Karnataka Covid Updates : ಕರ್ನಾಟಕದಲ್ಲಿ ಕೊರೊನಾ ಸ್ಫೋಟ : 2,479 ಪ್ರಕರಣ ದಾಖಲು, ಪಾಸಿಟಿವಿಟಿ ರೇಟ್‌ 2.59%ಕ್ಕೆ ಏರಿಕೆ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಮಹಾಸ್ಪೋಟ ( Karnataka Covid Updates ) ಸಂಭವಿಸಿದೆ. ಇಂದು ಒಟ್ಟು 2,479 ಹೊಸ ಪ್ರಕರಣ ದಾಖಲಾಗಿದ್ದು, ನಾಲ್ವರು ಬಲಿಯಾಗಿದ್ದಾರೆ. ಸತತ ಮೂರು ದಿನಗಳಿಂದ ಸಾವಿರಕ್ಕೂ ಅಧಿಕ ಪ್ರಕರಣ ದಾಖಲಾಗುತ್ತಿದ್ದು, ಇಂದು ಸೋಂಕಿತರ ಸಂಖ್ಯೆ ಎರಡು ಸಾವಿರದ ಗಡಿದಾಟಿದೆ. ಇನ್ನು ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿಯೇ ಬರೋಬ್ಬರಿ 2,053 ದಾಖಲಾಗಿದ್ದು, ಮೂರನೇ ಅಲೆಯ ಆತಂಕ ಶುರುವಾಗಿದೆ.

ರಾಜ್ಯದಲ್ಲಿಂದು ಒಟ್ಟು 95,391 ಜನರಿಗೆ ಟೆಸ್ಟ್‌ ಮಾಡಿಸಲಾಗಿದ್ದು, ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ.2.59ಕ್ಕೆ ಏರಿಕೆ ಕಂಡಿದೆ. ಆದರೆ ರಾಜ್ಯದಲ್ಲಿ ಯಾವುದೇ ಓಮಿಕ್ರಾನ್‌ ಪ್ರಕರಣ ದಾಖಲಾಗಿಲ್ಲ. ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಕೇರಳದಲ್ಲಿ ಕೊರೊನಾ ಮಹಾಸ್ಪೋಟದ ಜೊತೆಗೆ ಓಮಿಕ್ರಾನ್‌ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿದೆ. ಇದೀಗ ಕರ್ನಾಟಕದಲ್ಲಿಯೂ ಸತತವಾಗಿ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ.

ರಾಜ್ಯದಲ್ಲಿ ಡಿಸೆಂಬರ್‌ 27ರಂದು 289 ಪ್ರಕರಣ ದಾಖಲಾಗಿದ್ರೆ ಜನವರಿ 1 ರಂದು 1033 ಪ್ರಕರಣ ದಾಖಲಾಗಿತ್ತು. ಇದೀಗ ಜನವರಿ ೪ರಂದು ಬರೋಬ್ಬರಿ 2479 ಪ್ರಕರಣ ಪತ್ತೆಯಾಗಿದೆ. ಪ್ರತೀ ಎರಡರಿಂದ ಮೂರು ದಿನಗಳಿಗೆ ಒಮ್ಮೆ ಕೊರೊನಾ ಸೋಂಕಿತ ಪ್ರಕರಣ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಈಗಾಗಲೇ ಆರೋಗ್ಯ ಸಚಿವ ಸುಧಾಕರ್‌ ಅವರು ರಾಜ್ಯದಲ್ಲಿ ಮೂರನೇ ಅಲೆಯ ಆರಂಭವಾಗಿದೆ ಎಂದು ಹೇಳಿಕೆ ನೀಡಿದ್ದರು. ಇನ್ನೊಂದೆಡೆಯಲ್ಲಿ ತಜ್ಞರು ಜನವರಿ ಅಂತ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಭಾರೀ ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.

ರಾಜ್ಯಕ್ಕೆ ಮೂರನೆ ಅಲೆಯ ಎಂಟ್ರಿಯಾಗಿದೆ : ಸಚಿವ ಡಾ.ಸುಧಾಕರ್

ಬೆಂಗಳೂರು : ರಾಜ್ಯದಲ್ಲಿ ಓಮೈಕ್ರಾನ್ ಹಾಗೂ ಕೊರೋನಾ ಪ್ರಕರಣಗಳಲ್ಲಿ ಏರಿಕೆಯಾಗುತ್ತಿರುವ ಬೆನ್ನಲ್ಲೇ ರಾಜ್ಯದ ಆರೋಗ್ಯ ಸಚಿವ ಡಾ.ಸುಧಾಕರ್ ಆತಂಕಕಾರಿ ಹೇಳಿಕೆಯೊಂದನ್ನು ನೀಡಿದ್ದು, ರಾಜ್ಯಕ್ಕೆ ಕೊರೋನಾ ಮೂರನೇ ಅಲೆ ( corona 3rd wave ) ಕಾಲಿಟ್ಟಿದೆ. ಹೀಗಾಗಿ ಸತತವಾಗಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ನಾವು ಮೂರನೆ ಅಲೆಯ ಪ್ರಾರಂಭದಲ್ಲಿ ಇದ್ದೇವೆ. ಹೀಗಾಗಿ ಇಂದು ನಡೆಯಲಿರುವ ಸಭೆಯಲ್ಲಿ ಚರ್ಚೆ ನಡೆಸಿ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಹಾಗೂ ಶಾಲಾ ಕಾಲೇಜುಗಳ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ ಎಂದಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಆರೋಗ್ಯ ಸಚಿವ ಕೆ ಸುಧಾಕರ್ , ದಿನೇ ದಿನೇ ಒಮಿಕ್ರಾನ್ ಹೆಚ್ಚಾಗ್ತಿದೆ. ನಿನ್ನೆ ಒಂದೇ ದಿನ ಕೊರೋನಾ ಪಾಸಿಟಿವಿಟಿ ದರ 1.60 ಪರ್ಸೆಂಟ್ ಜಾಸ್ತಿ ಆಗಿದೆ. ಒಂದೇ ದಿನದಲ್ಲಿ 1290 ಕೇಸ್ ಪತ್ತೆ ಆಗಿದೆ. ಅದರಲ್ಲಿ 90 ಪರ್ಸೆಂಟ್ ಬೆಂಗಳೂರಿನಲ್ಲಿ ಪತ್ತೆಯಾಗಿದೆ. ಹೀಗಾಗಿ ಬೆಂಗಳೂರಲ್ಲಿ ಇನ್ನಷ್ಟು ನಿಗಾ ವಹಿಸಿದ್ದೇವೆ ಎಂದು ವಿವರಣೆ ನೀಡಿದ್ದಾರೆ. ಇಂದು ತಜ್ಞರ ಜೊತೆ ಸಿಎಂ ಕೂಡ ಮಾತನಾಡಲಿದ್ದು ಏನೆಲ್ಲಾ ಕ್ರಮ ಕೈಗೊಳ್ಳಬೇಕು. ಯಾವ ರೀತಿ ನಿಯಂತ್ರಣ ಮಾಡಬೇಕು ಎಂದು ತೀರ್ಮಾನ ಮಾಡುತ್ತೇವೆ. ಒಮಿಕ್ರಾನ್ ಬಹಳ ವೇಗವಾಗಿ ಹರಡುತ್ತಿದೆ. ಹೀಗಾಗಿ ತುರ್ತುಕ್ರಮದ ಅಗತ್ಯವಿದೆ.

ಭಾರತದಲ್ಲಿ ಹೊಸ ವರ್ಷದಲ್ಲಿ ಪ್ರಕರಣ ಹೆಚ್ಚಿದ್ದು ನೆರೆಯ ಮಹಾರಾಷ್ಟ್ರ ದಲ್ಲಿ ಈಗಾಗಲೇ ಪ್ರಕರಣಗಳ ಸಂಖ್ಯೆ ಮೀತಿಮೀರಿದೆ.ದೆಹಲಿಯಲ್ಲಿ ಕೂಡ ಕೇಸ್ ಜಾಸ್ತಿ ಆಗಿದೆ. ಈ ನಿಟ್ಟಿನಲ್ಲಿ ಎಚ್ಚರ ಕ್ರಮ ಅವಶ್ಯಕತೆ ಇದೆ.ಹೀಗಾಗಿ ಇವತ್ತೇ ಏನೆಲ್ಲಾ‌ ಬಿಗಿ ಕ್ರಮ ಮಾಡಬೇಕು ಎಂದು ಚರ್ಚಿಸಿ ತೀರ್ಮಾನ ಮಾಡ್ತೇವೆ ಎಂದಿದ್ದಾರೆ. ಇನ್ನು ಕೊರೋನಾದಂತಹ ಸಂದಿಗ್ಧ ಸ್ಥಿತಿಯಲ್ಲೂ ಕಾಂಗ್ರೆಸ್ ಪಾದಯಾತ್ರೆಗೆ‌ಮುಂದಾಗಿದೆ.ಪಾದಯಾತ್ರೆ ಗೆ ಬೇರೆ ಬೇರೆ ಜಿಲ್ಲೆ ಗಳಿಂದ ಜನರು ಬರ್ತಾರೆ. ಅಲ್ಲಿ ಜನರು ಒಟ್ಟಾಗಿ ಸೇರಿದಾಗ ಕೊವೀಡ್ ಸ್ಪೋಟ ಆದರೆ, ಅದರ ಹೊಣೆಯನ್ನು ಕಾಂಗ್ರೆಸ್ ನಾಯಕರೇ ಹೊರಬೇಕಾಗುತ್ತದೆ ಎಂದು ಸುಧಾಕರ್ ಎಚ್ಚರಿಸಿದ್ದಾರೆ.

ಆದರೆ ಸರ್ಕಾರ ಈ ರ್ಯಾಲಿ ಬಗ್ಗೆ ತೀರ್ಮಾನ ಮಾಡಲಿದೆ ಎಂದಿರುವ ಡಾ.ಸುಧಾಕರ್,ಕೊವೀಡ್ ಹೆಚ್ಚಾಗಿರುವ ಇಂತಹ ಸಂದರ್ಭದಲ್ಲಿ ರ್ಯಾಲಿ, ಸಭೆ, ಅಗತ್ಯ ಇದೆಯಾ ಹೇಗೆ ಎಂಬುದರ ಬಗ್ಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ. ಅನೇಕ ರಾಜ್ಯಗಳಲ್ಲಿ ಶಾಲಾ-ಕಾಲೇಜುಗಳು ರಜೆ ನೀಡಲಾಗಿದೆ.ನಮ್ಮಲ್ಲಿ ಈ ಬಗ್ಗೆ ಇವತ್ತಿನ ಸಭೆಯಲ್ಲಿ ಚರ್ಚೆ ಮಾಡ್ತೀವಿ. ನಿನ್ನೆಯಿಂದ 15-18 ವರ್ಷದ ಮಕ್ಕಳಿಗೆ ಲಸಿಕೆ ನೀಡಲಾಗ್ತಿದೆ.ನಿನ್ನೆ ಒಂದೇ ದಿನ 4,22,152 ಮಕ್ಕಳಿಗೆ ಲಸಿಕೆ ಕೊಡಲಾಗಿದೆ.66% ಮೊದಲ ದಿನ ಲಸಿಕೆ ಸಾಧನೆ ಮಾಡಿದ್ದೇವೆ.ದೇಶದಲ್ಲಿ ‌ನಾವು 4 ನೇ ಸ್ಥಾನದಲ್ಲಿ ಇದ್ದೇವೆ.10-15 ದಿನಗಳಲ್ಲಿ ಎಲ್ಲಾ ಮಕ್ಕಳಿಗೆ ಲಸಿಕೆ ಪೂರ್ಣ ಮಾಡ್ತೀವಿ.

ಕೇಂದ್ರ ಸದ್ಯ ಒಂದು ಡೋಸ್ ಮಾತ್ರ ಕೊಡಲು ಹೇಳಿದೆ.ಎರಡನೇ ಡೋಸ್ ಕೊಡಲು ಹೇಳಿದ ನಂತ್ರ ಎರಡನೇ ಡೋಸ್ ಪ್ರಾರಂಭ ಮಾಡ್ತೀವಿ ಎಂದು ವಿವರಣೆ ನೀಡಿದ್ದಾರೆ. ನಿನ್ನೆ ಒಂದೇ ದಿನ 1290 ಕೇಸ್ ಬಂದಿದೆ. ಇದ್ರಲ್ಲಿ 90% ಬೆಂಗಳೂರಿನಿಂದ ದಾಖಲಾಗಿದೆ.ಬೆಂಗಳೂರಿನಲ್ಲಿ ಕೇಸ್ ಹೆಚ್ಚಳ ಹಿನ್ನಲೆ ವಿಶೇಷ ಕ್ರಮ ತೆಗೆದುಕೊಳ್ತೀವಿ. ಏರ್‌ಪೋರ್ಟ್ ಸೇರಿದಂತೆ ಎಲ್ಲಾ ಕಡೆ ಹೆಚ್ಚು ನಿಗಾ ಇಡ್ತೀವಿ.ಬೆಂಗಳೂರಿನಲ್ಲಿ ಮೈಕ್ರೋ ಜೋನ್ ಹೆಚ್ಚಳ ಮಾಡ್ತೀವಿ.ಇಂದಿನ ಸಿಎಂ ಸಭೆಯಲ್ಲಿ ಚರ್ಚೆ ಮಾಡಿ ಕ್ರಮದ ಬಗ್ಗೆ ತೀರ್ಮಾನ ಮಾಡ್ತೀವಿ ಎಂದು ಸುಧಾಕರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಬರೋಬ್ಬರಿ 4 ತಿಂಗಳ ಬಳಿಕ ದೇಶದಲ್ಲಿ ಅತಿ ಹೆಚ್ಚು ದೈನಂದಿನ ಕೋವಿಡ್​ ಕೇಸ್​ ವರದಿ

ಇದನ್ನೂ ಓದಿ : ಫ್ರಾನ್ಸ್​​ನಲ್ಲಿ ಮತ್ತೊಂದು ಹೊಸ ರೂಪಾಂತರಿ ಪತ್ತೆ; 12 ಮಂದಿಗೆ ಸೋಂಕು

( Karnataka Covid Updates : 2479 new Covid 19 cases found in Karnataka 4th January 2022 )

Comments are closed.