ರಾಯಗಡ: (Veena Kapoor’s murder) ತನ್ನ 74 ವರ್ಷದ ತಾಯಿ ವೀಣಾ ಕಪೂರ್ ಅವರನ್ನು ಮಗನೇ ಕೊಂದು ಆಕೆಯ ಮೃತದೇಹವನ್ನು 4 ಅಡಿ ಪೆಟ್ಟಿಗೆಯಲ್ಲಿ ತುಂಬಿ ಕಮರಿಯಲ್ಲಿ ಎಸೆದ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮಾಥೆರಾನ್ ಬಳಿ ನಡೆದಿದೆ.
ವೀಣಾ ಕಪೂರ್ (Veena Kapoor’s murder) ಅವರನ್ನು ಕತ್ತು ಹಿಸುಕಿ ಕೊಂದಿರುವುದಾಗಿ ತಿಳಿದುಬಂದಿದೆ. ಈತ ನಿರುದ್ಯೋಗಿಯಾಗಿದ್ದು, ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿದಿನ ತಾಯಿಯೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ. ನಂತರದಲ್ಲಿ ಇದೇ ವಿಚಾರ ಅತಿರೇಕಕ್ಕೇರಿದ್ದು, ತಾಯಿಯನ್ನು ಕತ್ತು ಹಿಸುಕಿ ಕೊಂದಿದ್ದಾನೆ. ನಂತರ ದೇಹವನ್ನು ಪ್ಯಾಕ್ ಮಾಡಿಕೊಂಡು ಹೋಗಿ ಕಮರಿಯೊಂದರಲ್ಲಿ ಎಸೆದು ಬಂದಿದ್ದಾನೆ ಎನ್ನಲಾಗಿದೆ. ಇದೀಗ ಕೊಲೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತಿದ್ದಾರೆ.
ಮೃತ ವೀಣಾ ಕಪೂರ್ ಅವರ ಇನ್ನೊಬ್ಬ ಮಗ, ನೆವಿನ್ ಕಪೂರ್ ಯುಎಸ್‌ನಲ್ಲಿ ವಾಸಿಸುತ್ತಿದ್ದು, ವೀಣಾ ಕಪೂರ್ ಅವರೊಂದಿಗೆ ಪ್ರತಿದಿನ ಗಂಟೆಗಳ ಕಾಲ ಮಾತನಾಡುತ್ತಿದ್ದರು ಮತ್ತು ಮಂಗಳವಾರ ರಾತ್ರಿ 9 ಗಂಟೆಗೆ ಅವರು ಕರೆ ಮಾಡಿದಾಗ ವೀಣಾ ಕಪೂರ್ ಉತ್ತರಿಸಲಿಲ್ಲ. ನಂತರ, ಚಿಂತೆಗೀಡಾದ ನೆವಿನ್ ಕಪೂರ್, ಮನೆ ಕೆಲಸದವರಾದ ಚೋಟುಗೆ ಕರೆ ಮಾಡಿದರು. ಬಳಿಕ, ಚೋಟು ರಾತ್ರಿ 2 ಗಂಟೆ ಸುಮಾರಿಗೆ ಫ್ಲಾಟ್‌ಗೆ ಹೋದಾಗ, ಅಲ್ಲಿ ಯಾರೂ ಕಾಣಲಿಲ್ಲ ಎಂದು ನೆವಿನ್‌ಗೆ ಮಾಹಿತಿ ನೀಡಿದರು ಮತ್ತು ಸಚಿನ್ ಕಪೂರ್ ಫೋನ್ ಸ್ವಿಚ್ ಆಫ್ ಆಗಿದೆ ಎಂದೂ ಹೇಳಿದರು.
ನಂತರ, ನೆವಿನ್ ಕಪೂರ್ ಜುಹು ಪೊಲೀಸ್ ಠಾಣೆಯಲ್ಲಿ ವೀಣಾ ಕಪೂರ್ ಕಾಣೆಯಾದ ಬಗ್ಗೆ ದೂರು ದಾಖಲಿಸಲು ಚೋಟುಗೆ ಕೇಳಿದರು. ಆತ, ಅಪಾರ್ಟ್‌ಮೆಂಟ್ ಸೊಸೈಟಿ ಮೇಲ್ವಿಚಾರಕ ಜಾವೇದ್ ಮಾಪಾರಿಗೆ ಮಾಹಿತಿ ನೀಡಿದ್ದು, ಅವರು ಪೊಲೀಸರಿಗೆ ಕರೆ ಮಾಡಿ ದೂರು ದಾಖಲಿಸಿದ್ದಾರೆ. ಬಳಿಕ, ಪೊಲೀಸರು ಸ್ಥಳಕ್ಕೆ ಧಾವಿಸಿ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದರು. ವೀಲ್‌ಚೇರ್‌ನಲ್ಲಿ 4 ಅಡಿ ಉದ್ದದ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗುತ್ತಿರುವ ಸಚಿನ್ ಕಪೂರ್ ಅವರನ್ನು ಸಿಸಿ ಕ್ಯಾಮೆರಾ ದೃಶ್ಯದಲ್ಲಿ ಗಮನಿಸಿದರು. ತಮ್ಮ ಫ್ಲಾಟ್‌ನ ಕೋಣೆಯೊಳಗೆ ಬೀಗ ಹಾಕಿಕೊಂಡು ಅಡಗಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂದಿಸಿದ್ದಾರೆ.
ಇದನ್ನೂ ಓದಿ : Mandus Cyclone: ಮ್ಯಾಂಡಸ್ ಚಂಡಮಾರುತಕ್ಕೆ ನಾಲ್ವರು ಬಲಿ: ಜಲಾವೃತಗೊಂಡ ತಮಿಳುನಾಡು
ಇದನ್ನೂ ಓದಿ : Kidnap Case: ಮನೆಗೆ ನುಗ್ಗಿ ಯುವತಿಯನ್ನು ಅಪಹರಿಸಿದ 100 ಜನ ಯುವಕರ ಗುಂಪು: ವಿಡಿಯೋ ವೈರಲ್
ವಿಚಾರಣೆ ವೇಳೆ, ಸಚಿನ್ ಕಪೂರ್ ತನ್ನ ತಾಯಿಯನ್ನು ಕತ್ತು ಹಿಸುಕಿ, ನಂತರ ಆಕೆಯ ದೇಹವನ್ನು ಪೆಟ್ಟಿಗೆಯಲ್ಲಿ ಪ್ಯಾಕ್ ಮಾಡಿ ನವಿ ಮುಂಬೈನ ತೊರೆಗೆ ಎಸೆದಿದ್ದೇನೆ ಎಂದು ಹೇಳಿದ್ದಾನೆ. ಇನ್ನೊಮ್ಮೆ, ಶವವನ್ನು ನವಿ ಮುಂಬೈನ ಅರಣ್ಯ ಪ್ರದೇಶದಲ್ಲಿ ಎಸೆದಿರುವುದಾಗಿ ಹೇಳಿಕೊಂಡಿದ್ದಾನೆ. ಪೊಲೀಸರು ಇದೀಗ ಶವವನ್ನು ಎಸೆದಿರಬಹುದಾದ ಪ್ರದೇಶಗಳಲ್ಲಿ ಸಂಭವನೀಯ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳನ್ನು ಸ್ಕ್ಯಾನ್ ಮಾಡುತ್ತಿದ್ದು, ಈವರೆಗೆ ಮೃತದೇಹ ಪತ್ತೆಯಾಗಿಲ್ಲ.ಆರೋಪಿ ಸಚಿನ್ ಕಪೂರ್ ತಾಯಿಯ ಮೃತದೇಹ ಎಸೆದ ನಿಖರವಾದ ಸ್ಥಳದ ಬಗ್ಗೆ ಪೊಲೀಸರ ದಾರಿ ತಪ್ಪಿಸುತ್ತಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
(Veena Kapoor’s murder) The incident of Veena Kapoor’s 74-year-old mother being killed by her son and her dead body stuffed in a 4 feet box and dumped in a gorge took place near Matheron in Raigad district of Maharashtra.