nannarasi radhe serial : ನನ್ನರಸಿ ರಾಧೆಯ ನಾಯಕಿ ಇಂಚರಾ ಬಗ್ಗೆ ನಿಮಗೆ ಗೊತ್ತಿಲ್ಲದ ಇಂಟೆರೆಸ್ಟಿಂಗ್​ ವಿಚಾರ ಇಲ್ಲಿದೆ ನೋಡಿ

nannarasi radhe serial : ಸಧ್ಯ ಕಿರುತೆರೆ ಲೋಕದಲ್ಲಿ ಸಾಲು ಸಾಲು ಹಿಟ್​ ಧಾರವಾಹಿಗಳು ಪ್ರಸಾರವಾಗುತ್ತಿದೆ. ಇದರಲ್ಲಿ ಒಂದು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ನನ್ನರಸಿ ರಾಧೆ ಧಾರವಾಹಿ. ಇಷ್ಟು ದಿನಗಳ ಕಾಲ ಅಗಸ್ತ್ಯನ ಅಮ್ಮನ ಹುಡುಕಾಟದ ಕತೆಯನ್ನು ತೋರಿಸುತ್ತಿದ್ದ ಈ ಧಾರವಾಹಿಯಲ್ಲೀಗ ಅಗಸ್ತ್ಯನ ತಂಗಿ ಎಂಟ್ರಿಯಾಗಿದ್ದು ದಿನಕ್ಕೊಂದು ಟ್ವಿಸ್ಟ್​ಗಳನ್ನು ನೀಡುವ ಮೂಲಕ ಪ್ರೇಕ್ಷಕರಿಗೆ ಸಖತ್​ ಥ್ರಿಲ್​ ಕೊಡ್ತಿದೆ.

ಜೈಲಿನಲ್ಲಿರುವ ಇಂದ್ರಾಣಿ ಅಲ್ಲಿಂದ ಹೊರ ಬರೋಕೆ ಅಶ್ವಿನಿಯನ್ನು ಹೇಗೆ ಬಳಸಿಕೊಳ್ತಾಳೆ..? ಅಶ್ವಿನಿ ಅಸಲಿ ಮುಖವೇನು..? ಇಂಚರಾ ಇವೆಲ್ಲವನ್ನೂ ಹೇಗೆ ಕಂಡು ಹಿಡೀತಾಳೆ..? ಹೀಗೆ ಸಾಕಷ್ಟು ಆಯಾಮಗಳಲ್ಲಿ ಈ ಎಪಿಸೋಡ್​ಗಳು ಸಾಗುತ್ತಿದೆ. ಈ ಧಾರವಾಹಿಯಲ್ಲಿ ಅಗಸ್ತ್ಯ ಹಾಗೂ ಇಂಚರ ಪಾತ್ರದಲ್ಲಿ ನಟಿಸುತ್ತಿರುವ ಅಭಿನವ್​ ಹಾಗೂ ಕೌಸ್ತುಭಾ ಮಣಿ ಅಭಿಮಾನಿಗಳ ಪಾಲಿನ ಫೇವರಿಟ್​ ಕಪಲ್​ ಎನಿಸಿದ್ದಾರೆ.


ಅಂದಹಾಗೆ ನಟಿ ಕೌಸ್ತುಭಾ ಮಣಿ ಪಾಲಿಗೆ ಇದು ಮೊದಲ ಧಾರವಾಹಿ. ಮೊದಲ ಧಾರವಾಹಿಯಲ್ಲಿಯೇ ಅಭಿಮಾನಿ ಬಳಗವನ್ನು ಸಂಪಾದಿಸುವಲ್ಲಿ ಕೌಸ್ತುಭಾ ಮಣಿ ಯಶಸ್ವಿಯಾಗಿದ್ದಾರೆ. ಇಂಚರ ಹಾಗೂ ಅಗಸ್ತ್ಯನ ಮುದ್ದಾದ ಜಗಳ, ಇಂಚರಾ ತುಂಟತನದಿಂದಾಗಿ ಈ ಧಾರವಾಹಿಯಲ್ಲಿ ಇಂಚರಾ ಪಾತ್ರಕ್ಕೆ ಅಪಾರ ಅಭಿಮಾನ ಬಳಗಿವೆ. ಕೌಸ್ತುಭಾ ಮಣಿ ಮೂಲತಃ ಅಯ್ಯಂಗಾರ್​ ಕುಟುಂಬಕ್ಕೆ ಸೇರಿದ್ದು ಬೆಂಗಳೂರಿನ ಬಸವನಗುಡಿಯಲ್ಲಿ ವಾಸವಿದ್ದಾರೆ. ಕೌಸ್ತುಭಾ ಮಣಿ ಈ ಧಾರವಾಹಿಯಲ್ಲಿ ನಟಿಸುವುದಕ್ಕೂ ಮುನ್ನ ಒಂದೂವರೆ ವರ್ಷಗಳ ಕಾಲ ಬ್ಯಾಂಕ್​​ ಒಂದರಲ್ಲಿ ಕೆಲಸ ಮಾಡಿದ್ದರು.

ಫೋಟೋಶೂಟ್​ ಒಂದರಲ್ಲಿ ಸ್ಯಾಂಡಲ್​ವುಡ್​ ನಟಿ ಮಾನ್ವಿತಾ ಹರೀಶ್​​​ ಜೊತೆ ಪರಿಚಯ ಮಾಡಿಕೊಂಡ ಕೌಸ್ತುಭಾ ಮಣಿಗೆ ಬಳಿಕ ಮಾನ್ವಿಯಾ ಹೀಗೆ ಧಾರವಾಹಿಗೆ ಆಡಿಷನ್​ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಆಡಿಷನ್​​ನಲ್ಲಿ ಆಯ್ಕೆಯಾದ ಕೌಸ್ತುಭಾ ಕಿರುತೆರೆಯಲ್ಲಿ ತಮ್ಮ ವೃತ್ತಿ ಕ್ಷೇತ್ರವನ್ನು ಆರಂಭಿಸಿದರು. ಸಧ್ಯ ಅವರು ರಾಮಚಾರಿ 2.0 ಸಿನಿಮಾದ ನಾಯಕಿಯಾಗಿಯೂ ಆಯ್ಕೆಯಾಗಿದ್ದು ಈ ಸಿನಿಮಾದ ಶೂಟಿಂಗ್​ನಲ್ಲಿಯೂ ಬ್ಯುಸಿಯಾಗಿದ್ದಾರೆ.

ಇದನ್ನು ಓದಿ : raja – rani : ಮತ್ತೆ ಶುರುವಾಗ್ತಿದೆ ರಾಜಾ-ರಾಣಿ ರಿಯಾಲಿಟಿ ಶೋ: ಸ್ಪರ್ಧಿಗಳು ಯಾರು, ಈ ಸೀಸನ್​ನ ವಿಶೇಷತೆಯೇನು ಇಲ್ಲಿದೆ ಮಾಹಿತಿ

ಇದನ್ನೂ ಓದಿ : boycott laal singh chaddha : ಆಮಿರ್​ ಖಾನ್​​-ಕರೀನಾ ಕಪೂರ್​​ಗೆ ಹೊಸ ಸಂಕಷ್ಟ: ಲಾಲ್​ ಸಿಂಗ್ ಚಡ್ಡಾ ಸಿನಿಮಾ ಬಹಿಷ್ಕಾರಕ್ಕೆ ಆಗ್ರಹ

introduction about nannarasi radhe serial lead role kaustubha mani

Comments are closed.