ ವಿರುದ್ಧದ ಟಿ20 ಸರಣಿಯನ್ನೂ ಕೈವಶ ಮಾಡಿಕೊಳ್ಳಲಿದೆ. ಇದಕ್ಕೂ ಮೊದಲು ನಡೆದ 3 ಪಂದ್ಯಗಳ ಏಕದಿನ ಸರಣಿಯನ್ನು ಭಾರತ ತಂಡ ಶಿಖರ್ ಧವನ್ ನಾಯಕತ್ವದಲ್ಲಿ 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು.

ಇದನ್ನೂ ಓದಿ : Suryakumar Yadav T20 Ranking : ಪಾಕ್ ನಾಯಕ ಹಿಂದಿಕ್ಕಲು ಎರಡೇ ಪಾಯಿಂಟ್ಸ್‌ : T20 ಕ್ರಿಕೆಟ್‌ ಜಗತ್ತಿಗೆ ನಂ.1 ಆಗಲಿದ್ದಾರೆ ಸೂರ್ಯಕುಮಾರ್‌

ಇದನ್ನೂ ಓದಿ : ಮಿಯಾಮಿ ಬೀಚ್‌ನಲ್ಲಿ ಹಾರ್ದಿಕ್ ಪಾಂಡ್ಯ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್ ಬಿಂದಾಸ್ ಎಂಜಾಯ್

ಇದನ್ನೂ ಓದಿ : KL Rahul set to India Comeback : ಏಷ್ಯಾ ಕಪ್ ಟೂರ್ನಿಯಲ್ಲಿ ಆಡಲಿದ್ದಾರೆ ಕೆ.ಎಲ್ ರಾಹುಲ್, ಮಹತ್ವದ ಮಾಹಿತಿ ಕೊಟ್ಟ ಬಿಸಿಸಿಐ

Rohit Sharma Fitness Update Team India captain will play in the 4th T20 match against West Indies

Comments are closed.