ಭಾನುವಾರ, ಏಪ್ರಿಲ್ 27, 2025
HomeCrimeGlucose Mixed With Red Medicine : ರಕ್ತದ ಬದಲು ರೋಗಿಯ ದೇಹಕ್ಕೆ ಗ್ಲುಕೋಸ್​ ಹಾಕಿದ ಆಸ್ಪತ್ರೆ...

Glucose Mixed With Red Medicine : ರಕ್ತದ ಬದಲು ರೋಗಿಯ ದೇಹಕ್ಕೆ ಗ್ಲುಕೋಸ್​ ಹಾಕಿದ ಆಸ್ಪತ್ರೆ ಸಿಬ್ಬಂದಿ

- Advertisement -

Glucose Mixed With Red Medicine : ರೋಗಿಯ ದೇಹಕ್ಕೆ ರಕ್ತವನ್ನು ಹಾಕುವ ಬದಲು ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಕೆಂಪು ಬಣ್ಣದ ಔಷಧಿಗೆ ಗ್ಲುಕೋಸ್​ ಮಿಕ್ಸ್​ ಮಾಡಿ ಹಾಕಿದ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದ ಮಹೋಬಾ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಈ ಘಟನೆಯ ಬಳಿಕ ಅನಾರೋಗ್ಯವೆಂದು ಜನರು ಆಸ್ಪತ್ರೆಯ ಕಡೆ ಮುಖ ಮಾಡುವುದಕ್ಕೂ ಮುನ್ನ ನೂರು ಬಾರಿ ಯೋಚಿಸುವಂತಾಗಿದೆ.


65 ವರ್ಷದ ರಾಮಕುಮಾರಿ ಎಂಬವರು ತನ್ನ ಪುತ್ರ ಜುಗಲ್​ನೊಂದಿಗೆ ಮಹೋಬಾ ಸದರ್​ ತಹಸೀಲ್​ನ ಭಂದ್ರಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ರಾಮಕುಮಾರಿ ತನ್ನ ಅಸ್ವಸ್ಥ ಮಗನ ಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆಗೆ ತೆರಳಿದ್ದ ಸಂದರ್ಭದಲ್ಲಿ ವೈದ್ಯರು ರೋಗಿಗೆ ರಕ್ತವನ್ನು ಟ್ರಾನ್ಸ್​ಫ್ಯೂಷನ್​ ಮಾಡಬೇಕು ಎಂದು ಹೇಳಿದ್ದಾರೆ .

ರಾಮಕುಮಾರಿಗೆ ಪುತ್ರನಿಗೆ ರಕ್ತ ನೀಡಬೇಕು ಅಂದರೆ 5000 ರೂಪಾಯಿ ಲಂಚ ಪಾವತಿಸಬೇಕೆಂದು ಆಸ್ಪತ್ರೆ ಸಿಬ್ಬಂದಿಯೊಬ್ಬಾಕೆ ಬೇಡಿಕೆ ಇಟ್ಟಿದ್ದಳು ಎನ್ನಲಾಗಿದೆ. ಹೇಗಾದರೂ ಮಾಡಿ ಮಗನನ್ನು ಉಳಿಸಿಕೊಳ್ಳಬೇಕೆಂದು ವೃದ್ಧೆ ರಾಮಕುಮಾರಿ ತನ್ನ ಚಿನ್ನಾಭರಣವನ್ನು ಮಾರಿ ಹಣದ ವ್ಯವಸ್ಥೆ ಮಾಡಿದ್ದಾರೆ. ರಕ್ತದ ವ್ಯವಸ್ಥೆ ಮಾಡಲು ಆರೋಗ್ಯ ಕಾರ್ಯಕರ್ತೆಗೆ 5 ಸಾವಿರ ರೂಪಾಯಿ ಲಂಚ ಪಾವತಿಸಿದ್ದರು.


ಆದರೆ ಆರೋಗ್ಯ ಕಾರ್ಯಕರ್ತೆಯು ರಕ್ತದ ಬದಲು ಗ್ಲುಕೋಸ್​ನಲ್ಲಿ ಕೆಂಪು ಬಣ್ಣದ ಔಷಧಿಯನ್ನು ಮಿಶ್ರಣ ಮಾಡಿದ್ದಾರೆ. ಹಾಗೂ ಇದನ್ನು ಅಸ್ವಸ್ಥನ ಮಗನಿಗೆ ನೀಡಲಾಗಿದೆ. ಇದರಿಂದ ಶೀಘ್ರದಲ್ಲಿಯೇ ವೃದ್ಧೆಯ ಪುತ್ರನ ಆರೋಗ್ಯ ಕ್ಷೀಣಿಸಲು ಆರಂಭಿಸಿದೆ. ಈ ಘಟನೆ ಬಗ್ಗೆ ಅರಿವಾಗುತ್ತಿದ್ದಂತೆಯೇ ಆಸ್ಪತ್ರೆಯ ವೈದ್ಯರು ಉನ್ನತ ಆಸ್ಪತ್ರೆಗೆ ರೋಗಿಯನ್ನು ಶಿಫ್ಟ್​ ಮಾಡಿದ್ದಾರೆ.


ಇನ್ನು ಈ ಘಟನೆಯ ಸಂಬಂಧ ಮಾತನಾಡಿದ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ. ಆರ್​.ಪಿ. ಮಿಶ್ರಾ, ಈ ಪ್ರಕರಣದ ಬಗ್ಗೆ ತನಿಖೆ ನಡೆಸಲು ತಂಡವನ್ನು ರಚಿಸಲಾಗಿದೆ. ಈ ಪ್ರಕರಣದ ಕಿಂಗ್​ಪಿನ್ ಮಹಿಳಾ ಆರೋಗ್ಯ ಕಾರ್ಯಕರ್ತೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ ಎಂದು ಹೇಳಿದರು.

ಇದನ್ನು ಓದಿ : boycott laal singh chaddha : ಆಮಿರ್​ ಖಾನ್​​-ಕರೀನಾ ಕಪೂರ್​​ಗೆ ಹೊಸ ಸಂಕಷ್ಟ: ಲಾಲ್​ ಸಿಂಗ್ ಚಡ್ಡಾ ಸಿನಿಮಾ ಬಹಿಷ್ಕಾರಕ್ಕೆ ಆಗ್ರಹ

ಇದನ್ನೂ ಓದಿ : acid attack victim : ಆ್ಯಸಿಡ್​ ಸಂತ್ರಸ್ತೆಗೆ 5ನೇ ಶಸ್ತ್ರಚಿಕಿತ್ಸೆ: ಅನಾರೋಗ್ಯಕ್ಕೊಳಗಾದ ಯುವತಿ ಐಸಿಯುಗೆ ಶಿಫ್ಟ್​

UP Health Worker Took Bribe for Blood Transfusion, Then Gave Patient Glucose Mixed With Red Medicine

RELATED ARTICLES

Most Popular