Ishan Kishan Double Century : ಏಕದಿನ ಕ್ರಿಕೆಟ್ ನಲ್ಲಿ ಇಶಾನ್ ಕಿಶನ್ ದಾಖಲೆಯ ದ್ವಿಶತಕ

ಢಾಕಾ : Ishan Kishan Double Century : ಏಕದಿನ ಕ್ರಿಕೆಟ್ ನಲ್ಲಿ ಭಾರತದ ಆರಂಭಿಕ ಯುವ ಆಟಗಾರ ಇಶಾನ್ ಕಿಶನ್ ದಾಖಲೆ ಬರೆದಿದ್ದಾರೆ. 126 ಎಸೆತಗಳಲ್ಲಿ 200ರನ್ ಬಾರಿಸುವ ಮೂಲಕ ಕಿಶನ್ ಇದೀಗ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹವಾಗ್ ಹಾಗೂ ರೋಹಿತ್ ಶರ್ಮಾ ಅವರ ಸಾಲಿಗೆ ಸೇರಿದ್ದಾರೆ. ಇನ್ನು ಏಕದಿನ ಕ್ರಿಕೆಟ್ ನಲ್ಲಿ ದ್ವಿಶತಕ ಬಾರಿಸಿದ ವಿಶ್ವದ ಏಳನೇ ಆಟಗಾರ ಎನಿಸಿಕೊಂಡಿದ್ದಾರೆ.

ಬಾಂಗ್ಲಾದೇಶ ಪ್ರವಾಸ ಕೈಗೊಂಡಿರುವ ಭಾರತ ಈಗಾಗಲೇ ಸರಣಿ ಸೋಲು ಕಂಡಿದೆ. ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ರೋಹಿತ್ ಶರ್ಮಾ ಬದಲು ಆರಂಭಿಕನಾಗಿ ಕಣಕ್ಕೆ ಇಳಿದಿರುವ ಇಶಾನ್ ಕಿಶಾನ್ ಇಂದು ಸ್ಪೋಟಕ ಬ್ಯಾಟಿಂಗ್ ನಡೆಸಿದ್ದಾರೆ. ಕೇವಲ 131 ಎಸೆತಗಳಲ್ಲಿ ಭರ್ಜರಿ 10 ಸಿಕ್ಸರ್ ಹಾಗೂ 24 ಬೌಂಡರಿ ನೆರವಿನಿಂದ ಬರೋಬ್ಬರಿ 200 ರನ್ ಬಾರಿಸುವ ಮೂಲಕ ಏಕದಿನ ಕ್ರಿಕೆಟ್ ನಲ್ಲಿ ವಿಶ್ವದಾಖಲೆಯನ್ನು ನಿರ್ಮಿಸಿದ್ದಾರೆ.

ಭಾರತ ಪರ ಸಚಿನ್ ತೆಂಡೂಲ್ಕರ್ ದಕ್ಷಿಣ ಆಫ್ರಿಕಾ ತಂಡದ ವಿರುದ್ದ ಮೊದಲ ಬಾರಿಗೆ ಏಕದಿನ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದರು. ನಂತರ ವೀರೇಂದ್ರ ಸೆಹವಾಗ್ ದ್ವಿಶತ ಬಾರಿಸುವ ಮೂಲಕ ದಾಖಲೆಯನ್ನು ಸರಿಗಟ್ಟಿದ್ದರು. ತದ ನಂತರದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೂರು ಬಾರಿ ದ್ವಿಶತ ಬಾರಿಸುವ ಮೂಲಕ ವಿಶಿಷ್ಟ ವಿಶ್ವದಾಖಲೆಯನ್ನು ಬರೆದಿದ್ದಾರೆ. ಇದೀಗ ಇಶಾನ್ ಕಿಶನ್ ದ್ವಿಶತಕ ಬಾರಿಸುವ ಮೂಲಕ ಏಕದಿನ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಭಾರತದ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದಾರೆ.

ಇನ್ನು ನ್ಯೂಜಿಲೆಂಡ್ ತಂಡದ ಆಟಗಾರ ಮಾರ್ಟಿನ್ ಗಫ್ಟಿಲ್, ಪಾಕಿಸ್ತಾನ ಫಕರ್ ಜಮಾನ್, ವೆಸ್ಟ್ ಇಂಡಿಸ್ ದೈತ್ಯ ಕ್ರಿಸ್ ಗೇಲ್ ದ್ವಿಶತಕ ಬಾರಿಸಿದ್ದರು. ಏಕದಿನ ಪಂದ್ಯದಲ್ಲಿ ಮೂರು ದ್ವಿಶತಕ ಬಾರಿಸಿದ ಸಾಧನೆ ರೋಹಿತ್ ಶರ್ಮಾ ಅವರ ಹೆಸರಿನಲ್ಲಿದೆ.

ಇದನ್ನೂ ಓದಿ : BCCI postmortem Meeting : ಬಾಂಗ್ಲಾ ವಿರುದ್ಧ ಏಕದಿನ ಸರಣಿ ಸೋಲು, ಬಿಸಿಸಿಐ ಮೀಟಿಂಗ್’ನಲ್ಲಿ ಹೊರ ಬೀಳಲಿದೆ ಮಹತ್ವದ ನಿರ್ಧಾರ

ಇದನ್ನೂ ಓದಿ : India Women Vs Aus Women T20 : ಮೊದಲ ಟಿ20ಯಲ್ಲಿ ಆಸೀಸ್ ವನಿತೆಯರ ವಿರುದ್ಧ ಭಾರತಕ್ಕೆ 9 ವಿಕೆಟ್‌ಗಳ ಹೀನಾಯ ಸೋಲು

Ishan Kishan Slams Double Century india Vs Bangladesh Breaks wolrd Records Ind Vs Ban

Comments are closed.