ಹುಬ್ಬಳ್ಳಿ : murder of Chandrasekhar Guruji Vanajakshi’s role: ಸರಳ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಸಾವಿನ ಹಿಂದೆ ಸಾಕಷ್ಟು ಅನುಮಾನಗಳು ಹುಟ್ಟಿಕೊಳ್ತಿದೆ. ಹುಬ್ಬಳ್ಳಿ ಖಾಸಗಿ ಹೋಟೆಲ್ನಲ್ಲಿ ಜುಲೈ 2ನೇ ತಾರೀಖಿನಿಂದ ತಂಗಿದ್ದ ಚಂದ್ರ ಶೇಖರ್ ಗುರೂಜಿಯನ್ನು ಇಂದು ಭೇಟಿ ಮಾಡುವ ಸೋಗಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅವರಿಗೆ ಬರೋಬ್ಬರಿ 32 ಬಾರಿ ಚಾಕುವನ್ನು ಇರಿದು ಬರ್ಬರವಾಗಿ ಕೊಲೆಗೈದಿದ್ದಾರೆ. ಕೊಲೆ ನಡೆಸಿದ ಬಳಿಕ ದುಷ್ಕರ್ಮಿಗಳು ಹೋಟೆಲ್ನಿಂದ ಪರಾರಿಯಾಗಿದ್ದು ಈ ಎಲ್ಲಾ ದೃಶ್ಯಗಳು ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಸಿಸಿ ಟಿವಿ ದೃಶ್ಯಾವಳಿಗಳನ್ನು ಆಧರಿಸಿದ ಪೊಲೀಸರು ಈ ಕೊಲೆಯನ್ನು ನಡೆಸಿರುವುದು ಚಂದ್ರಶೇಖರ್ ಗುರೂಜಿ ಆಪ್ತರೇ ಎಂದು ಅಂದಾಜಿಸಿದ್ದಾರೆ. ಚಂದ್ರಶೇಖರ್ ಗುರೂಜಿ ಆಪ್ತನಾದ ಮಹಂತೇಶ್ ಶಿರೋಳ್ ಆತನ ಪತ್ನಿ ಸರಳ ವಾಸ್ತು ಸಂಸ್ಥೆಯ ಮಾಜಿ ಉದ್ಯೋಗಿ ವನಜಾಕ್ಷಿ ಹಾಗೂ ಮಂಜುನಾಥ್ ದುಮ್ಮವಾಡ ಈ ಕೊಲೆಯ ಹಿಂದಿನ ರೂವಾರಿಗಳು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆರೋಪಿಗಳಾದ ಮಂಜುನಾಥ್ ದುಮ್ಮವಾಡ ಹಾಗೂ ಮಹಂತೇಶ್ ಶಿರೋಳ್ ಇಬ್ಬರೂ ಧಾರವಾಡ ಜಿಲ್ಲೆಯವರೇ ಆಗಿದ್ದು ಇಬ್ಬರೂ ತಲೆ ಮರೆಸಿಕೊಂಡಿದ್ದಾರೆ. ಮಹಂತೇಶ್ ಪತ್ನಿ ವನಜಾಕ್ಷಿಯನ್ನು ಗೋಕುಲ್ ರೋಡ್ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವನಜಾಕ್ಷಿ ಚಂದ್ರ ಶೇಖರ್ ಗುರೂಜಿ ಮಾಲೀಕತ್ವದ ಸರಳ ವಾಸ್ತು ಸಂಸ್ಥೆಯಲ್ಲಿ 2019ರವರೆಗೂ ಉದ್ಯೋಗಿಯಾಗಿದ್ದರು. ಮೂಲಗಳ ಪ್ರಕಾರ ಚಂದ್ರಶೇಖರ್ ಗುರೂಜಿ ವನಜಾಕ್ಷಿ ಹೆಸರಲ್ಲಿ ಸಾಕಷ್ಟು ಬೇನಾಮಿ ಆಸ್ತಿಯನ್ನು ಮಾಡಿದ್ದರು ಎನ್ನಲಾಗಿದೆ. ಫ್ಲ್ಯಾಟ್ ಸೇರಿದಂತೆ ಸಾಕಷ್ಟು ಆಸ್ತಿಯು ವನಜಾಕ್ಷಿ ಹೆಸರಿನಲ್ಲಿದೆ. ಪೊಲೀಸ್ ತನಿಖೆಯ ವೇಳೆಯಲ್ಲಿ ವನಜಾಕ್ಷಿ ಈ ಎಲ್ಲಾ ಆಸ್ತಿ ನಾವು ಸ್ವಂತ ಬಲದಿಂದ ಖರೀದಿ ಮಾಡಿದ್ದು ಎಂದು ಹೇಳಿಕೊಂಡಿದ್ದಾಳೆ. ಸದ್ಯ ಚಂದ್ರಶೇಖರ್ ಗುರೂಜಿಯ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಐವರು ಪೊಲೀಸ್ ತಂಡವನ್ನು ರಚಿಸಲಾಗಿದೆ. ಪ್ರಕರಣದ ಬಗ್ಗೆ ಪೊಲೀಸರು ಇಂಚಿಂಚೂ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ಹುಬ್ಬಳ್ಳಿ ಪೊಲೀಸ್ ಕಮಿಷನರ್ ಲಾಬೂರಾಮ್ ತನಿಖೆ ನಡೆಯುತ್ತಿದೆ. ತನಿಖೆ ಪೂರ್ಣಗೊಂಡ ಬಳಿಕ ಈ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ : Malaika Arora : ಪಾರದರ್ಶಕ ಉಡುಪು ಧರಿಸಿದ ಮಲೈಕಾ ಅರೋರಾ : ಕಾಲೆಳೆದ ನೆಟ್ಟಿಗರು
ಇದನ್ನೂ ಓದಿ :Chandrashekar guruji murder : ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಹತ್ಯೆ
Vanajakshi’s role in the murder of Chandrasekhar Guruji