Xiaomi 11 Youth Vitality Edition: ವಿಶೇಷ ಫೋನ್ ರಿಲೀಸ್ ಮಾಡಿದ ಶವೊಮಿ: ಶವೋಮಿ 11 ಯೂತ್ ವಿಟಾಲಿಟಿ ರೇಂಜ್‌ನಲ್ಲಿ ಏನೇನಿದೆ?

ಸ್ಮಾರ್ಟ್‌ಫೋನ್ ಬ್ರಾಂಡ್‌ಗಳಲ್ಲಿ ನಂ.1 ಸ್ಥಾನದಲ್ಲಿರುವ ಶವೋಮಿ ಈಗಾಗಲೇ ಸಾಕಷ್ಟು ಹೊಸ ಫೀಚರ್ಗಳ ಹೊಸ ಹೊಸ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದಕ್ಕೆ ಹೊಸ ಸೇರ್ಪಡೆ ಶವೋಮಿ 11 ಯೂತ್ ವಿಟಾಲಿಟಿ ಆವೃತ್ತಿ ( Xiaomi 11 Youth Vitality Edition ). ಈ ಫೋನ್ ಹಲವು ವಿಶೇಷತೆ ಗಳಿಂದ ಕೂಡಿದ್ದು, ಡಿಸೆಂಬರ್ 10 ರಂದು ಚೀನಾದಲ್ಲಿ ಬಿಡುಗಡೆ ಆಗಿದೆ. ಇದು ಈಗಾಗಲೇ ಭಾರತದಲ್ಲಿ ಬಿಡುಗಡೆ ಆಗಿರುವ ಶಿಯೋಮಿ 11 ಲೈಟ್ 5ಜಿ ಎನ್ ಇ (Xiaomi 11 Lite 5G NE)ಯ ಅಪ್ ಡೇಟೆಡ್ ವರ್ಷನ್ ಎಂದೂ ಹೇಳಲಾಗುತ್ತದೆ. ( Xiaomi 11 series )


ಡಿಸ್‌ಪ್ಲೇ: 1,080×2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.55 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಯನ್ನು ಶವೋಮಿ 11 ಯೂತ್ ವಿಟಾಲಿಟಿ ಹೊಂದಿದೆ. 
ಕ್ಯಾಮೆರಾ: ಇದು ಟ್ರಿಪಲ್ ರೇರ್ ಕಾಮೆರಾ ಹೊಂದಿದ್ದ64 ಎಂ ಪಿ ಪ್ರೈಮರಿ ಹಾಗೂ 8 ಎಂ ಪಿ ಅಲ್ಟ್ರಾ ವಾಯ್ಡ್ ಶೂಟರ್ 5 ಎಂ ಪಿ ಮ್ಯಾಕ್ರೋ ಶೂಟರ್ ಹೊಂದಿದೆ. ಫ್ರಂಟ್ ಕ್ಯಾಮೆರಾ 20 ಎಂ ಪಿ ಹೊಂದಿದ್ದು ಸೆಲ್ಫಿ ಪ್ರಿಯರಿಗೆ ಇದು ಮೋಸ್ಟ್ ಫೇವರಿಟ್ ಆಗಲಿದೆ.


ಬ್ಯಾಟರಿ: 4250 ಎಂಎಎಚ್ ಬ್ಯಾಟರಿ ಹಾಗೂ 33 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಹೊಂದಿದೆ. ಒಮ್ಮೆ ಚಾರ್ಜ್ ಮಾಡಿದಲ್ಲಿ2 ದಿನಗಳ ವರೆಗೆ ಬ್ಯಾಟರಿ ಬ್ಯಾಕ್ ಅಪ್ ಬರಲಿದೆ ಎಂದು ಕಂಪೆನಿ ತಿಳಿಸಿದೆ.

ಮೆಮೊರಿ:128 ಹಾಗೂ 256 ಇಂಟರ್ನಲ್ ಮೆಮೊರಿ ಸಾಮರ್ಥ್ಯದ ಎರಡು ಮಾಡೆಲ್ ಗಳು ಲಭ್ಯವಿದೆ. ಇದರಿಂದಾಗಿ ಫಿಲ್ಮ್ ಹಾಗೂ ಫೋಟೋ ಗಳನ್ನು ಎಷ್ಟು ಬೇಕಾದರೂ ಸ್ಟೋರ್ ಮಾಡಲು ಸಾಧ್ಯ.

ಕನೆಕ್ಟಿವಿಟಿ:5ಜಿ ಹಾಗೂ4ಜಿ ಎರಡನ್ನೂ ಈ ಫೋನ್ ಸಪೋರ್ಟ್ ಮಾಡುತ್ತಿದ್ದು, ವೈ ಫೈ, ಬ್ಲೂ ಟೂತ್ ಮತ್ತು ಯು ಎಸ್ ಬಿ ಟೈಪ್ ಸಿ ಯನ್ನು ಹೊಂದಿದೆ.

ಇತರ : ಇದು ಆಕ್ಟಾ-ಕೋರ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 778G SoC ಪ್ರೊಸೆಸರ್‌ ಅನ್ನು ಹೊಂದಿದೆ. ಇದರ ಜೊತೆಗೆ ಆಂಡ್ರಾಯ್ಡ್ 11 ನೇ ವರ್ಷನ್‌ನ್ನು ಸ್ಮಾರ್ಟ್‌ಫೋನ್‌ ಹೊಂದಿದೆ.

ಬೆಲೆ: 8 ಜಿಬಿ ರ್ಯಾಮ್ ಹಾಗೂ 128 ಜಿಬಿ ಮೆಮೊರಿ ಹೊಂದಿರುವ ಫೋನ್ ಗೆ 23800 ಹಾಗೂ 8 ಜಿಬಿ ರ್ಯಾಮ್, 256 ಜಿಬಿ ಫೋನ್ ಬೆಲೆ 27300 ಆಗಿದೆ. ಪ್ರಸ್ತುತ ಕಪ್ಪು, ನೀಲಿ, ಗುಲಾಬಿ ಮತ್ತು ಬಿಳಿ ಬಣ್ಣಗಳಲ್ಲಿ ಸ್ಮಾರ್ಟ್‌ಫೋನ್ ಸಿಗಲಿದೆ.

ಇದನ್ನೂ ಓದಿ: Realme Discounts Offers : ರಿಯಲ್‌ ಮಿ ಸ್ಮಾರ್ಟ್‌ಫೋನ್‌ಗೆ ಭರ್ಜರಿ 5 ಸಾವಿರ ಡಿಸ್ಕೌಂಟ್; ಗ್ರಾಹಕರು ಫುಲ್ ಖುಷ್

ಇದನ್ನೂ ಓದಿ : Realme Discounts Offers : ರಿಯಲ್‌ ಮಿ ಸ್ಮಾರ್ಟ್‌ಫೋನ್‌ಗೆ ಭರ್ಜರಿ 5 ಸಾವಿರ ಡಿಸ್ಕೌಂಟ್; ಗ್ರಾಹಕರು ಫುಲ್ ಖುಷ್

( Xiaomi 11 Youth Vitality Edition was launched as the latest model in the Xiaomi 11 series)

Comments are closed.