ದೆಹಲಿ : Student Kills Friend : ಶಾಲೆಗೆ ಹೋಗಲು ಇಷ್ಟವಿಲ್ಲದ ವಿದ್ಯಾರ್ಥಿಗಳು ತಮಗೆ ಹುಷಾರಿಲ್ಲ ಅಂತಾ ಮನೆಯಲ್ಲಿ ಸುಳ್ಳು ಹೇಳೋದನ್ನು ಕೇಳಿರ್ತೇವೆ. ಆದರೆ ದೆಹಲಿಯಲ್ಲಿ 10ನೇ ವಿದ್ಯಾರ್ಥಿಯೊಬ್ಬ ಶಾಲೆಯನ್ನು ಬಿಡಬೇಕು ಉದ್ದೇಶದಿಂದ ಗಾಜಿನ ಬಾಟಲಿಯಿಂದ 14 ವರ್ಷದ ಸ್ನೇಹಿತನ ಕತ್ತು ಸೀಳಿದಿದ್ದಾನೆ. ದೆಹಲಿ ಮೀರತ್ ಎಕ್ಸ್ಪ್ರೆಸ್ ವೇ ಬಳಿಯಲ್ಲಿ ಈ ಕೃತ್ಯವನ್ನು ಎಸಗಿದ ಬಳಿಕ 16 ವರ್ಷದ ವಿದ್ಯಾರ್ಥಿ ಸೀದಾ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ .
ಪೊಲೀಸರು ತನಿಖೆಗೆ ಒಳಪಡಿಸಿದ ಸಂದರ್ಭದಲ್ಲಿ ಬಾಲಕನು ನನಗೆ ವಿದ್ಯಾಭ್ಯಾಸ ಇಷ್ಟವಿರಲಿಲ್ಲ. ನಾನು ಹೇಗಾದರೂ ಮಾಡಿ ಶಾಲೆಯಿಂದ ತಪ್ಪಿಸಿಕೊಳ್ಳಬೇಕು ಎಂದು ಇಚ್ಛಿಸಿದ್ದೆ. ಹೀಗಾಗಿ ನಾನು ನನ್ನ ಸ್ನೇಹಿತನನ್ನೇ ಕೊಲೆ ಮಾಡಿದ್ದೇನೆ. ಇದರಿಂದ ನಾನು ಇನ್ಮುಂದೆ ಜೈಲಿನಲ್ಲಿ ಇರಬಹುದು ಎಂದು ಬಾಲಕ ಹೇಳಿದ್ದಾನೆ. ಈ ಬಗ್ಗೆ ಘಾಜಿಯಾಬಾದ್ ಗ್ರಾಮೀಣ ಪೊಲೀಸ್ ಠಾಣೆಯ ಅಧೀಕ್ಷಕ ಇರಾಜ್ ರಾಜಾ ಅಧಿಕೃತ ಮಾಹಿತಿ ನೀಡಿದ್ದಾರೆ.
ಆತ ಶಾಲೆಯನ್ನು ತ್ಯಜಿಸಲು ಯೋಚಿಸುತ್ತಿದ್ದ . ಆದರೆ ಇದಕ್ಕೆ ಪೋಷಕರು ಒಪ್ಪಿಗೆ ನೀಡರಲಿಲ್ಲ. ಶಾಲೆಗೆ ಹೋಗುವುದಕ್ಕಿಂತ ಜೈಲಿಗೆ ಹೋಗುವುದೇ ವಾಸಿ ಎಂದು ಯೋಚಿಸಿದ ಈ ಬಾಲಕ ತನ್ನ ಸ್ನೇಹಿತನನ್ನೇ ಕೊಲೆ ಮಾಡಲು ಪ್ಲಾನ್ ರೂಪಿಸಿದ್ದ. ತಾನು ಜೈಲಿಗೆ ಹೋದರೆ ಶಾಲೆಗೆ ಹೋಗುವುದು ತಪ್ಪುತ್ತದೆ ಎನ್ನುವುದು ಬಾಲಕನ ಉದ್ದೇಶವಾಗಿತ್ತು. ಬಾಲಕನನ್ನು ನಾವು ನ್ಯಾಯಾಲಯದ ಎದುರು ಹಾಜರು ಪಡಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿ ಇರಾಜ್ ರಾಜಾ ಹೇಳಿದ್ದಾರೆ.
ಶಾಲೆಯಿಂದ ಮರಳಿದ ಬಳಿಕ ನಮ್ಮ ಪುತ್ರ ಸ್ನೇಹಿತನೊಂದಿಗೆ ಮನೆಯಿಂದ ಹೊರ ನಡೆದಿದ್ದ ಎಂದು ಕೊಲೆಯಾದ ಬಾಲಕನ ತಂದೆ ಹೇಳಿದ್ದಾರೆ. ಸ್ಥಳೀಯರು ಹಾಗೂ ಪೊಲೀಸರ ಜೊತೆಯಲ್ಲಿ ನಾವು ಎಕ್ಸ್ಪ್ರೆಸ್ ವೇ ಬಳಿ ತೆರಳಿದ ಬಳಿಕವೇ ನಮಗೆ ಈ ವಿಚಾರ ತಿಳಿದು ಬಂದಿದೆ. ನಮಗೆ ಸರ್ಕಾರದಿಂದ 50 ಲಕ್ಷ ರೂಪಾಯಿ ಪರಿಹಾರ ಹಾಗೂ ಕುಟುಂಬ ಸದಸ್ಯರಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ಮತ್ತು ಕೊಲೆಯಾದ ಬಾಲಕನ ಸಹೋದರರಿಗೆ ಉಚಿತ ಶಿಕ್ಷಣವನ್ನು ನೀಡಬೇಕು ಎಂದು ಬಾಲಕನ ತಂದೆ ಆಗ್ರಹಿಸಿದ್ದಾರೆ.
ಇದನ್ನು ಓದಿ : satish jarkiholi : ಬಿಜೆಪಿಗರು ಸಾವರ್ಕರ್ ಫೋಟೋ ಇಟ್ಟರೆ ಗಣೇಶೋತ್ಸವದಲ್ಲಿ ನಾವು ಅಂಬೇಡ್ಕರ್ ಫೋಟೋ ಇಡ್ತೇವೆ : ಸತೀಶ್ ಜಾರಕಿಹೊಳಿ
ಇದನ್ನೂ ಓದಿ : Ganesh festival in Shimoga : ಶಿವಮೊಗ್ಗದಲ್ಲಿ ಗಣೇಶೋತ್ಸವಕ್ಕೂ ಮುನ್ನ ಗಲಭೆ ನಡೆಸಲು ಹುನ್ನಾರ : ಸಂಚಲನ ಮೂಡಿಸಿದ ಅನಾಮಧೇಯ ಪತ್ರ
UP: Class 10 Student Kills Friend As He Wanted to Avoid Going to School, Surrenders Before Police