ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ(Vinod Kambli) ಸೈಬರ್ ವಂಚಕರ ಜಾಲಕ್ಕೆ ಬಿದ್ದಿದ್ದಾರೆ. ಖಾಸಗಿ ಬ್ಯಾಂಕ್ನ ಎಕ್ಸಿಕ್ಯೂಟಿವ್ ಸೋಗಿನಲ್ಲಿ ಕರೆ ಮಾಡಿದ ವಂಚಕ ವಿನೋದ್ ಕಾಂಬ್ಳಿಯಿಂದ 1.14 ಲಕ್ಷ ರೂಪಾಯಿಗಳನ್ನು ವಂಚಿಸುವಲ್ಲಿ ಯಶಸ್ವಿಯಾಗಿದ್ದಾನೆ. ಕೆವೈಸಿ ಮಾಹಿತಿ ಕೇಳುವ ನೆಪದಲ್ಲಿ ಈ ಹಣವನ್ನು ದೋಚಲಾಗಿದೆ. ಈ ಸಂಬಂಧ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ.
ಬ್ಯಾಂಕ್ ಸಹಾಯದಿಂದ ಬಾಂದ್ರಾ ಠಾಣೆ ಪೊಲೀಸರು ಟಾನ್ಸಾಕ್ಷನ್ನ್ನು ರಿವರ್ಸ್ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ದೂರಿನ ಪ್ರಕಾರ, ವಿನೋದ್ ಕಾಂಬ್ಳೆಗೆ ಖಾಸಗಿ ಬ್ಯಾಂಕ್ನ ಎಕ್ಸಿಕ್ಯೂಟಿವ್ ಎಂದು ಪರಿಚಯ ಮಾಡಿಕೊಂಡ ವಂಚಕ ಕೆವೈಸಿ ಅಪ್ಡೇಟ್ ಮಾಡುವಂತೆ ಕೇಳಿದ್ದಾನೆ. ಕೆವೈಸಿ ಅಪ್ಡೇಟ್ ಮಾಡದೇ ಹೋದಲ್ಲಿ ನಿಮ್ಮ ಕಾರ್ಡ್ ಡಿ ಆ್ಯಕ್ಟಿವೇಟ್ ಆಗಲಿದೆ ಎಂದು ಹೇಳಿದ್ದನಂತೆ.
ಎಕ್ಸಿಕ್ಯೂಟಿವ್ ಮಾತಿನಂತೆಯೇ ಎನಿ ಡೆಸ್ಕ್ ಅಪ್ಲಿಕೇಶನ್ನ್ನು ಕಾಂಬ್ಳಿ ಡೌನ್ಲೋಡ್ ಮಾಡಿದ್ದಾರೆ.ಈ ಆ್ಯಪ್ನ ಸಹಾಯದಿಂದ ಕಾಂಬ್ಳೆ ಬ್ಯಾಂಕಿಂಗ್ ಮಾಹಿತಿಯನ್ನು ವಂಚಕ ಸುಲಭವಾಗಿ ಪಡೆದುಕೊಂಡಿದ್ದ. ಕಾಂಬ್ಳಿ ಫೋನ್ ಕರೆಯಲ್ಲಿ ಇರುವಾಗಲೇ ಖಾತೆಯಲ್ಲಿನ ಹಣ ಡೆಬಿಟ್ ಆಗಿದೆ ಎಂದು ತಿಳಿದುಬಂದಿದೆ.
ಕಾಂಬ್ಳಿಗೆ ತಾನು ವಂಚಕರ ಜಾಲದಲ್ಲಿ ಸಿಲುಕಿದ್ದೇನೆ ಎಂದು ತಿಳಿದ ತಕ್ಷಣ ತಮ್ಮ ಸಿಎಗೆ ಹಾಗೂ ಬ್ಯಾಂಕ್ ಅಧಿಕಾರಿಗಳಿಗೆ ಕರೆ ಮಾಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಸೈಬರ್ ಪೊಲೀಸರು ಹಣವನ್ನು ರಿವರ್ಸ್ ಟ್ರಾನ್ಸಾಕ್ಷನ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಪೊಲೀಸ್ ಅಧಿಕಾರಿಗಳು, ರಿವರ್ಸ್ ಟ್ರಾನ್ಸಾಕ್ಷನ್ ಮೂಲಕ ವಿನೋದ್ ಕಾಂಬ್ಳಿ ಕಳೆದುಕೊಂಡಿದ್ದ ಹಣವನ್ನು ಮರಳಿಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ನಾವು ಯಾವ ಖಾತೆಗೆ ಹಣ ವರ್ಗಾವಣೆಯಾಗಿದೆ ಹಾಗೂ ಯಾವ ನಂಬರ್ನಿಂದ ಫೋನ್ ಕರೆ ಬಂದಿದೆಯೋ ಅವೆಲ್ಲವನ್ನೂ ಪರಿಶೀಲಿಸುತ್ತಿದ್ದೇವೆ. ಕಾಲ್ ರೆಕಾರ್ಡ್ ಕೂಡ ಪಡೆಯಲಾಗಿದೆ. ಇವೆಲ್ಲವನ್ನು ಆಧರಿಸಿ ಶೀಘ್ರದಲ್ಲಿಯೇ ಆರೋಪಿಗಳನ್ನು ಹಿಡಿಯುತ್ತೇವೆ. ಆದರೆ ಕೆವೈಸಿ ದಾಖಲೆಗಳನ್ನು ಒಟಿಪಿಗಳನ್ನು ಯಾವುದೇ ಕಾರಣಕ್ಕೂ ಇನ್ನೊಬ್ಬರ ಜೊತೆಯಲ್ಲಿ ಶೇರ್ ಮಾಡಬೇಡಿ ಎಂದು ಹೇಳಿದ್ರು.
Vinod Kambli loses Rs 1 lakh in online fraud, police recover amount
ಇದನ್ನು ಓದಿ : 4 Members Suicide : ಮಂಗಳೂರಲ್ಲಿ ಘೋರ ದುರಂತ : ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ
ಇದನ್ನೂ ಓದಿ : Gujarat Court :ಅತ್ಯಾಚಾರ ನಡೆದ ಒಂದೇ ತಿಂಗಳಲ್ಲಿ ಆರೋಪಿಗೆ ಶಿಕ್ಷೆ ಪ್ರಕಟಿಸಿದೆ ಈ ನ್ಯಾಯಾಲಯ..!