ಭಾನುವಾರ, ಏಪ್ರಿಲ್ 27, 2025
HomeCrimeVI telecom: ನಿಮ್ಮ ಸಿಮ್‌ ಬ್ಯಾನ್‌ ಆಗಬಹುದು ಹುಷಾರ್‌! 7,948 ಕ್ಕೂ ಅಧಿಕ ಸಿಮ್‌ ಕಾರ್ಡ್‌...

VI telecom: ನಿಮ್ಮ ಸಿಮ್‌ ಬ್ಯಾನ್‌ ಆಗಬಹುದು ಹುಷಾರ್‌! 7,948 ಕ್ಕೂ ಅಧಿಕ ಸಿಮ್‌ ಕಾರ್ಡ್‌ ಬ್ಯಾನ್‌ ಮಾಡಿದ ವಿ ಟೆಲಿಕಾಂ

- Advertisement -

ಮಧ್ಯಪ್ರದೇಶದ ಸೈಬರ್‌ ಪೊಲೀಸ್‌ರ ಆದೇಶದ ಮೇರೆಗೆ ಅನೇಕ ಟೆಲಿಕಾಂ ಕಂಪನಿಗಳು ನಕಲಿ ದಾಖಲೆಯ ಸಿಮ್‌ ಕಾರ್ಡ್‌ಗಳನ್ನು ನಿರ್ಬಂಧಿಸಿದೆ ಎಂದು ವರದಿಯಾಗಿದೆ. ಇದರ ಪರಿಣಾಮವಾಗಿ ವೊಡಾಫೋನ್‌– ಐಡಿಯಾ(VI Telecom) ಸುಮಾರು 7,948 ಸಿಮ್‌ ಕಾರ್ಡ್‌ ಬ್ಯಾನ್‌ ಮಾಡಿದೆ. ನಕಲಿ ದಾಖಲೆ ಸೃಷ್ಟಿಸಿ ಖರೀದಿಸಿದ ಸಿಮ್‌ ಕಾರ್ಡ್‌ಗಳನ್ನು ಅಪರಾಧ ಪ್ರಕರಣಗಳಲ್ಲಿ ಬಳಕೆಯಾಗುವುದು ನಡೆಯುತ್ತಲೇ ಇದೆ, ಅಂತಹ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕುವುದಕ್ಕಾಗಿ ಮಧ್ಯಪ್ರದೇಶದ ಸೈಬರ್‌ ಕ್ರೈಂ ಪೊಲೀಸರು ಈ ಕ್ರಮ ಅನುಸರಿಸಿದ್ದಾರೆ ಎನ್ನಲಾಗಿದೆ.

ನಕಲಿ ದಾಖಲೆಗಳನ್ನು ನೀಡಿ ಖರೀದಿಸಿದ್ದ ಸಿಮ್‌ ಕಾರ್ಡ್‌ಗಳನ್ನು ಬ್ಯಾನ್‌ ಮಾಡುವಂತೆ ಎಲ್ಲಾ ಟೆಲಿಕಾಂ ಕಂಪನಿಗಳಿಗೆ ಮಧ್ಯಪ್ರದೇಶದ ಪೊಲೀಸರು ಸೂಚನೆ ನೀಡಿದ್ದರು. ಆ ಸೂಚನೆಯ ಅಡಿಯಲ್ಲಿ ವಿ ಟೆಲಿಕಾಂ ಒಂದೇ 7,948ಕ್ಕೂ ಅಧಿಕ ಸಿಮ್‌ ಕಾರ್ಡ್‌ಗಳನ್ನು ಬ್ಯಾನ್‌ ಮಾಡಿದೆ. ಹಾಗಾದರೆ, ವಿ ಟೆಲಿಕಾಂ ಮಧ್ಯಪ್ರದೇಶದಲ್ಲಿ ಇಷ್ಟೊಂದು ಸಿಮ್‌ ಕಾರ್ಡ್‌ ಬ್ಯಾನ್‌ ಮಾಡಲು ನಿಜವಾದ ಕಾರಣವಾದರೂ ಏನು?

ಮಧ್ಯಪ್ರದೇಶದ ಪೊಲೀಸರು ನೀಡಿದ ವರದಿಯ ಪ್ರಕಾರ ಅಪರಾಧ ಕೃತ್ಯದಲ್ಲಿ ತೊಡಗಿಕೊಂಡಿದ್ದವರಿಗೆ ಸಿಮ್‌ ಕಾರ್ಡ್‌ ನೀಡುವುದರಲ್ಲಿ 8 ಜನರು ಭಾಗಿಯಾಗಿರುವುದು ಕಂಡುಬಂದಿದೆ. 2020ರಲ್ಲಿ ಜಾಹೀರಾತಿನ ಮೂಲಕ ಕಾರು ಖರೀದಿಸುವ ಆಮಿಷವೊಡ್ಡಿ ವ್ಯಕ್ತಿಯೋರ್ವನಿಗೆ 1.75ಲಕ್ಷ ರೂಪಾಯಿ ವಂಚಿಸಿದ ಕೇಸ್‌ಅನ್ನು ಮಧ್ಯಪ್ರದೇಶದ ಸೈಬರ್‌ ಸೆಲ್‌ನ ಗ್ವಾಲಿಯರ್‌ ಯೂನಿಟ್‌ ತನಿಖೆ ಪ್ರಾರಂಭಿಸಿತ್ತು. ಈ ತನಿಖೆಯಲ್ಲಿ ಕಂಡುಬಂದಿದ್ದೇನೆಂದರೆ ವಂಚಕರಿಗೆ ಸಂಖ್ಯೆಯನ್ನು ಬೇರೆಯವರ ಹೆಸರಿನಲ್ಲಿ ನೀಡಿರುವುದು ಕಂಡುಬಂದಿದೆ.

ವಂಚಕನಿಗೆ ಸಿಮ್‌ ಕಾರ್ಡ್‌ ಪಡೆಯಲು 8 ಜನರು ಭಾಗಿಯಾಗಿದ್ದರು ಎಂಬುದು ನಂತರ ತಿಳಿದುಬಂದಿದೆ. ಈ ತನಿಖೆಯ ನಂತರ ಸಂಖ್ಯೆಗಳ ಬಳಕೆದಾರರನ್ನು ಪರಿಶೀಲಿಸಲು ಸೈಬರ್‌ ಪೋಲೀಸರು ವೊಡಾಫೋನ್‌– ಐಡಿಯಾ, ಏರ್‌ಟೆಲ್‌ ಮತ್ತು ಬಿಎಸ್‌ಎನ್‌ಎಲ್‌ ಕಂಪನಿಗಳಿಗೆ ನೋಟೀಸ್‌ ನೀಡಿತ್ತು. ಇದರ ಪರಿಣಾಮವಾಗಿ ವೊಡಾಫೋನ್‌– ಐಡಿಯಾ ಕಂಪನಿ 7,948 ಸಿಮ್‌ ಕಾರ್ಡ್‌ಗಳನ್ನು ಬ್ಯಾನ್‌ ಮಾಡಿದೆ. ಈ ರೀತಿಯಾಗಿದ್ದು ದೇಶದಲ್ಲಿ ಇದೇ ಮೊದಲು ಎಂದು ಮಧ್ಯಪ್ರದೇಶದ ಸೈಬರ್‌ ಪೊಲೀಸರು ಹೇಳಿದ್ದಾರೆ.

ಈ ರೀತಿಯ ಸಿಮ್‌ ಕಾರ್ಡ್‌ಗಳ ದುರುಪಯೋಗ ತಡೆಯಲು ಇತರ ಟೆಲಿಕಾಂ ಕಂಪನಿಗಳು ನಂಬರ್‌ಗಳನ್ನು ಮರು ಪರಿಶೀಲಿಸುತ್ತಿದ್ದಾರೆ. ಏಕೆಂದರೆ ವಂಚನೆ ಮಾಡಲೆಂದೇ 20 ಕ್ಕೂ ಅಧಿಕ ಬೇರೆ ಬೇರೆ ಸಂಖ್ಯೆಗಳನ್ನು ವಂಚಕರು ಉಪಯೋಗಿಸುತ್ತಿದ್ದರು ಎಂದು ಸೈಬರ್‌ ಪೊಲೀಸರು ಕಂಡುಹಿಡಿದಿದ್ದಾರೆ. ಅದಕ್ಕಾಗಿಯೇ ಅಮಾಯಕರು ವಂಚಕರಿಂದ ಮೋಸಹೋಗದಂತೆ ರಕ್ಷಿಸಲು ಟೆಲಿಕಾಂ ಸಂಸ್ಥೆಗಳು ಅನೇಕ ಸಂಖ್ಯೆಗಳನ್ನು ಬ್ಯಾನ್‌ ಮಾಡಿರುವುದು ದೇಶದಲ್ಲಿ ಇದೇ ಮೊದಲು ಎನ್ನಲಾಗುತ್ತಿದೆ.

ಇದನ್ನೂ ಓದಿ: Save WhatsApp Group Contacts: ವಾಟ್ಸಾಪ್ ಗ್ರೂಪ್ ಕಾಂಟ್ಯಾಕ್ಟ್ ನಂಬರ್ ಒಟ್ಟಿಗೆ ಸೇವ್ ಮಾಡೋದು ತುಂಬಾ ಸುಲಭ; ಇಲ್ಲಿದೆ ಸಿಂಪಲ್ ಟ್ರಿಕ್

ಇದನ್ನೂ ಓದಿ: Google Mapನಲ್ಲಿ ನಿಮ್ಮ ಮನೆಯ ಅಡ್ರೆಸ್‌ ಬದಲಾಯಿಸಬಹುದು! ಹೇಗೆ ಗೊತ್ತೇ?

(VI telecom blocks over 7,948 sim cards due to cyber police notice)

RELATED ARTICLES

Most Popular