ಉಡುಪಿ : ಸ್ನಾನ ಮಾಡುವ ಸಲುವಾಗಿ ನದಿಗೆ ಇಳಿದಿದ್ದ ಮೂವರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಮೂಡುಬೆಳ್ಳೆ ಸಮೀಪದ ಅಮಾಸೆಕರಿಯ ಬಳಿಯಲ್ಲಿ ನಡೆದಿದೆ.
ಸುಭಾಷ್ ನಗರದ ಸರ್ಕಾರಿ ಗುಡ್ಡೆ ನಿವಾಸಿ ಮೊಹಮದ್ ಜಾಬೀರ್ ( 18 ವರ್ಷ), ಮೂಡಬಿದರೆಯ ತಾಕೋಡೆ ನಿವಾಸಿ ಕೆಲ್ವಿನ್ ಕ್ಯಾಸ್ತಲೀನೋ (21ವರ್ಷ) ಹಾಗೂ ಕುರ್ಕಾಲು ಸುಭಾಷ್ ನಗರದ ನಿವಾಸಿ ಮಹಮ್ಮದ್ ರಿಜ್ವಾನ್ (18 ವರ್ಷ) ಎಂದು ಗುರುತಿಸಲಾಗಿದೆ.
ಮೂವರು ಯುವಕರು ಪಾಪನಾಶಿನಿ ನದಿಯಲ್ಲಿ ಸ್ನಾನಕ್ಕೆಂದು ನದಿಗೆ ಇಳಿದಿದ್ದಾರೆ. ಈ ವೇಳೆಯಲ್ಲಿ ನೀರಿನ ಆಳ ಗುರುಗಿಸಲು ಸಾಧ್ಯವಾಗದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
