ಭಾನುವಾರ, ಏಪ್ರಿಲ್ 27, 2025
HomeCrimegangrape : ಆತ್ಮೀಯ ಸ್ನೇಹಿತರಿಂದಲೇ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ

gangrape : ಆತ್ಮೀಯ ಸ್ನೇಹಿತರಿಂದಲೇ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ

- Advertisement -

gangrape :ಯುವತಿಯ ಮೇಲೆ ಆಕೆಯ ಸ್ನೇಹಿತರೇ ಸಾಮೂಹಿಕ ಅತ್ಯಾಚಾರಗೈದ ದಾರುಣ ಘಟನೆಯು ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ನಡೆದಿದೆ. ಭಾನುವಾರದಂದು ಈ ಘಟನೆ ನಡೆದಿದ್ದು ಸೋಮವಾರ ದೂರು ದಾಖಲಾದ ಬಳಿಕ ಆರೋಪಿಗಳನ್ನು ಬಂಧಿಸಲಾಗಿದೆ.

ವರದಿಗಳ ಪ್ರಕಾರ ಸಂತ್ರಸ್ತೆ ಹಾಗೂ ಮೂವರು ಆರೋಪಿಗಳು 21 ರಿಂದ 25 ವರ್ಷದೊಳಗಿನವರಾಗಿದ್ದು ಇವರೆಲ್ಲ ನೆರೆಹೊರೆಯವರಾಗಿದ್ದರು. ಜನವರಿ 2ರಂದು ಸಂಜೆಯ ವೇಳೆಗೆ ಆಕೆ ಮನೆಗೆ ತೆರಳುತ್ತಿದ್ದ ವೇಳೆಯಲ್ಲಿ ಆಕೆಯ ಮೂವರು ಸ್ನೇಹಿತರಲ್ಲಿ ಓರ್ವ ಇಲ್ಲೇ ಪಾರ್ಟಿ ನಡೆಯುತ್ತಿದ್ದು ತಮ್ಮೊಂದಿಗೆ ಪಾರ್ಟಿಯಲ್ಲಿ ಭಾಗಿಯಾಗುವಂತೆ ಕೇಳಿದ್ದಾನೆ. ಹೀಗೆ ಕೇಳಿದ ಯುವಕ ಸಂತ್ರಸ್ತೆಯ ಬೆಸ್ಟ್​ ಫ್ರೆಂಡ್​ ಆಗಿದ್ದ ಎನ್ನಲಾಗಿದೆ.


ಇದಕ್ಕೆ ಯುವತಿ ಒಪ್ಪಿಗೆ ನೀಡುತ್ತಿದ್ದಂತೆಯೇ ಆಕೆಯನ್ನು ಶಿವಾಜಿ ನಗರಕ್ಕೆ ಕರೆದುಕೊಂಡು ಹೋಗಲಾಗಿದೆ. ಇಲ್ಲಿ ಆಕೆಯ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ್ದು ಮಾತ್ರವಲ್ಲದೇ ಒಡೆದ ಬಿಯರ್​ ಬಾಟಲಿಯನ್ನು ತೋರಿಸಿ ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ ಎನ್ನಲಾಗಿದೆ. ಮೂವರು ಪಾನಮತ್ತರಾಗಿದ್ದರು. ಆಕೆ ಸ್ಥಳದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ಆಕೆಯನ್ನು ತಡೆದ ಮೂವರು ಆರೋಪಿಗಳು 2 ಗಂಟೆಗೂ ಅಧಿಕ ಕಾಲ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.


ಈ ಘಟನೆ ಬಳಿಕ ಮನೆಗೆ ತೆರಳಿದ ಯುವತಿಯು ತನಗಾದ ಅನುಭವದ ಬಗ್ಗೆ ಕುಟುಂಬಸ್ಥರ ಮುಂದೆ ಹೇಳಿಕೊಂಡಿದ್ದಾಳೆ. ಬಳಿಕ ಪೊಲೀಸ್​ ಠಾಣೆಯಲ್ಲಿ ಯುವತಿಯ ಪೋಷಕರು ದೂರನ್ನು ದಾಖಲಿಸಿದ್ದಾರೆ. ಈ ಪ್ರಕರಣವನ್ನು ಭೇದಿಸಲು ಪೊಲೀಸರು ಮೂರು ವಿಶೇಷ ತಂಡವನ್ನು ರಚಿಸಿದ್ದರು. ಸೋಮವಾರ ಬೆಳಗ್ಗೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಹಿರಿಯ ಪೊಲೀಸ್​ ಅಧಿಕಾರಿ ಎಂ ಭೋಗೆ ಮಾಹಿತಿ ನೀಡಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್​ 376ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.


ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ಪ್ರತ್ಯೇಕ ಘಟನೆಯೊಂದರಲ್ಲಿ ಪುರುಷ ಸ್ನೇಹಿತರ ಜೊತೆ ಇದ್ದ ಇಬ್ಬರು ಅಪ್ರಾಪ್ತ ಬಾಲಕಿಯರ ಎದುರು ಪೊಲೀಸರಂತೆ ನಟಿಸಿದ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ್ದಾನೆ. ಆರೋಪಿಯನ್ನು 35 ವರ್ಷದ ವಿ. ರಾಮಬಾಬು ಎಂದು ಗುರುತಿಸಲಾಗಿದೆ. ಈ ಸಂಬಂಧ ಕುರುಪಾಂ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

Woman, 21, gangraped by drunk friend, two others in Maharashtra’s Ambernath

ಇದನ್ನು ಓದಿ : Worker vandalises company: ಸಂಬಳ ಕೊಡದ ಕಂಪನಿ ಉಪಕರಣ ಧ್ವಂಸ ಮಾಡಿದ ನೌಕರ

ಇದನ್ನೂ ಓದಿ : cop steal Goats : ಭರ್ಜರಿ ಬಾಡೂಟಕ್ಕೆ ಎರಡು ಮೇಕೆಕದ್ದು ಸಿಕ್ಕಿಬಿದ್ದ ಎಎಸ್‌ಐ ಸಸ್ಪೆಂಡ್‌

RELATED ARTICLES

Most Popular