ಸೋಮವಾರ, ಏಪ್ರಿಲ್ 28, 2025
HomeCoastal NewsUdupi Crime : ಅಕ್ರಮ ಅಸ್ತಿ ಪ್ರಕರಣ: ಉಡುಪಿ ಸರಕಾರಿ ಅಧಿಕಾರಿಗೆ 1ವರ್ಷ ಶಿಕ್ಷೆ ಹಾಗೂ...

Udupi Crime : ಅಕ್ರಮ ಅಸ್ತಿ ಪ್ರಕರಣ: ಉಡುಪಿ ಸರಕಾರಿ ಅಧಿಕಾರಿಗೆ 1ವರ್ಷ ಶಿಕ್ಷೆ ಹಾಗೂ ರೂ 1ಲಕ್ಷ ದಂಡ

- Advertisement -

ಉಡುಪಿ : Udupi Crime : ಸರಕಾರಿ ಅಧಿಕಾರಿಯೊಬ್ಬರು ತಮ್ಮ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿಯನ್ನು ಹೊಂದಿದ ಕಾರಣದಿಂದ ಜಿಲ್ಲಾ ಸತ್ರ ನ್ಯಾಯಾಲಯವು ಒಂದು ವರ್ಷ ಸೆರೆಮನೆ ವಾಸ ಹಾಗೂ ಒಂದು ಲಕ್ಷ ದಂಡ ವಿಧಿಸಿದೆ.

ಅಕ್ರಮ ಆಸ್ತಿ ಪ್ರಕರಣದಲ್ಲಿ ಸಿಲುಕಿಕೊಂಡ ಅಧಿಕಾರಿ ಅಬ್ದುಲ್‌ ಅಜೀಜ್‌ ಅವರು ಕುಂದಾಪುರ ವಲಯ ಅರಣ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವರದಿಗಳ ಪ್ರಕಾರ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿಯನ್ನು ಹೊಂದಿರುವ ಬಗ್ಗೆ ಅಂದಿನ ಪಿ.ಐ.ಕೆ.ಯು. ಬೆಳ್ಳಿಯಪ್ಪ ಅವರು ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಬೆಳ್ಳಿಯಪ್ಪ ಸಂಗ್ರಹಿಸಿದ ಮಾಹಿತಿ ಪ್ರಕಾರ, ಮಂಗಳೂರು ಪೊಲೀಸ್‌ ವಿಭಾಗದ ಎಸ್‌.ಪಿ. ಧರ್ಮರಾಜ್‌ ಎ.ಜಿ ರವರು ಪ್ರಕರಣ ದಾಖಲಿ, ಉಡುಪಿ ಜಿಲ್ಲಾ ಸತ್ರ ನ್ಯಾಯಾಲಯದಿಂದ ಆಪಾದಿತ ಮನೆ ಶೋಧ ನಡೆಸಲು ಸರ್ಚ್‌ ವಾರೆಂಟ್‌ ಪಡೆಸು ಎಸ್‌.ಪಿ. ಹಾಗೂ ಉಡುಪಿಯ ಪ್ರಭಾರ ಡಿ.ವೈ.ಎಸ್‌ಪಿ. ರವರು ಆಪಾದಿತ ಸರಕಾರಿ ಅಧಿಖಾರಿಯವರ ಮನೆ ಹಾಗೂ ಬ್ಯಾಂಕ್‌ ಲಾಕರ್‌ಗಳನ್ನು ಪರಿಶೀಲನೆ ನಡೆಸಿರುತ್ತಾರೆ.

ಪ್ರಕರಣದ ಮುಂದಿನ ತನಿಖೆ ಭಾಗವಾಗಿ ಲೋಕಾಯುಕ್ತ ಡಿ.ವೈ.ಎಸ್‌.ಪಿ. ಪ್ರಭುದೇವ ಬಿ. ಮಾನೆ, ಆರೋಪಿ ಸರಕಾರಿ ಅಧಿಕಾರಿಯು ಹೆಚ್ಚಿನ ಆದಾಯಕ್ಕಿಂತ ಹೆಚ್ಚಿನ ಆಸ್ತಿಯ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಿ, ತನಿಖೆಯನ್ನು ಸರಿಯಾದ ಸಮಯದಲ್ಲಿ ಪೂರ್ಣಗೊಳಿಸಿದ್ದಾರೆ. ಕೊನೆಯದಾಗಿ ಆರೋಪಿಯನ್ನು ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಿರುತ್ತಾರೆ.

ಇದನ್ನೂ ಓದಿ : Acharya Shri 108 Kamkumarnandi Maharaj : ಕಳ್ಮರೆಯಾಗಿದ್ದ ಜೈನಮುನಿ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು ಬರ್ಬರ ಕೊಲೆ

ಇದನ್ನೂ ಓದಿ : Crime News : ಬಂಟ್ವಾಳದಲ್ಲಿ ಮನೆಯ ಮೇಲೆ ಭೂ ಕುಸಿತ ಮಹಿಳೆ ಸಾವು

ಈ ಹಿನ್ನಲೆಯಲ್ಲಿ ಲೋಕಾಯುಕ್ತ ಡಿ.ವೈ.ಎಸ್‌.ಪಿ ಸದಾನಂದ ವರ್ಣೇಕರ್‌ ಇವರು ಆಪಾದಿತ ಸರಕಾರಿ ಅಧಿಕಾರಿಯ ವಿರುದ್ಧ ನ್ಯಾಯಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ, ಆರೋಪ ಸಾಬೀತಾದ ಹಿನ್ನಲೆಯಲ್ಲಿ, ನಗರದ ಜಿಲ್ಲಾ ಸತ್ರ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಶಾಂತವೀರ ಶಿವಪ್ಪ ಅವರು ಆರೋಪಿ ಅಬ್ದುಲ್‌ ಅಜೀಜ್‌ ಕಲಂ ಅವರಿಗೆ ಒಂದು ವರ್ಷ ಜೈಲುವಾಸ ಹಾಗೂ ಒಂದು ಲಕ್ಷ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಹಾಗೆಯೇ ಆರೋಪಿ ಅಬ್ದುಲ್‌ ಅಜೀಜ್‌ ಇವರು ನಿವೃತ್ತಿ ಪಡೆದಿದ್ದಾರೆ.

Udupi Crime: Illegal property case: Udupi government officer sentenced to 1 year and fined Rs 1 lakh

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular